ಇದೊಂದು ಕಾರ್ಡ್ ನಿಮ್ಮತ್ರ ಇದ್ರೆ ಸಾಕು ಸಿಗಲಿದೆ 2 ಲಕ್ಷ ರೂಪಾಯಿ ಬೆನಿಫಿಟ್! ಬಂಪರ್ ಅವಕಾಶ
ಈಗಾಗಲೇ ಕೋಟ್ಯಾಂತರ ಜನರು ಇಶ್ರಮ್ ಕಾರ್ಡ್ ಮಾಡಿಸಿಕೊಂಡು ಅದರ ಸೌಲಭ್ಯ ಪಡೆಯುತ್ತಿದ್ದಾರೆ. ಈ ಕಾರ್ಡ್ ಹೊಂದಿರುವ ಜನರಿಗೆ ಪ್ರತಿ ತಿಂಗಳು ಪೆನ್ಶನ್ (Pension) ಬರುವುದರ ಜೊತೆಗೆ 2 ಲಕ್ಷದವರೆಗೂ ಅಪಘಾತ ವಿಮೆ ಕೂಡ ಸಿಗುತ್ತದೆ.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ನಮ್ಮ ದೇಶದಲ್ಲಿ ಕಷ್ಟಪಡುತ್ತಿರುವ ಜನರಿಗೆ ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ, ಈಗಲೂ ತರುತ್ತಲಿದೆ. ಅದರಲ್ಲೂ ಕಾರ್ಮಿಕ ವರ್ಗದವರು ಹಾಗೂ ಬಡತನದಲ್ಲಿ ಇರುವವರಿಗಾಗಿ ಬಹಳಷ್ಟು ಯೋಜನೆಗಳನ್ನು, ಸೌಲಭ್ಯಗಳನ್ನು ಜಾರಿಗೆ ತಂದಿದೆ.
ಆ ನಿಟ್ಟಿನಲ್ಲಿ ಅಸಂಘಟಿತ ವಲಯದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುವವರಿಗಾಗಿ E-shram Card ಸೌಲಭ್ಯವನ್ನು ಜಾರಿಗೆ ತಂದಿದೆ.. ಹೌದು, ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರು, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವವರು ಇಶ್ರಮ್ ಕಾರ್ಡ್ ಮಾಡಿಸಿಕೊಳ್ಳಬಹುದು.
ಈ ಒಂದು ಕಾರ್ಡ್ ನಿಮ್ಮ ಬಳಿ ಇದ್ದರೆ, ಸರ್ಕಾರದ ಹಲವು ಸೌಲಭ್ಯಗಳು ನಿಮಗೆ ಸಿಗುತ್ತದೆ. ಈಗಾಗಲೇ ಕೋಟ್ಯಾಂತರ ಜನರು ಇಶ್ರಮ್ ಕಾರ್ಡ್ ಮಾಡಿಸಿಕೊಂಡು ಅದರ ಸೌಲಭ್ಯ ಪಡೆಯುತ್ತಿದ್ದಾರೆ. ಈ ಕಾರ್ಡ್ ಹೊಂದಿರುವ ಜನರಿಗೆ ಪ್ರತಿ ತಿಂಗಳು ಪೆನ್ಶನ್ (Pension) ಬರುವುದರ ಜೊತೆಗೆ 2 ಲಕ್ಷದವರೆಗೂ ಅಪಘಾತ ವಿಮೆ (Insurance) ಕೂಡ ಸಿಗುತ್ತದೆ.
ದುಬೈನಲ್ಲಿ ಚಿನ್ನದ ಬೇಲೆ ಸಿಕ್ಕಾಪಟ್ಟೆ ಕಡಿಮೆ, ಆದ್ರೆ ಅಲ್ಲಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?
ಇಶ್ರಮ್ ಕಾರ್ಡ್ ಇಂದ ಹೆಚ್ಚು ಲಾಭ:
ಇಶ್ರಮ್ ಕಾರ್ಡ್ ಒಂದನ್ನು ಮಾಡಿಸಿಕೊಂಡರೆ, ನೀವು ಸೆಪರೇಟ್ ಆಗಿ ವಿಮೆ ಮಾಡಿಸುವ ಅಗತ್ಯವೇ ಬರುವುದಿಲ್ಲ. ಇದೊಂದು ಕಾರ್ಡ್ ಇದ್ದರೆ ಸಾಕು, ಅಕಸ್ಮಾತ್ ಇಶ್ರಮ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಅಪಘಾತ ಉಂಟಾದರೆ, ಇಶ್ರಮ್ ಕಾರ್ಡ್ ಬಳಸಿ 2 ಲಕ್ಷದವರೆಗು ವಿಮೆಯ (Insurance) ಸೌಲಭ್ಯ ಪಡೆದುಕೊಳ್ಳಬಹುದು. ಕಾರ್ಮಿಕರಾಗಿರುವವರು ಹಾಗೂ ಅಸಂಘಟಿತ ವಲಯದಲ್ಲಿ ಕೆಲಸ ಮಾಡುಗ ಯಾರೇ ಆಗಿದ್ದರು ಕೂಡ, ಇಶ್ರಮ್ ಕಾರ್ಡ್ ಅನ್ನು ಮಾಡಿಸಿಕೊಳ್ಳಬಹುದು.
ಇಶ್ರಮ್ ಕಾರ್ಡ್ ಇರುವವರಿಗೆ ಮುಖ್ಯವಾಗಿ ಸಿಗುವ ಸೌಲಭ್ಯಗಳು ಏನೇನು ಎಂದು ನೋಡುವುದಾದರೆ, ಕಾರ್ಮಿಕರಿಗೆ 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ಅವರಿಗೆ ₹3000 ರೂಪಾಯಿ ಪೆನ್ಶನ್ ಬರುತ್ತದೆ. ಹಾಗೆಯೇ ಅಪಘಾತವಾಗಿ ಯಾವುದೇ ಅಂಗಾಂಗದ ವೈಫಲ್ಯತೆ ಉಂಟಾದರೆ, ಅದಕ್ಕೆ 1 ಲಕ್ಷದವರೆಗೂ ಸರ್ಕಾರದ ವಿಮೆ ಸಿಗುತ್ತದೆ, ಅಕಸ್ಮಾತ್ ಆ ವ್ಯಕ್ತಿ ಮರಣ ಹೊಂದಿದರೆ, 2 ಲಕ್ಷದವರೆಗೂ ವಿಮೆಯ ಸೌಲಭ್ಯ ಸಿಗುತ್ತದೆ. ಈ ಎಲ್ಲಾ ವಿಶೇಷ ಸೌಲಭ್ಯಗಳು ಸಿಗಬೇಕು ಎಂದರೆ, ಇಶ್ರಮ್ ಕಾರ್ಡ್ ಮಾಡಿಸಿಕೊಂಡಿರಬೇಕು.
ಸ್ಟೇಟ್ ಬ್ಯಾಂಕಿನಲ್ಲಿ ಯಾವುದೇ ಸಾಲ ಮಾಡಿದ್ರೆ ಇಲ್ಲಿದೆ ಬಿಗ್ ಅಪ್ಡೇಟ್! ಬಡ್ಡಿದರ ಧಿಡೀರ್ ಬದಲಾವಣೆ
ಇಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
ಒಂದು ವೇಳೆ ನೀವು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಾದರೆ, ನೀವು ಇಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಇಷ್ಟು ದಿವಸಗಳ ಕಾಲ 59 ವರ್ಷಗಳ ಮಿತಿಯನ್ನು ಇಡಲಾಗಿತ್ತು ಆದರೆ ಈಗ ಇಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ವಯೋಮಿತಿಯನ್ನು ಏರಿಸಲಾಗಿದ್ದು, 70 ವರ್ಷಗಳವರೆಗು ವಯೋಮಿತಿಯನ್ನು ಹೆಚ್ಚಿಸಲಾಗಿದೆ. ಇದು ಜನರಿಗೆ ಗುಡ್ ನ್ಯೂಸ್ ಆಗಿದ್ದು, ಇಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದಕ್ಕೆ ನಿಮ್ಮ ಹತ್ತಿರದ Common Service Center – CSC ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ನಿಮ್ಮ ಮನೆಯಲ್ಲಿ ಒಟ್ಟು ಎಷ್ಟು ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು? ಇಡಬಹುದಾದ ಲಿಮಿಟ್ ಎಷ್ಟು ಗೊತ್ತಾ?
If you own this card, you will get a benefit of 2 lakh rupees