State Bank Fixed Deposit : SBI ನಮ್ಮ ದೇಶದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಪ್ರಮುಖ ಸರ್ಕಾರಿ ವಲಯದ ಬ್ಯಾಂಕ್. ಈ ಬ್ಯಾಂಕ್ ಇಂದ ಜನರಿಗೆ ಬಹಳಷ್ಟು ಅನುಕೂಲ ಸಿಗುವಂಥ ಸೇವೆಗಳು ಲಭ್ಯವಾಗುತ್ತಿದೆ. ಅವುಗಳನ್ನು ಜನರು ಕೂಡ ಪಡೆಯುತ್ತಿದ್ದಾರೆ, SBI ನಲ್ಲಿ FD ಯೋಜನೆಗಳ ಮೇಲೆ ಒಳ್ಳೆಯ ರಿಟರ್ನ್ಸ್ ಇದೆ.
ನೀವು ಎಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತೀರೋ ಅದರ ಮೇಲೆ ಉತ್ತಮವಾದ ರಿಟರ್ನ್ಸ್ ಸಿಗುತ್ತದೆ. ಅದರಲ್ಲೂ ಹಿರಿಯ ನಾಗರೀಕರಿಗೆ SBI ಯೋಜನೆಯ ಅಡಿಯಲ್ಲಿ ಉತ್ತಮವಾದ ಸೇವೆಗಳು ಲಭ್ಯವಿದೆ.
SBI ನಲ್ಲಿ Fixed Deposit ಮಾಡುವವರಿಗೆ ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಈ ಅವಧಿಯಲ್ಲಿ ನೀವು ನಿಮ್ಮ ಬಳಿ ಇರುವ ಮೊತ್ತವನ್ನು FD ಮಾಡಿ ಇಡಬಹುದು, ಇದಕ್ಕೆ ಉತ್ತಮವಾದ ರಿಟರ್ನ್ಸ್ ಕೂಡ ಪಡೆಯಬಹುದು.
ಸಾಮಾನ್ಯ ಜನರಿಗೂ ಇಲ್ಲಿ ಒಳ್ಳೆಯ ರಿಟರ್ನ್ಸ್ ಸಿಗುತ್ತದೆ, ಹಾಗೆಯೇ ಹಿರಿಯ ನಾಗರೀಕರಿಗೆ ಇನ್ನು ಹೆಚ್ಚು ಬಡ್ಡಿದರ ನಿಗದಿ ಆಗಿರುತ್ತದೆ. ಹಾಗಿದ್ದಲ್ಲಿ ಇಂದು ಕೆಲವು FD ಯೋಜನೆಗಳ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ.. ಇದರಿಂದ ನೀವು ಹೆಚ್ಚು ಲಾಭ ಪಡೆಯಬಹುದು.
1963ರಲ್ಲಿ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ? 61 ವರ್ಷಗಳ ಹಿಂದಿನ ಪೆಟ್ರೋಲ್ ಬಿಲ್ ಈಗ ವೈರಲ್
SBI FD ಮೇಲೆ ಹೆಚ್ಚು ಬಡ್ಡಿದರ:
ಒಂದು ವೇಳೆ SBI ನಲ್ಲಿ 40 ಸಾವಿರ ಅಥವಾ 80 ಸಾವಿರ ರೂಪಾಯಿಗಳನ್ನು FD ಹೂಡಿಕೆ ಮಾಡುತ್ತೀರಿ ಎಂದರೆ, ಅದರ ಮೇಲೆ ಎಷ್ಟು ಬಡ್ಡಿದರ ಬೀಳುತ್ತದೆ ಎಂದು ನೋಡುವುದಾದರೆ, 40 ಸಾವಿರ ರೂಪಾಯಿಗಳನ್ನು 1 ವರ್ಷಕ್ಕೆ FD ಮಾಡಿದರೆ 6.8% ಬಡ್ಡಿ ಸಿಗಲಿದ್ದು, ಮೆಚ್ಯುರಿಟಿ ವೇಳೆಗೆ ₹42,790 ರೂಪಾಯಿ ಪಡೆಯುತ್ತೀರಿ.
2,790 ರೂಪಾಯಿ ಬಡ್ಡಿಯ ಮೂಲಕ ಸಿಗುತ್ತದೆ. ಇದೇ ಮೊತ್ತವನ್ನು 3 ವರ್ಷಕ್ಕೆ FD ಮಾಡಿದರೆ, 6.75% ಬಡ್ಡಿ ಸಿಗಲಿದ್ದು, ಮೆಚ್ಯುರಿಟಿ ವೇಳೆಗೆ ₹48,896 ರೂಪಾಯಿ ಸಿಗಲಿದೆ, ಇಲ್ಲೊ 8,896 ರೂಪಾಯಿ ಬಡ್ಡಿ ರೂಪದಲ್ಲಿ ಪಡೆಯುತ್ತೀರಿ.
ಇನ್ನು 5 ವರ್ಷಕ್ಕೆ ಇದೇ ಮೊತ್ತ ಹೂಡಿಕೆ ಮಾಡಿದರೆ, 6.5% ಬಡ್ಡಿ ಇರಲಿದ್ದು, ಮೆಚ್ಯುರಿಟಿ ಅವಧಿಗೆ ₹55,217 ರೂಪಾಯಿ ರಿಟರ್ನ್ಸ್ ಬರುತ್ತದೆ. ₹15,217 ರೂಪಾಯಿ ಹೆಚ್ಚುವರಿಯಾಗಿ ಪಡೆಯುತ್ತೀರಿ. ಇನ್ನು 1 ವರ್ಷಕ್ಕೆ 80 ಸಾವಿರ FD ಮಾಡಿದರೆ, 6.8% ಬಡ್ಡಿದರದಲ್ಲಿ ಮೆಚ್ಯುರಿಟಿ ವೇಳೆಗೆ ₹85,590 ರೂಪಾಯಿ ರಿಟರ್ನ್ಸ್ ಬರುತ್ತದೆ.
2 ವರ್ಷಕ್ಕಿಂತಲೂ ಹೆಚ್ಚಾಗಿ PhonePe ಬಳಕೆ ಮಾಡಿದ್ರೆ, ನಿಮಗೆ ಸಿಗಲಿದೆ 5 ಲಕ್ಷ ಪರ್ಸನಲ್ ಲೋನ್!
ಇಲ್ಲಿ ₹5,590 ರೂಪಾಯಿ ಬಡ್ಡಿ ಪಡೆಯುತ್ತೀರಿ. 80 ಸಾವಿರವನ್ನು3 ವರ್ಷಕ್ಕೆ FD ಮಾಡಿದರೆ, 6.75% ಬಡ್ಡಿದರದಲ್ಲಿ ₹97,791 ರೂಪಾಯಿ ರಿಟರ್ನ್ಸ್ ಬರುತ್ತದೆ, ₹17,791 ರೂಪಾಯಿ ಬಡ್ಡಿ ಸಿಗುತ್ತದೆ. 80 ಸಾವಿರವನ್ನು 5 ವರ್ಷಕ್ಕೆ FD ಮಾಡಿದರೆ, 6.5% ಬಡ್ಡಿದರ ಇರಲಿದ್ದು, ಮೆಚ್ಯುರಿಟಿ ವೇಳೆಗೆ ₹1,10,434 ರೂಪಾಯಿ ಸಿಗುತ್ತದೆ. ಇದರಲ್ಲಿ ₹30,434 ರೂಪಾಯಿ ಬಡ್ಡಿ ರೂಪದಲ್ಲಿ ಸಿಗುತ್ತದೆ.
ದುಬೈನಲ್ಲಿ ಚಿನ್ನದ ಬೇಲೆ ಸಿಕ್ಕಾಪಟ್ಟೆ ಕಡಿಮೆ, ಆದ್ರೆ ಅಲ್ಲಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?
ಇದು ಸಾಮಾನ್ಯ ಜನರಿಗೆ ಸಿಗುವ ಬಡ್ಡಿದರ ಆಗಿದ್ದು, ಹಿರಿಯ ನಾಗರೀಕರಿಗೆ ಎಷ್ಟು ಬಡ್ಡಿದರ ನಿಗದಿ ಆಗಿದೆ ಎಂದು ನೋಡುವುದಾದರೆ, ಹಿರಿಯರಿಗೆ 1 ವರ್ಷದ FD ಗೆ 7.30% ಬಡ್ಡಿ ಸಿಗುತ್ತದೆ, 3 ವರ್ಷಕ್ಕೆ 7.25% ಬಡ್ಡಿ ಸಿಗುತ್ತದೆ, 5 ವರ್ಷಕ್ಕೆ 7.50% ಬಡ್ಡಿ ಸಿಗುತ್ತದೆ.
ಇದರ ಜೊತೆಗೆ ಹಿರಿಯ ನಾಗರೀಕರಿಗೆ ಆದಾಯ ತೆರಿಗೆ ಕೂಡ ಇರುವುದಿಲ್ಲ. ಹಾಗಾಗಿ ಹಿರಿಯ ನಾಗರೀಕರಿಗೆ ಇದು ಉತ್ತಮ ಎಂದು ಹೇಳಬಹುದು.
How much interest do you get for 40 thousand to 80 thousand fixed Deposit in State Bank
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.