Canara Bank Loan : ನಮಗೆ ಯಾವಾಗಾಲಾದರು ಹಣದ ಅವಶ್ಯಕತೆ ಬಂದಾಗ ಬ್ಯಾಂಕ್ ನಲ್ಲಿ ಲೋನ್ (Bank Loan) ಮೊರೆ ಹೋಗುತ್ತೇವೆ. ತುರ್ತು ಖರ್ಚು ಬಂದಾಗ ಸಾಮಾನ್ಯವಾಗಿ ನಾವೆಲ್ಲರೂ ಪರ್ಸನಲ್ ಲೋನ್ (Personal Loan) ತೆಗೆದುಕೊಳ್ಳುತ್ತೇವೆ. ನಮ್ಮ ದೇಶದಲ್ಲಿ ಇರುವ ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ ಗ್ರಾಹಕರಿಗೆ ಪರ್ಸನಲ್ ಲೋನ್ ಸಿಗುತ್ತದೆ.

ಪರ್ಸನಲ್ ಲೋನ್ ಎಲ್ಲಾ ಬ್ಯಾಂಕ್ ಗಳಲ್ಲಿ ಸಿಗುತ್ತದೆ ಆದರೂ ಹೆಚ್ಚು ಬಡ್ಡಿ ಇರುತ್ತದೆ, ಅಂಥ ಸಮಯದಲ್ಲಿ ಹೆಚ್ಚು ಬಡ್ಡಿಯನ್ನು ಸಾಲದ ರೂಪದಲ್ಲಿ ಕಟ್ಟುವುದು ಕಷ್ಟ ಆಗುತ್ತದೆ.

Canara Bank Job

ನಾವು ಸಾಲ ಪಡೆಯುವ ಸಂದರ್ಭ ಬಂದಾಗ, ಯಾವ ಬ್ಯಾಂಕ್ ನಲ್ಲಿ ಕಡಿಮೆ ಬಡ್ಡಿ ಇರುತ್ತದೆಯೋ ಆ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಳ್ಳುವುದು ಒಳ್ಳೆಯದು. ಆಗ ನಿಮ್ಮ ಮೇಲೆ ಸಾಲದ ಹೊರೆ ಕೂಡ ಕಡಿಮೆ ಇರುತ್ತದೆ.

ಗೂಗಲ್ ಪೇ ಬಳಸುತ್ತಿದ್ದು 100 ರೂಪಾಯಿಗಿಂತ ಹೆಚ್ಚು ವಹಿವಾಟು ಮಾಡಿದ್ರೆ ಸಿಗುತ್ತೆ 5 ಲಕ್ಷ ಪರ್ಸನಲ್ ಲೋನ್

ಈ ರೀತಿ ಕಡಿಮೆ ಬಡ್ಡಿಗೆ ಸಾಲ ಕೊಡುವ ಬ್ಯಾಂಕ್ ಕೆನರಾ ಬ್ಯಾಂಕ್ (Canara Bank) ಆಗಿದೆ. ಇಲ್ಲಿ ನಿಮಗೆ ಪರ್ಸನಲ್ ಲೋನ್ ಮೇಲೆ ಕಡಿಮೆ ಬಡ್ಡಿ ಇರುತ್ತದೆ, ಹಾಗೆಯೇ ನಿಮಗೆ ಅರ್ಹತೆ ಇದ್ದರೆ, 5 ರಿಂದ 10 ನಿಮಿಷಗಳಲ್ಲಿ 10 ಲಕ್ಷದವರೆಗು ಪರ್ಸನಲ್ ಪಡೆದುಕೊಳ್ಳಬಹುದು..

ಪರ್ಸನಲ್ ಲೋನ್ ಪಡೆಯುವುದು ಕೆನರಾ ಬ್ಯಾಂಕ್ ನಲ್ಲಿ ಈಗ ಇನ್ನಷ್ಟು ಸುಲಭ ಆಗಿದೆ. ಇನ್ಮೇಲೆ ನೀವು ಆನ್ಲೈನ್ ಮೂಲಕ ಕೂಡ ಕೆನರಾ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಪಡೆಯುವುದಕ್ಕೆ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

ಇದಕ್ಕಾಗಿ ಕೆಲವು ಡಾಕ್ಯುಮೆಂಟ್ ಗಳು ಬೇಕಾಗುತ್ತದೆ, ಅದಷ್ಟು ಇದ್ದರೆ ಸಾಕು, ಸುಲಭವಾಗಿ ನೀವು ಅರ್ಜಿ ಹಾಕಬಹುದು. ಕೆನರಾ ಬ್ಯಾಂಕ್ ಗ್ರಾಹಕರಿಗೆ 10 ಸಾವಿರ ಇಂದ 3 ಲಕ್ಷದವರೆಗೂ ಕೇವಲ 5 ನಿಮಿಷಗಳಲ್ಲಿ ಲೋನ್ ಪಡೆಯಬಹುದು.

ಪರ್ಸನಲ್ ಲೋನ್ ಪಡೆಯುವವರ ವಯಸ್ಸು 21 ರಿಂದ 60 ವರ್ಷಗಳ ಒಳಗಿರಬೇಕು. ಲೋನ್ ಪಡೆಯಬೇಕಿರುವವರು ಮನೆಯಲ್ಲೇ ಕೂತು ಆನ್ಲೈನ್ ಅರ್ಜಿ ಸಲ್ಲಿಸಬಹುದು ಮತ್ತು ಬ್ಯಾಂಕ್ ಗೆ ಭೇಟಿ ನೀಡಿ ಆಫ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.

ನಿಮಗೆ ಹತ್ತಿರ ಇರುವ ಕೆನರಾ ಬ್ಯಾಂಕ್ ಬ್ರಾಂಚ್ ಗೆ ಭೇಟಿ ನೀಡಿ, ಲೋನ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಸ್ಟೇಟ್ ಬ್ಯಾಂಕಿನಲ್ಲಿ 20 ವರ್ಷಕ್ಕೆ 40 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ ಇಎಂಐ ಎಷ್ಟು ಕಟ್ಟಬೇಕು?

Canara Bank Loanಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಪರ್ಸನಲ್ ಲೋನ್ ಗೆ (Apply Personal Loan) ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕುವುದಕ್ಕೆ ಮೊದಲಿಗೆ ನೀವು ಕೆನರಾ ಬ್ಯಾಂಕ್ ವೆಬ್ಸೈಟ್ ಓಪನ್ ಮಾಡಿ.

*ಹೋಮ್ ಪೇಜ್ ನಲ್ಲಿ ಪರ್ಸನಲ್ ಲೋನ್ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

*ಬಳಿಕ ನಿಮ್ಮ ಹೆಸರು, ಪ್ಯಾನ್ ಕಾರ್ಡ್ ಡೀಟೇಲ್ಸ್, ಆಧಾರ್ ಕಾರ್ಡ್ ಡೀಟೇಲ್ಸ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಇದೆಲ್ಲವನ್ನು ಹಾಕಿ ಸಬ್ಮಿಟ್ ಮಾಡಿ.

*ಬಳಿಕ ಅಲ್ಲಿ ಕೇಳುವ ಕೆಲವು ಪ್ರಮುಖ ಡಾಕ್ಯುಮೆಂಟ್ ಗಳನ್ನು ಕೂಡ ಅಪ್ಲೋಡ್ ಮಾಡಬೇಕಾಗುತ್ತದೆ.

*ಇದಿಷ್ಟು ಪ್ರಕ್ರಿಯೆ ನಡೆದ ನಂತರ ಅಪ್ಲಿಕೇಶನ್ ಸಬ್ಮಿಟ್ ಆಗುತ್ತದೆ.

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಈ ಬ್ಯಾಂಕ್ ಗ್ರಾಹಕರಿಗೆ ಕ್ಷಣದಲ್ಲಿ ಸಿಗುತ್ತೆ 10 ಲಕ್ಷ ಪರ್ಸನಲ್ ಲೋನ್!

*ನೀವು ನೀಡಿರುವ ಎಲ್ಲಾ ಮಾಹಿತಿ ಸರಿ ಇದ್ದರೆ, ನಂತರ ನಿಮಗೆ ಬ್ಯಾಂಕ್ ಅಧಿಕಾರಿಗಳಿಂದ ಕಾಲ್ ಬರುತ್ತದೆ. ಅವರು ನಿಮಗೆ ಪರ್ಸನಲ್ ಲೋನ್ ಬಗ್ಗೆ ಪೂರ್ತಿ ಮಾಹಿತಿ ನೀಡುತ್ತಾರೆ.

*ನಿಮಗೆ ಅವೆಲ್ಲವೂ ಒಪ್ಪಿಗೆ ಆಗಿ, ನೀವು ನೀಡಿರುವ ಮಾಹಿತಿ, ದಾಖಲೆ ಎಲ್ಲವೂ ಸರಿ ಇದ್ದರೆ, ನಿಮಗೆ ಲೋನ್ ಅಪ್ರೂವಲ್ ಸಿಗುತ್ತದೆ.

*ಅಪ್ರೂವಲ್ ಸಿಕ್ಕ ತಕ್ಷಣವೇ ಸಾಲದ ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ವರ್ಗಾವಣೆ ಮಾಡಲಾಗುತ್ತದೆ.

Such Canara Bank account Holders will get loans up to 10 lakhs