Business News

ಯುಪಿಐ ಬಳಕೆ ಮಾಡುವ ವ್ಯಾಪಾರಿಗಳಿಗೆ ಕೇಂದ್ರದಿಂದ ಭರ್ಜರಿ ಸುದ್ದಿ

ಕೇಂದ್ರ ಸರ್ಕಾರವು ಯುಪಿಐ (UPI) ಪಾವತಿಗಳನ್ನು ಉತ್ತೇಜಿಸಲು ಮಹತ್ವದ ತೀರ್ಮಾನ ಕೈಗೊಂಡಿದೆ. ವಿಶೇಷವಾಗಿ, ₹2,000 ಒಳಗಿನ ಲಾವಾದೇವಿಗೆ ಸಬ್ಸಿಡಿ ನೀಡಲು ಯೋಜನೆ ಘೋಷಿಸಿದೆ, ಇದು ಚಿಕ್ಕ ವ್ಯಾಪಾರಿಗಳಿಗೆ ಲಾಭವಾಗಲಿದೆ.

  • ಯುಪಿಐ ಬಳಕೆ ಹೆಚ್ಚಿಸಲು ₹1,500 ಕೋಟಿ ಅನುದಾನ ಘೋಷಣೆ
  • ₹2,000 ಒಳಗಿನ ಪಾವತಿಗಳಿಗೆ ಪ್ರತ್ಯೇಕ ಪ್ರೋತ್ಸಾಹ
  • ಡಿಜಿಟಲ್ ವ್ಯವಹಾರ ಬೆಳವಣಿಗೆಗೆ ಸರ್ಕಾರದ ಹೊಸ ಯೋಜನೆ

ನಮ್ಮ ದೇಶದಲ್ಲಿ ಯುಪಿಐ (UPI Payment) ಪಾವತಿಗಳು ಈಗ ಎಲ್ಲೆಡೆ ಕಾಣಸಿಗುತ್ತಿವೆ. ತಟ್ಟನೆ ಪಾವತಿಯಾಗೋದು, ಹೆಚ್ಚುವರಿ ಶುಲ್ಕ ಇಲ್ಲ, ಹೀಗಾಗಿ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರೂ ಇದನ್ನು ತುಂಬಾ ಮೆಚ್ಚಿದ್ದಾರೆ. ಆದರೆ ಈಗ, ಸರ್ಕಾರ ಹೊಸ ಆಯ್ಕೆ ಒದಗಿಸಿಕೊಟ್ಟಿದೆ! ₹2,000 ಒಳಗಿನ ಯುಪಿಐ ಪಾವತಿಗಳಿಗೆ ವಿಶೇಷ ಪ್ರೋತ್ಸಾಹ ದೊರಕಲಿದೆ.

ಈ ಯೋಜನೆಯನ್ನ 2024-25 ಆರ್ಥಿಕ ವರ್ಷದಿಂದ ಜಾರಿಗೆ ತರುವುದಾಗಿ ಸರ್ಕಾರ ಘೋಷಿಸಿದೆ. ಈ ಯೋಜನೆಯಡಿ, ವ್ಯಾಪಾರಿಗಳು ಮತ್ತು ಗ್ರಾಹಕರು ಹೆಚ್ಚಿನ ಡಿಜಿಟಲ್ ಪಾವತಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಅಂದಹಾಗೆ, ಈ ಹೊಸ ಯೋಜನೆ ಏಪ್ರಿಲ್ 1, 2024 ರಿಂದ ಮಾರ್ಚ್ 31, 2025ರವರೆಗೆ ಜಾರಿಯಲ್ಲಿರಲಿದೆ. ಹೌದು, ಒಟ್ಟು ₹1,500 ಕೋಟಿ ಅನುದಾನ ನೀಡಲಾಗಿದೆ! ಇದನ್ನು ಇನ್ನೂ ಒಂದು ವರ್ಷ ಮುಂದುವರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಯುಪಿಐ ಬಳಕೆ ಮಾಡುವ ವ್ಯಾಪಾರಿಗಳಿಗೆ ಕೇಂದ್ರದಿಂದ ಭರ್ಜರಿ ಸುದ್ದಿ

ಇದನ್ನೂ ಓದಿ: ಟಾಟಾ ಟಿಯಾಗೋ ಎನ್‌ಆರ್‌ಜಿ 2025 ಲಾಂಚ್! ಹೊಸ ಫೀಚರ್ಸ್, ಬೆಲೆ ಎಷ್ಟು ಗೊತ್ತಾ?

ಈ ಪ್ರೋತ್ಸಾಹ ಯೋಜನೆಯಿಂದ ಸಣ್ಣ ವ್ಯಾಪಾರಿಗಳಿಗೆ (Small Merchants) ಅತಿಯಾಗಿ ಲಾಭವಾಗಲಿದೆ. ಉದಾಹರಣೆಗೆ, ನೀವು ₹1,000 ಮೌಲ್ಯದ ವಸ್ತು ಖರೀದಿ ಮಾಡಿ ಯುಪಿಐ ಮೂಲಕ ಪಾವತಿ ಮಾಡಿದರೆ, ವ್ಯಾಪಾರಿಗೆ ಪ್ರತಿ ಪಾವತಿಗೆ 0.15% ಪ್ರೋತ್ಸಾಹ ದೊರಕಲಿದೆ. ಇಷ್ಟೆ ಅಲ್ಲ, ಸರ್ಕಾರ ಬ್ಯಾಂಕ್‌ಗಳಿಗೆ ಕೂಡ ತಕ್ಷಣವೇ 80% ಮೊತ್ತ ಪಾವತಿಸಲಿದೆ. ಉಳಿದ 20% ಮೊತ್ತವನ್ನು ತಂತ್ರಜ್ಞಾನ ಸುಧಾರಣೆಯ ಪ್ರಕಾರ ಬಿಡುಗಡೆ ಮಾಡಲಾಗುವುದು.

ಈ ಯೋಜನೆಯ ಪರಿಣಾಮ ಏನು ಗೊತ್ತಾ? ಡಿಜಿಟಲ್ ವ್ಯವಹಾರ (Digital Transactions) ಇನ್ನಷ್ಟು ವೇಗವಾಗಿ ಬೆಳೆಯಲಿದೆ. ಹಳ್ಳಿಗಳಲ್ಲೂ ಯುಪಿಐ ಬಳಕೆ ಹೆಚ್ಚಾಗುವ ನಿರೀಕ್ಷೆ ಇದೆ. ಹೀಗಾಗಿ, ಸುರಕ್ಷಿತ ಪಾವತಿ ಮಾರ್ಗವನ್ನು ಇನ್ನಷ್ಟು ವಿಸ್ತರಿಸಬಹುದು.

ಇದನ್ನೂ ಓದಿ: ಮನೆ ಕರೆಂಟ್ ಬಿಲ್ ಜಾಸ್ತಿ ಬರ್ತಾ ಇದ್ಯಾ? ಹಾಗಾದ್ರೆ ಇಷ್ಟು ಮಾಡಿ ಸಾಕು

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಈಗಾಗಲೇ ಯುಪಿಐ ಪಾವತಿಗಳು ಭಾರತದಲ್ಲಿ ₹210 ಲಕ್ಷ ಕೋಟಿ ವಹಿವಾಟು ಮುಟ್ಟಿವೆ. ಇದನ್ನು ಇನ್ನಷ್ಟು ಬೆಳೆಸಲು ಸರ್ಕಾರ ಮುಂದಾಗಿದೆ. ಅಲ್ಲದೆ, ಮತ್ತಷ್ಟು ದೇಶಗಳು ಭಾರತೀಯ ಯುಪಿಐ ವ್ಯವಸ್ಥೆಯನ್ನು ಅನುಸರಿಸುತ್ತಿವೆ.

ಅಂತೆಯೇ, 2024-25ಕ್ಕೆ ಸರ್ಕಾರ ₹20,000 ಕೋಟಿ ಮೌಲ್ಯದ ಡಿಜಿಟಲ್ ವ್ಯವಹಾರವನ್ನು ಪೂರ್ಣಗೊಳಿಸುವ ಗುರಿ ಹೊಂದಿದೆ. ಈ ಮೂಲಕ, ದೇಶದಲ್ಲಿನ ಡಿಜಿಟಲ್ ಆರ್ಥಿಕತೆಯ (Digital Economy) ವ್ಯಾಪ್ತಿ ಮತ್ತಷ್ಟು ವಿಸ್ತಾರಗೊಳ್ಳಲಿದೆ. ಇನ್ನು ಮುಂದೆ, ಹಳ್ಳಿಗಳ ವ್ಯಾಪಾರಿಗಳು ಕೂಡ ಯುಪಿಐ ಬಳಸಬಹುದು, ವೇಗವಾಗಿ ಹಣ ಪಾವತಿ ಮಾಡಬಹುದು,.

ಸರ್ಕಾರ ಈ ಯೋಜನೆಯನ್ನು ಬೆಂಬಲಿಸುತ್ತಾ, ಜನರು ಹೆಚ್ಚು ಯುಪಿಐ ಬಳಕೆ ಮಾಡಲೆಂದು ಪ್ರೋತ್ಸಾಹಿಸುತ್ತಿದೆ. ನೀವು ಇನ್ನೂ ಯುಪಿಐ ಬಳಸದಿದ್ದರೆ, ಈ ಸೌಲಭ್ಯವನ್ನು ಬಳಸಿಕೊಳ್ಳೋ ಸಮಯ ಬರುತ್ತಿದೆ!

Govt Pushes UPI Payments With Incentive

English Summary

Our Whatsapp Channel is Live Now 👇

Whatsapp Channel

Related Stories