ಕೋಳಿ ಫಾರಂ ಬ್ಯುಸಿನೆಸ್ ಮಾಡೋಕೆ ಸಿಗುತ್ತೆ ಸರ್ಕಾರದಿಂದ ಸಬ್ಸಿಡಿ! ದುಪ್ಪಟ್ಟು ಲಾಭ ಗಳಿಸಿ
ಕೋಳಿ ಫಾರಂ ಆರಂಭಿಸಲು ಸಾಲ (Business Loan) ತೆಗೆದುಕೊಂಡರೆ ಅದಕ್ಕೆ ಸಬ್ಸಿಡಿ, ಬಡ್ಡಿ ದರಗಳಲ್ಲಿ ಸಬ್ಸಿಡಿ, ತೆರಿಗೆ ವಿನಾಯಿತಿ, ತಾಂತ್ರಿಕ ಸಹಾಯ ಮೊದಲಾದವುಗಳು ಸರ್ಕಾರದಿಂದ ಸಿಗುತ್ತವೆ.
ಸರ್ಕಾರ (Government) ಸ್ವಂತ ಉದ್ಯಮ ಆರಂಭಿಸುವವರಿಗೆಸಾಕಷ್ಟು ಪ್ರೋತ್ಸಾಹ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಉದ್ಯೋಗ (Own business) ಆರಂಭಿಸುವ ಯುವಕರ ಸಂಖ್ಯೆ ಕೂಡ ಜಾಸ್ತಿಯಾಗಿದೆ.
ಸರ್ಕಾರ ಸಾಕಷ್ಟು ಸಾಲಕ್ಕೆ ಸಬ್ಸಿಡಿ (Loan subsidy) ದರವನ್ನು ಕೂಡ ನೀಡುತ್ತದೆ, ಹೀಗೆ ನೀವು ಕೋಳಿಯನ್ನು ಸಾಕಿ ನಿಮ್ಮ ಕಲ್ಪನೆಗೂ ಮೀರಿ ಆದಾಯ ಗಳಿಸಬೇಕು ಎಂದುಕೊಂಡಿದ್ದರೆ, ಕೋಳಿ ಫಾರ್ಮ್ (Poultry farm) ತೆರೆಯಲು ಸರ್ಕಾರದ ಸಹಾಯ ಧನ (Government subsidy Loan) ಲಭ್ಯವಿದೆ.
ಕೇವಲ 7 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗುತ್ತೆ 5000 ಪಿಂಚಣಿ; ಸರ್ಕಾರದ ಹೊಸ ಯೋಜನೆ
ಕೋಳಿ ಫಾರಂ ಮಾಡೋಕೆ ಸರ್ಕಾರದ ಸಹಾಯಧನ:
ಕೋಳಿ ಉದ್ಯಮವನ್ನು ಬೆಂಬಲಿಸುವ ಸಲುವಾಗಿ ಹಾಗೂ ಕೋಳಿ ಉದ್ಯಮ ಮಾಡುವವರಿಗೆ ಸಬ್ಸಿಡಿ ದರದಲ್ಲಿ ಕೋಳಿ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಕೋಳಿ ಉದ್ಯಮವನ್ನು ಹೆಚ್ಚಿಸಬೇಕು ಹಾಗೂ ಗುಣಮಟ್ಟದ ಕೋಳಿ ಸಾಕಾಣಿಕೆ ಉದ್ಯಮವನ್ನು (Poultry Farm Business) ಬೆಂಬಲಿಸಬೇಕು ಎನ್ನುವ ಸಲುವಾಗಿ ಸರ್ಕಾರ ಕೋಳಿ ಫಾರಂ ಗಳಿಗೂ ಕೂಡ ಸಬ್ಸಿಡಿ ನೀಡಲು ಆರಂಭಿಸಿದೆ.
ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ – Loan Subsidy
ಇನ್ನು ಸಬ್ಸಿಡಿ ಸಹಾಯಧನವನ್ನು, ಈಗ ತಾನೆ ಹೊಸದಾಗಿ ಕೋಳಿ ಫಾರಂ ಆರಂಭಿಸಲು ಪ್ರಯತ್ನಿಸುತ್ತಿರುವವರಿಂದ ಹಿಡಿದು, ಕೋಳಿ ಸಾಕಾಣಿಕೆಯನ್ನು ದೊಡ್ಡ ಉದ್ಯಮವಾಗಿ ಮಾಡಿಕೊಂಡವರಿಗೂ ಕೂಡ ಸರ್ಕಾರದ ಈ ಪ್ರಯೋಜನ ಸಿಗಲಿದೆ.
ರೈತರು (Farmer) ಎಷ್ಟು ಕೋಳಿ ಸಾಕುತ್ತಾರೆ ಯಾವ ರೀತಿಯ ಕೋಳಿ ಸಾಕುತ್ತಾರೆ ಎನ್ನುವುದರ ಆಧಾರದ ಮೇಲೆ ಸಬ್ಸಿಡಿ ನೀಡಲಾಗುವುದು. ಈ ಸಬ್ಸಿಡಿ ಆಯಾ ಪ್ರದೇಶಗಳಲ್ಲಿ ಕೋಳಿ ಸಾಕಾಣಿಕೆ ಮಾಡುವವರ ಮೇಲೆ ಅವಲಂಬಿತವಾಗಿದೆ.
ಕೇವಲ ₹45 ಸಾವಿರಕ್ಕೆ ಮಾರುತಿ 800 ಅನ್ನು ರೋಲ್ಸ್ ರಾಯ್ಸ್ ಕಾರನ್ನಾಗಿ ಮಾಡಿದ ಯುವಕ, ವಿಡಿಯೋ ವೈರಲ್
ಸಬ್ಸಿಡಿ ಪಡೆಯಲು ಏನು ಮಾಡಬೇಕು?
ಸಬ್ಸಿಡಿ ಪಡೆಯುವುದಕ್ಕೆ ರೈತರು ತಮ್ಮ ಕೋಳಿ ಉದ್ಯಮದ ಬಗ್ಗೆ ಮಾಹಿತಿ, ಗುರುತಿನ ಪುರಾವೆ (Address proof), ಭೂಮಿಯ ಬಗ್ಗೆ ಮಾಹಿತಿ ನೀಡಬೇಕು. ಸರ್ಕಾರ ಅರ್ಜಿಯನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ಸಬ್ಸಿಡಿ ನೀಡುತ್ತದೆ.
ಎಷ್ಟು ಸಿಗುತ್ತೆ ಸಬ್ಸಿಡಿ?
ಗ್ರಾಮೀಣ ಭಾಗದಲ್ಲಿ ಕೋಳಿ ಸಾಕಾಣಿಕೆ ಮಾಡುವವರಿಗೆ ಈ ಸಬ್ಸಿಡಿಯ ಹೆಚ್ಚಿನ ಪ್ರಯೋಜನ ಸಿಗಲಿದೆ. ಗ್ರಾಮೀಣ ಭಾಗದಲ್ಲಿ ಒಂದು ಸಾವಿರ ಕೋಳಿ ಸಾಕಾಣಿಕೆಗೆ ನಿಮ್ಮ ಬಂಡವಾಳದ ಶೇಕಡ 50ರಷ್ಟು ಹಣವನ್ನು ಸರ್ಕಾರವೇ ಸಬ್ಸಿಡಿ ರೂಪದಲ್ಲಿ ಭರಿಸುತ್ತದೆ.
ಈ ರೀತಿ ಕೋಳಿ ಸಾಕಾಣಿಕೆಗೆ ಸರ್ಕಾರದಿಂದ ಸುಲಭವಾಗಿ ಬಂಡವಾಳದ ಅರ್ಧದಷ್ಟು ಹಣವನ್ನು ಪಡೆಯಬಹುದಾಗಿದೆ. ಎರಡು ಕಂತುಗಳಲ್ಲಿ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ. ಉದ್ಯಮಿ ಮಿತ್ರ www.nlm.udyamimitra.in ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು.
Govt subsidy Loan for doing Poultry farm business
Follow us On
Google News |