ಕೇವಲ 7 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗುತ್ತೆ 5000 ಪಿಂಚಣಿ; ಸರ್ಕಾರದ ಹೊಸ ಯೋಜನೆ
ಅಟಲ್ ಪೆನ್ಷನ್ ಯೋಜನೆ (Atal pension scheme) ಬಗ್ಗೆ ನೀವು ಕೇಳಿರಬಹುದು, ನಮ್ಮ ದೇಶದಲ್ಲಿ ಕೋಟ್ಯಾಂತರ ಜನ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದ್ದಾರೆ.
ಭವಿಷ್ಯವನ್ನು ಯಾರೂ ಕಂಡಿಲ್ಲ. ಹಾಗಾಗಿ ಭವಿಷ್ಯದಲ್ಲಿ (Future) ನಮ್ಮ ಆರ್ಥಿಕ ಪರಿಸ್ಥಿತಿ (Financial situation) ಹೇಗಿರುತ್ತದೆ ಎಂಬುದನ್ನು ನಾವು ಈಗಲೇ ಊಹಿಸಲು ಸಾಧ್ಯವಿಲ್ಲ. ಎಷ್ಟೇ ದೊಡ್ಡ ಉದ್ಯೋಗ (Job) ಅಥವಾ ಎಷ್ಟೇ ಸಣ್ಣ ಉದ್ಯೋಗದಲ್ಲಿ ಇರುವವರು ಕೂಡ ಭವಿಷ್ಯದ ಬಗ್ಗೆ ಪ್ಲಾನ್ ಮಾಡುವುದು ಬಹಳ ಮುಖ್ಯ.
ಈ ರೀತಿ ಮಾಡಿದರೆ ವೃದ್ಧಾಪ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ (Financial problems) ಇಲ್ಲದೆ ಜೀವನ ಸಾಗಿಸಬಹುದು. ಇದಕ್ಕಾಗಿ ಕೇಂದ್ರ ಸರ್ಕಾರ (Central government) ತಂದಿದೆ ಒಂದು ಅತ್ಯುತ್ತಮ ಯೋಜನೆ.
ಕೇವಲ ₹45 ಸಾವಿರಕ್ಕೆ ಮಾರುತಿ 800 ಅನ್ನು ರೋಲ್ಸ್ ರಾಯ್ಸ್ ಕಾರನ್ನಾಗಿ ಮಾಡಿದ ಯುವಕ, ವಿಡಿಯೋ ವೈರಲ್
APY ಹೂಡಿಕೆ
ಅಟಲ್ ಪೆನ್ಷನ್ ಯೋಜನೆ (Atal pension scheme) ಬಗ್ಗೆ ನೀವು ಕೇಳಿರಬಹುದು, ನಮ್ಮ ದೇಶದಲ್ಲಿ ಕೋಟ್ಯಾಂತರ ಜನ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದ್ದಾರೆ. ವೃದ್ಧಾಪ್ಯದಲ್ಲಿ ಆರ್ಥಿಕ ಸಬಲತೆ ನೀಡುವ ಯೋಜನೆ ಇದಾಗಿದ್ದು ಅತಿ ಕಡಿಮೆ ಹೂಡಿಕೆಗೆ 5,000 ರೂ. ವರೆಗೆ ಪ್ರತಿ ತಿಂಗಳು ಪಿಂಚಣಿ (Pension)ಪಡೆದುಕೊಳ್ಳಬಹುದು.
ಯಾರು ಹೂಡಿಕೆ ಮಾಡಬಹುದು?
ಹಿರಿಯ ನಾಗರಿಕರಿಗಾಗಿ (Senior citizens) 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಅಟಲ್ ಪಿಂಚಣಿ ಯೋಜನೆ ಆರಂಭವಾಗಿದ್ದು 2015ರಲ್ಲಿ. ಸಣ್ಣ ವಯಸ್ಸಿನಿಂದಲೇ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದರೆ ವೃದ್ಧಾಪ್ಯದಲ್ಲಿ ಉತ್ತಮ ಲಾಭ ಪಡೆಯಬಹುದು.
60 ವರ್ಷದ ಬಳಿಕ ಸಾವಿರದಿಂದ 5,000 ರೂಪಾಯಿಗಳವರೆಗೆ ಪಿಂಚಣಿ ಪಡೆಯಬಹುದು. 18 ವರ್ಷದಿಂದ 40 ವರ್ಷ ವಯಸ್ಸಿನವರೆಗೆ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದು.
ಕೇವಲ ₹17,000 ಕ್ಕೆ ಮಾರಾಟಕ್ಕಿದೆ ಹೋಂಡಾ ಆಕ್ಟಿವಾ ಸ್ಕೂಟರ್; ಸಿಂಗಲ್ ಓನರ್, 80km ಮೈಲೇಜ್!
ಎಷ್ಟು ಹೂಡಿಕೆ ಮಾಡಬೇಕು?
ಇದು ಕನಿಷ್ಠ 20 ವರ್ಷಗಳ ಹೂಡಿಕೆ ಯೋಜನೆಯಾಗಿದೆ. ಅರವತ್ತು ವರ್ಷದ ನಂತರ ವೃದ್ಧಾಪ್ಯ ಪಿಂಚಣಿಯನ್ನು ಸಾವಿರ ರೂಪಾಯಿಗಳಿಂದ 5,000 ವರೆಗೆ ಪಡೆಯಲು, 42 ರೂಪಾಯಿಗಳಿಂದ 210ಗಳವರೆಗಿನ ಹೂಡಿಕೆ ಮಾಡಬೇಕು.
ಬೆಂಗಳೂರು To ಮೈಸೂರು Non-Stop ಹೋಗಿ ಬರಬಹುದು; 200 ಕಿಮೀ ಮೈಲೇಜ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಪ್ರತಿ ತಿಂಗಳು 210ರೂಗಳ ಹೂಡಿಕೆ, ಅಂದರೆ ನೀವು ದಿನಕ್ಕೆ ಒಂದು ಟೀ ಕುಡಿಯುವ ಬೆಲೆಗಿಂತಲೂ ಕಡಿಮೆ ಅಂದರೆ ಕೇವಲ ಏಳು ರೂಪಾಯಿಗಳ ಹೂಡಿಕೆ ಮಾಡಿ 5,000ವರೆಗೆ ಪಿಂಚಣಿ ಪಡೆಯುವ ಅಟಲ್ ಪಿಂಚಣಿ ಯೋಜನೆ ಅತ್ಯುತ್ತಮ ಆಯ್ಕೆಯಾಗಿದೆ.
If you invest only 7 rupees, you will get 5000 pension
Follow us On
Google News |