50% ಡಿಸ್ಕೌಂಟ್ ಬೆಲೆಗೆ ಸಿಗುತ್ತೆ ಎಲೆಕ್ಟ್ರಿಕ್ ಸ್ಕೂಟರ್! ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೇಶನ್ ಅಗತ್ಯವಿಲ್ಲ
ಭಾರವಾದ ಸಾಮಾನುಗಳನ್ನು ಸುಲಭವಾಗಿ ಸಾಗಿಸಲು, ಲೈಸೆನ್ಸ್ ಮತ್ತು ರಿಜಿಸ್ಟ್ರೇಶನ್ ಅಗತ್ಯವಿಲ್ಲದ 400 ಕೆ.ಜಿ ಹೊರುವ ಸಾಮರ್ಥ್ಯದ ಈ ಎಲೆಕ್ಟ್ರಿಕ್ ಲೋಡರ್ ಸ್ಕೂಟರ್ ಈಗ ಅರ್ಧ ಬೆಲೆಗೆ ಲಭ್ಯವಾಗಿದೆ.
Electric Loader Scooter: ಭಾರಿ ಸಾಮಾನುಗಳನ್ನು ಸಾಗಿಸುವವರಿಗಾಗಿ EOX ಕಂಪನಿಯ E5 Plus ಲೋಡರ್ ಎಲೆಕ್ಟ್ರಿಕ್ ಸ್ಕೂಟರ್ ಈಗ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಗಮನ ಸೆಳೆಯುತ್ತಿದೆ.
ಸಾಮಾನ್ಯ ಸ್ಕೂಟರ್ಗಳಿಗಿಂತ ಭಿನ್ನವಾಗಿ, ವಿಶೇಷವಾಗಿ ನೀರಿನ ಕ್ಯಾನ್, ಗೃಹೋಪಯೋಗಿ ಸಾಧನಗಳು, ದೈತ್ಯ ಬಾಕ್ಸುಗಳು ಮತ್ತು ವ್ಯಾಪಾರ ಬಳಕೆಯ ಲೋಡ್ ಹೊರುವಂತೆ ಇದನ್ನು ತಯಾರಿಸಲಾಗಿದೆ.
ಈ ಮಾದರಿಯ ಪ್ರಮುಖ ಆಕರ್ಷಣೆ ಎಂದರೆ, ಇದನ್ನು ಓಡಿಸಲು ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಶನ್ ಅಥವಾ ನಂಬರ್ ಪ್ಲೇಟ್ ಯಾವುದೂ ಅಗತ್ಯವಿಲ್ಲ. ಕಾರಣ, ಇದು ಗರಿಷ್ಠ 25 ಕಿಮೀ/ಗಂ ವೇಗವನ್ನು ಮಾತ್ರ ನೀಡುತ್ತದೆ. ಭಾರವಾದ ಲೋಡ್ ಹೊತ್ತೊಯ್ಯುವಾಗ ನಿಧಾನವೇ ಉತ್ತಮ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಪೈಸಾ ಬಂಡವಾಳ ಬೇಡ! ದಂಪತಿಗಳು ಮನೆಯಲ್ಲೇ ಶುರುಮಾಡಬಹುದಾದ ಬಿಸಿನೆಸ್ ಇದು
60V ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಬರುವ ಈ ಸ್ಕೂಟರ್ 4–6 ಗಂಟೆಗಳಲ್ಲಿ ಫುಲ್ ಚಾರ್ಜ್ ಆಗುತ್ತದೆ. ಚಾರ್ಜಿಂಗ್ ಪೂರ್ಣಗೊಳ್ಳುತ್ತಿದ್ದಂತೆ ಸ್ವಯಂ ಆಫ್ ಆಗುವ auto cut-off ವ್ಯವಸ್ಥೆಯೂ ಇದೆ. ಕಂಪನಿ ಪ್ರಕಾರ 50–70 ಕಿಮೀ ಮೈಲೇಜ್ ಸಿಗುತ್ತದೆ ಎಂದರೂ, ಗ್ರಾಹಕರ ವಿಮರ್ಶೆ ಪ್ರಕಾರ 40 ಕಿಮೀ ಸುತ್ತ ಮಾತ್ರ ಸಿಗುತ್ತಿದೆ.
ಸ್ಕೂಟರ್ನಲ್ಲಿ ಇಕೊ, ಸ್ಪೋರ್ಟ್ಸ್, ಹೈ-ಸ್ಪೀಡ್ ಮೂಡ್ಗಳು ನೀಡಲಾಗಿದೆ. BLDC ಮೋಟರ್ ಇರುವುದರಿಂದ ಲೋಡ್ ಹೊರುವ ಸಾಮರ್ಥ್ಯ ಗಟ್ಟಿಯಾಗಿದೆ. ಹಿಂಭಾಗದಲ್ಲಿ ದೊಡ್ಡ ಲೋಡ್ ಕ್ಯಾರಿಯರ್ ಹಾಗೂ ಮುಂಭಾಗದಲ್ಲಿ ಹೆಚ್ಚುವರಿ ಬಾಸ್ಕೆಟ್ ನೀಡಿರುವುದು ವ್ಯಾಪಾರಿಗಳಿಗೆ ಹೆಚ್ಚು ಉಪಯೋಗ.

ಅಲ್ಯೂಮಿನಿಯಂ ಬಾಡಿ, ಎರಡು ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, ಟ್ಯೂಬ್ಲೆಸ್ ಟೈರ್, ಹೈಡ್ರಾಲಿಕ್ ಸಸ್ಪೆನ್ಶನ್, ಇವೆಲ್ಲವು ವಾಹನದ ಸುರಕ್ಷತೆ ಮತ್ತು ಬಲವನ್ನು ಹೆಚ್ಚಿಸುತ್ತವೆ. 288 ಸೆಂಮೀ ಉದ್ದ, 18 ಸೆಂಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 100 ಕೆಜಿ ವಾಹನ ತೂಕದಿಂದ ಇದು ಹೇವಿ-ಡ್ಯೂಟಿ ಬಳಕೆಗೆ ಅತೀ ಸೂಕ್ತ.
ಯಾಂತ್ರಿಕ ವೈಶಿಷ್ಟ್ಯಗಳ ಜೊತೆಗೆ, ಸ್ಮಾರ್ಟ್ ಫೀಚರ್ಗಳೂ ಸೇರಿವೆ, anti-theft lock, ಪಾರ್ಕಿಂಗ್ ಮೋಡ್, DLR ಲ್ಯಾಂಪ್, IP67 ವಾಟರ್ಪ್ರೂಫ್ ಬ್ಯಾಟರಿ ರೇಟಿಂಗ್. ಮನೆಯಲ್ಲಿ, ಕಚೇರಿಯಲ್ಲಿ, ಅಂಗಡಿಯಲ್ಲಿ ಎಲ್ಲೆಡೆ ಚಾರ್ಜ್ ಮಾಡಬಹುದಾಗಿದೆ. ಬ್ಯಾಟರಿಯನ್ನು ವಿಂಗಡಿಸಿ ತೆಗೆದುಕೊಂಡು ಹೋಗಬಹುದಾಗಿದೆ ಎಂಬುದು ಮತ್ತೊಂದು ದೊಡ್ಡ ಮತ್ತು ಉಪಯೋಗಿ ಅಂಶ.
ಇದನ್ನೂ ಓದಿ: ಮಸ್ತ್ ಮೈಲೇಜ್! ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಟಾಪ್ 5 ಬಜೆಟ್ ಬೈಕ್ಗಳು ಇವು
₹1,50,000 ಮಾರುಕಟ್ಟೆ ಬೆಲೆಯ ಈ ಲೋಡರ್ ಸ್ಕೂಟರ್, ಆನ್ಲೈನಿನಲ್ಲಿ 48% ರಿಯಾಯಿತಿಯಲ್ಲಿ ₹78,499ಕ್ಕೆ ಲಭ್ಯವಾಗಿದೆ. ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳಿಗೆ ಹೆಚ್ಚುವರಿ ರಿಯಾಯಿತಿಗಳು ಮತ್ತು ಕ್ಯಾಶ್ಬ್ಯಾಕ್ ಸಿಗುತ್ತದೆ. EMI ಆಯ್ಕೆಯಲ್ಲಿ ತಿಂಗಳಿಗೆ ₹3,806 ಕಂತು ಆರಂಭ. ಜೊತೆಗೆ 1 ವರ್ಷದ ವಾರಂಟಿಯೂ ಇದೆ.
ಗ್ರಾಹಕರ ವಿಮರ್ಶೆಯ ಪ್ರಕಾರ, ಸ್ಕೂಟರ್ನ ಗುಣಮಟ್ಟ ಮತ್ತು ವಿನ್ಯಾಸ ಮೆಚ್ಚುಗೆಯನ್ನು ಗಳಿಸಿದೆ. ಲೋಡ್ ಹೊರುವ ಸಾಮರ್ಥ್ಯ ಬಗ್ಗೆ ಉತ್ತಮ ಅಭಿಪ್ರಾಯಗಳು ಬಂದಿವೆ. ಆದರೆ ಬ್ಯಾಟರಿ ಮೈಲೇಜ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಕಾಣಿಸುತ್ತಿವೆ. ಮೈಲೇಜ್ ಹೆಚ್ಚು ಬೇಕಾದವರಿಗೆ ಇದು ಸೂಕ್ತವಲ್ಲ, ಆದರೆ ವ್ಯಾಪಾರ ಬಳಕೆಗೆ ಇದು ಉತ್ತಮ ಆಯ್ಕೆ ಎನ್ನುವುದು ಹೆಚ್ಚಿನ ಬಳಕೆದಾರರ ಅಭಿಪ್ರಾಯ.
Heavy-Duty Electric Loader Scooter



