Bike: ಕಡಿಮೆ ಬೆಲೆಯಲ್ಲಿ ಭರ್ಜರಿ ಮೈಲೇಜ್ ಬೈಕ್, ಬೆಲೆ ಕೇವಲ 64,900 ದಿಂದ ಆರಂಭ
Honda Shine 100 Bike: ಕೇವಲ 64 ಸಾವಿರ ರೂಪಾಯಿಗಳಲ್ಲಿ ಲಭ್ಯವಾಗುತ್ತಿರುವ ಹೊಂಡಾ ಶೈನ್ 100 ಬೈಕ್ ಉತ್ತಮ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಹಾಗೂ ವಿಶ್ವಾಸಾರ್ಹ ಎಂಜಿನ್ ಸಾಮರ್ಥ್ಯದಿಂದ ಮಧ್ಯಮವರ್ಗದ ದಿನನಿತ್ಯ ಪ್ರಯಾಣಿಕರ ಗಮನ ಸೆಳೆಯುತ್ತಿದೆ.

- ಹೊಂಡಾ ಶೈನ್ 100 ಬೆಲೆ ಕೇವಲ 64,900
- 65 ಕಿ.ಮೀ ಮೈಲೇಜ್ ನೀಡುವ ಶೈನ್ 100
- ಕಡಿಮೆ ವೆಚ್ಚ, 3 ವರ್ಷ ವಾರಂಟಿ
Honda Shine 100 Bike: ದಿನನಿತ್ಯ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಮತ್ತು ಮಧ್ಯಮವರ್ಗದ ಕುಟುಂಬಗಳು ಈಗ ಹೆಚ್ಚು ಹುಡುಕುತ್ತಿರುವುದು ಕಡಿಮೆ ಬೆಲೆಯಲ್ಲೇ ಉತ್ತಮ ಮೈಲೇಜ್ ನೀಡುವ ಬೈಕ್. ಈ ಬೇಡಿಕೆಯನ್ನು ಗಮನಿಸಿದ ಹೊಂಡಾ ಕಂಪನಿ ತನ್ನ ಶೈನ್ 100 ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗಾಗಲೇ ಕಮ್ಯೂಟರ್ ಸೆಗ್ಮೆಂಟ್ನಲ್ಲಿ ಇದು ಗಮನಾರ್ಹ ಸ್ಥಾನ ಪಡೆದಿದೆ.
ಬೆಲೆ ವಿಚಾರಕ್ಕೆ ಬಂದರೆ, ದೆಹಲಿ ಎಕ್ಸ್-ಶೋರೂಮ್ ದರ ₹64,900ರಿಂದ ಆರಂಭವಾಗುತ್ತದೆ. ಆನ್-ರೋಡ್ ಬೆಲೆ ಸುಮಾರು ₹77,000ರ ಮಟ್ಟಿಗೆ ತಲುಪುತ್ತದೆ. ಈ ದರದಲ್ಲಿ ದೊರೆಯುವ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆ ಗ್ರಾಹಕರಿಗೆ ಮೌಲ್ಯಯುತ ಆಯ್ಕೆಯಾಗಿ ಕಾಣಿಸುತ್ತಿದೆ.
ಈ ಬೈಕ್ 98.98 ಸಿಸಿ ಏರ್-ಕೂಲ್ಡ್ ಎಂಜಿನ್ ಹೊಂದಿದ್ದು, PGM-FI ಮತ್ತು eSP ತಂತ್ರಜ್ಞಾನಗಳೊಂದಿಗೆ ಬರುತ್ತದೆ. ಇದು 7.38 ಪಿಎಸ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ನಗರ ಟ್ರಾಫಿಕ್ ಪರಿಸ್ಥಿತಿಯಲ್ಲೂ ಸುಲಭವಾಗಿ ಓಡಿಸಬಹುದಾದ ನಾಲ್ಕು ಗೇರ್ ವ್ಯವಸ್ಥೆ ಇದರಲ್ಲಿ ಇದೆ.
99 ಕೆಜಿ ತೂಕ ಹೊಂದಿರುವ ಶೈನ್ 100 ಇರುಕು ರಸ್ತೆಗಳಲ್ಲಿ ಸಹ ನಿಯಂತ್ರಣ ಸುಲಭವಾಗಿರುತ್ತದೆ. ಗರಿಷ್ಠ ವೇಗ ಗಂಟೆಗೆ 85 ಕಿ.ಮೀ. ಇದೆ. ಆದರೆ ಇದರ ಪ್ರಮುಖ ಆಕರ್ಷಣೆ ಮೈಲೇಜ್ – ಕಂಪನಿಯ ಪ್ರಕಾರ ಲೀಟರ್ಗೆ 65 ಕಿ.ಮೀ.ವರೆಗೆ ಇಂಧನ ದಕ್ಷತೆ ನೀಡುತ್ತದೆ. 9 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವು ದೀರ್ಘ ಪ್ರಯಾಣಕ್ಕೂ ಅನುಕೂಲ.
ಇದಕ್ಕಿಂತ ಮುಖ್ಯವಾಗಿ, ನಿರ್ವಹಣಾ ವೆಚ್ಚವೂ ಕಡಿಮೆ. ಸಾಮಾನ್ಯ ಸರ್ವಿಸ್ ವೆಚ್ಚ ₹800ರಿಂದ ₹1200ರ ನಡುವೆ ಇರುತ್ತದೆ. ಕಂಪನಿಯು 3 ವರ್ಷ ಅಥವಾ 42,000 ಕಿ.ಮೀ ವಾರಂಟಿಯನ್ನು ನೀಡುತ್ತದೆ. ದೀರ್ಘಕಾಲಿಕ ಬಳಕೆಗೆ ಇದು ವಿಶ್ವಾಸಾರ್ಹ ಆಯ್ಕೆಯಾಗಿದೆ.
ಕಡಿಮೆ ಬೆಲೆ, ಉತ್ತಮ ಮೈಲೇಜ್ ಮತ್ತು ಕಡಿಮೆ ನಿರ್ವಹಣಾ ವೆಚ್ಚ – ಈ ಮೂರು ಕಾರಣಗಳಿಂದ ಹೊಂಡಾ ಶೈನ್ 100 ಕಮ್ಯೂಟರ್ ವಿಭಾಗದಲ್ಲಿ ಜನಪ್ರಿಯ ಆಯ್ಕೆಯಾಗಿ ಹೊರಹೊಮ್ಮುತ್ತಿದೆ.



