ಹೊಸ ನಿಯಮ! ಒಬ್ಬ ಸಾಮಾನ್ಯ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ?
Bank Account : ಬ್ಯಾಂಕ್ ಖಾತೆಯಲ್ಲಿ (Bank Account) ಸೇವಿಂಗ್ಸ್ ಅಕೌಂಟ್ (savings account) ಹಾಗೂ ಕರೆಂಟ್ ಅಕೌಂಟ್ (current account) ಅಂದ್ರೆ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಇರುತ್ತದೆ.
Bank Account : ನಾವು ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡುವುದಿದ್ದರು ಅದನ್ನು ಬ್ಯಾಂಕ್ (Bank ) ಮೂಲಕವೇ ಮಾಡುತ್ತೇವೆ, ಹಾಗಾಗಿ ಪ್ರತಿಯೊಬ್ಬ ವ್ಯಕ್ತಿ ಕೂಡ ಒಂದಲ್ಲ ಒಂದು ಬ್ಯಾಂಕ್ ನಲ್ಲಿ ಖಾತೆ ಹೊಂದಿರುವುದು ಸಹಜ.
ಬ್ಯಾಂಕ್ ಖಾತೆಯಲ್ಲಿ (Bank Account) ಸೇವಿಂಗ್ಸ್ ಅಕೌಂಟ್ (savings account) ಹಾಗೂ ಕರೆಂಟ್ ಅಕೌಂಟ್ (current account) ಅಂದ್ರೆ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಇರುತ್ತದೆ.
ಸಾಮಾನ್ಯರು ಎಲ್ಲಾ ಹಣಕಾಸಿನ ವ್ಯವಹಾರಕ್ಕೆ ಉಳಿತಾಯ ಖಾತೆಯನ್ನು ಬಳಸುತ್ತಾರೆ, ಅದೇ ರೀತಿ ಉದ್ಯಮ ಮಾಡುವವರು ಚಾಲ್ತಿ ಖಾತೆಯನ್ನು ಬಳಸುತ್ತಾರೆ. ಉಳಿತಾಯ ಖಾತೆ ಎಲ್ಲಾ ಸಾಮಾನ್ಯ ವರ್ಗದವರು ಹೊಂದಿರಬಹುದಾದ ಹಾಗೂ ಹೊಂದಿರುವ ಖಾತೆ ಆಗಿದೆ.
ಈ ಮೂಲಕ ಯಾವುದೇ ಬ್ಯಾಂಕ್ ನಲ್ಲಿ ಸಾಲ (bank loan) ತೆಗೆದುಕೊಳ್ಳುವುದು ಅಥವಾ ಸೇವಿಂಗ್ಸ್ ಮಾಡುವುದು ಎರಡು ಕೆಲಸಕ್ಕೂ ಕೂಡ ಅನುಕೂಲವಾಗಲಿದೆ. ಹೀಗಿರುವಾಗ ನೀವು ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು ಎನ್ನುವುದು ನಿಮಗೆ ಗೊತ್ತಾ?
ಚಿನ್ನ ಖರೀದಿಗೆ ಹೊಸ ನಿಯಮ, ಆಧಾರ್ ಮತ್ತು ಪ್ಯಾನ್ ಕಾರ್ಡ್ ಇಲ್ಲದೆ ಎಷ್ಟು ಚಿನ್ನ ಖರೀದಿಸಬಹುದು ಗೊತ್ತೇ?
ಎಷ್ಟು ಬ್ಯಾಂಕ್ ಖಾತೆ ಹೊಂದಿರಬಹುದು?
ಒಬ್ಬ ವ್ಯಕ್ತಿ ಒಂದು ಅಥವಾ ಎರಡು ಅಥವಾ 10 ಬ್ಯಾಂಕ್ ಖಾತೆಯನ್ನು ಹೊಂದಿರುವ ಸಾಧ್ಯತೆಗಳು ಕೂಡ ಇರುತ್ತವೆ, ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ನಂತರ ಅದನ್ನು ಕ್ಲೋಸ್ (account close) ಮಾಡಲು ಮರೆತು ಹೋಗುತ್ತಾರೆ
ಆಗ ಆ ಬ್ಯಾಂಕ್ ಖಾತೆ ಆಕ್ಟಿವ್ (active account) ಆಗಿ ಇರುವುದಿಲ್ಲ. ಇನ್ನು ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆಯನ್ನು ಹೊಂದಿರಬಹುದು ಎಂಬುದನ್ನು ನೋಡುವುದಾದರೆ ಎಷ್ಟು ಖಾತೆಯನ್ನು ಹೊಂದಿರಬಹುದು ಎನ್ನುವುದಕ್ಕೆ ಯಾವುದೇ ನಿಯಮವಿಲ್ಲ
ಯಾವುದೇ ವ್ಯಕ್ತಿ ಎಷ್ಟು ಬೇಕಾದರೂ ಹೊಂದಿರಬಹುದು. ಆದರೆ ಒಂದು ಅಥವಾ ಎರಡು ಉಳಿತಾಯ ಖಾತೆಯನ್ನು ಹೊಂದಿದ್ದರೆ ಅದರ ಪ್ರಯೋಜನ ಹೆಚ್ಚು ಕೇವಲ ಒಂದು ಖಾತೆ ಹೊಂದಿದ್ದರೆ ಅದರಲ್ಲಿ ಎಲ್ಲಾ ರೀತಿಯ ವ್ಯವಹಾರಗಳನ್ನು ಮಾಡಿಕೊಳ್ಳಬಹುದು, ಬೇರೆ ಬೇರೆ ಖಾತೆಯನ್ನು ನಿರ್ವಹಣೆ ಮಾಡುವ ಅಗತ್ಯ ಇರುವುದಿಲ್ಲ, ನಿರ್ವಹಣಾ ಶುಲ್ಕವನ್ನು (maintenance fee) ಪಾವತಿಸುವ ಅಗತ್ಯ ಇರುವುದಿಲ್ಲ!
ಚಿನ್ನ ಅಸಲಿಯೋ ನಕಲಿಯೋ 5 ನಿಮಿಷದಲ್ಲಿ ಪತ್ತೆ ಮಾಡಿ! ಚಿನ್ನದ ಗುಣಮಟ್ಟ ತಿಳಿಯಿರಿ
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದ್ರೆ ಸೇಫ್!
ನಾವು ನಮ್ಮ ಸೇವಿಂಗ್ಸ್ ಅಕೌಂಟ್ ನಲ್ಲಿ ಎಷ್ಟು ಹಣವನ್ನು ಬೇಕಾದರೂ ಹೊಂದಿರಬಹುದು, ಸರಿಯಾದ ದಾಖಲೆ ಇದ್ದರೆ ಬ್ಯಾಂಕ್ ನಲ್ಲಿ ಹಣ ಹೊಂದಿರುವುದಕ್ಕೆ ಸಮಸ್ಯೆ ಇಲ್ಲ. ಆದರೆ ಒಂದು ವೇಳೆ ನೀವು ಯಾವ ಬ್ಯಾಂಕ್ ನಲ್ಲಿ ಹಣ ಇಟ್ಟಿದ್ದೀರಾ? ಆ ಹಣಕ್ಕೆ ಸೇಫ್ಟಿ ಇದೆಯಾ ಎಂಬುದನ್ನು ನೋಡಿಕೊಳ್ಳಬೇಕು
ಯಾಕೆಂದರೆ ಸರ್ಕಾರದ ನಿಯಮದ ಪ್ರಕಾರ ಯಾವುದೇ ಬ್ಯಾಂಕ್ ಮುಚ್ಚಿ ಹೋದರೆ ಗ್ರಾಹಕರಿಗೆ 5 ಲಕ್ಷ ರೂಪಾಯಿಗಳವರೆಗೆ ಗ್ಯಾರಂಟಿ ನೀಡಲಾಗುವುದು ಅದಕ್ಕಿಂತ ಹೆಚ್ಚಿಗೆ ಹಣ ಇದ್ದು ಬ್ಯಾಂಕ್ ಮುಚ್ಚಿಹೋದರೆ ನೀವು ಹಣ ಕಳೆದುಕೊಳ್ಳಬೇಕಾಗುತ್ತದೆ.
How many bank accounts can a common person have