ಹೋಮ್ ಲೋನ್ ತಗೊಂಡು ಮನೆ ಕಟ್ಟಬೇಕು ಅನ್ನೋದಾದ್ರೆ ಸಂಬಳ ಎಷ್ಟಿರಬೇಕು ಗೊತ್ತ?

Home Loan: ಈಗಿನ ಕಾಲದಲ್ಲಿ ಮನೆ ಖರೀದಿಗೆ ಹೋಮ್ ಲೋನ್ ಅತ್ಯಂತ ಅವಶ್ಯಕವಾಗಿದೆ. ಆದರೆ, EMI ಒತ್ತಡ ಇರಬಾರದು ಎನ್ನುವುದಾದರೆ ವೇತನದ ಎಷ್ಟು ಭಾಗ ಲೋನ್ ಪಡೆಯಬೇಕು ಎಂಬುದು ಗೊತ್ತಿರಬೇಕು.

  • ಹೋಮ್ ಲೋನ್ ಪಡೆಯೋ ಮುನ್ನ ತಿಳಿಯಿರಿ
  • ವೇತನದ 25% ಕ್ಕಿಂತ ಹೆಚ್ಚು EMI ಬೇಡ
  • ಸರಿಯಾದ ಬಜೆಟ್‌ನಲ್ಲಿ ಮನೆ ಆಯ್ಕೆ ಮುಖ್ಯ

Home Loan: ಇಂದಿನ ದಿನಗಳಲ್ಲಿ ಸ್ವಂತ ಮನೆ ಖರೀದಿ ಮಾಡುವುದು ಬಹುತೇಕ ಜನರ ಕನಸಾಗಿದೆ. ಆದರೆ ಪ್ರಸ್ತುತ ಆಸ್ತಿ ಬೆಲೆಗಳು ಆಕಾಶಕ್ಕೇರುತ್ತಿರುವ ಈ ಕಾಲದಲ್ಲಿ, ಗೃಹ ಸಾಲವಿಲ್ಲದೆ ಮನೆ ಖರೀದಿ ಮಾಡುವುದು ಬಹಳ ಕಷ್ಟ.

ಆದ್ದರಿಂದ ಅನೇಕರು ಬ್ಯಾಂಕಿನಿಂದ ಹೋಮ್ ಲೋನ್ (Home Loan) ಪಡೆದು EMI ಮೂಲಕ ತಮ್ಮ ಕನಸಿನ ಮನೆ ಖರೀದಿ ಮಾಡುವ ಯೋಜನೆ ಇಟ್ಟುಕೊಳ್ಳುತ್ತಾರೆ.

ಆದರೆ, ಎಲ್ಲರಿಗೂ ಒಂದೇ ರೀತಿಯ ಆರ್ಥಿಕ ಪರಿಸ್ಥಿತಿ ಇರೋದಿಲ್ಲ. ನಿಮ್ಮ ಮಾಸಿಕ ವೇತನದಿಂದ EMI, ಖರ್ಚು, ವಿಮೆ ಮತ್ತು ಉಳಿತಾಯಗಳ ನಡುವೆ ಸರಿಯಾದ ಸಮತೋಲನ ಇರಬೇಕು.

ಇದನ್ನೂ ಓದಿ: ಬ್ಯಾಂಕ್ ಖಾತೆ ಇಲ್ಲದೆ ಇದ್ರೂ ಸಹ ಈಗ ಫೋನ್ ಪೇ, ಗೂಗಲ್ ಪೇ, ಯುಪಿಐ ಪಾವತಿ ಸಾಧ್ಯ!

ಹಣಕಾಸು ತಜ್ಞರ ಪ್ರಕಾರ, ನಿಮ್ಮ ವೇತನದ 20ರಿಂದ 25 ಶೇಕಡಾ ಭಾಗಕ್ಕಿಂತ ಹೆಚ್ಚು EMI ಇರಬಾರದು. ಉದಾಹರಣೆಗೆ, ನಿಮ್ಮ ವೇತನ ₹1 ಲಕ್ಷ ಇದ್ದರೆ, EMI ₹25,000 ಕ್ಕಿಂತ ಹೆಚ್ಚು ಆಗಬಾರದು ಎಂದು ಸಲಹೆ ನೀಡಲಾಗಿದೆ.

ಮಾಸಿಕ EMI ಹೆಚ್ಚು ಆಯಿತಾದರೆ ಅದು ನಿಮ್ಮ ಖರ್ಚು ಮತ್ತು ಜೀವನಶೈಲಿಗೆ ಒತ್ತಡ ಉಂಟುಮಾಡುತ್ತದೆ. ಹಾಗೆಯೇ, ಕಡಿಮೆ ವೇತನವಿದ್ದರೆ ಕಡಿಮೆ EMI ಹೊಂದಿರುವ ಮನೆ ಆಯ್ಕೆ ಮಾಡುವುದು ಸೂಕ್ತ. ಸಾಲದ ಮೊತ್ತ ಮತ್ತು ಮನೆ ಬೆಲೆಯನ್ನು ಆಯ್ಕೆ ಮಾಡುವಾಗ ನಿಮ್ಮ ವೇತನ, ಖರ್ಚು ಹಾಗೂ ಭವಿಷ್ಯದ ಬದಲಾವಣೆಗಳನ್ನು ಪರಿಗಣಿಸಬೇಕು.

ಇದನ್ನೂ ಓದಿ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! ಲೋನ್ ಹಾಗೂ ಇಎಂಐ ಮೇಲೆ ಭಾರಿ ರಿಲೀಫ್ ಘೋಷಣೆ

ವೇತನದ ಮೇಲೆ ಅವಲಂಬಿತವಾಗಿ ಮನೆ ಬಜೆಟ್‌ನೂ ನಿರ್ಧರಿಸಬಹುದು. ಉದಾಹರಣೆಗೆ, ₹1 ಲಕ್ಷ ವೇತನವಿದ್ದರೆ ₹30–₹35 ಲಕ್ಷ ಮೌಲ್ಯದ ಮನೆ ಖರೀದಿ ಮಾಡಬಹುದು. ₹1.5 ಲಕ್ಷ ವೇತನವಿದ್ದರೆ ₹50 ಲಕ್ಷ ವರೆಗಿನ ಮನೆ ಆಯ್ಕೆ ಮಾಡಬಹುದು.

ಸರಿಯಾದ ಲೆಕ್ಕಾಚಾರ ಮತ್ತು ಬಜೆಟ್ ಯೋಜನೆಯೊಂದಿಗೆ ಹೋಮ್ ಲೋನ್ ಪಡೆಯುವುದರಿಂದ ನಿಮ್ಮ ಕನಸಿನ ಮನೆ ತಲುಪುವುದು ಸುಲಭವಾಗಬಹುದು.

How Much Salary Do You Need to Buy a House with a Home Loan

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories