ಬ್ಯಾಂಕ್ ಖಾತೆ ಇಲ್ಲದೆ ಇದ್ರೂ ಸಹ ಈಗ ಫೋನ್ ಪೇ, ಗೂಗಲ್ ಪೇ, ಯುಪಿಐ ಪಾವತಿ ಸಾಧ್ಯ!
ಆರ್ಬಿಐ ಅನುಮತಿಯೊಂದಿಗೆ ಜೂನಿಯೋ ಪೇಮೆಂಟ್ಸ್ ಹೊಸ ಪಾವತಿ ಆಯ್ಕೆಯನ್ನು ಪರಿಚಯಿಸಿದೆ. ಈಗ ಬ್ಯಾಂಕ್ ಖಾತೆ ಇಲ್ಲದ ಮಕ್ಕಳೂ ಕೂಡಾ ಯುಪಿಐ ಮೂಲಕ ಹಣ ಪಾವತಿಸಬಹುದು. ಜೊತೆಗೆ ಪೋಷಕರಿಗೆ ಸುರಕ್ಷಿತ ನಿಯಂತ್ರಣ ವ್ಯವಸ್ಥೆ ಇದೆ.

- ಜೂನಿಯೋ ಪೇಮೆಂಟ್ಸ್ಗೆ ಆರ್ಬಿಐ ಅನುಮತಿ
- ಬ್ಯಾಂಕ್ ಖಾತೆ ಇಲ್ಲದೆ ಯುಪಿಐ ಪಾವತಿ ಸಾಧ್ಯ
- ಮಕ್ಕಳ ಹಣ ನಿರ್ವಹಣೆಗೆ ಹೊಸ ಆ್ಯಪ್ ಸೌಲಭ್ಯ
UPI Payment: ಭಾರತದಲ್ಲಿ ಡಿಜಿಟಲ್ ಪಾವತಿಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗ ಮಕ್ಕಳು ಸಹ ಈ ಪಾವತಿ ಕ್ರಾಂತಿಯ ಭಾಗವಾಗಲಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜೂನಿಯೋ ಪೇಮೆಂಟ್ಸ್ ಪ್ರೈವೇಟ್ ಲಿಮಿಟೆಡ್ (Junio Payments Pvt. Ltd.)ಗೆ ಪ್ರೀಪೇಯ್ಡ್ ಪೇಮೆಂಟ್ ಇನ್ಸ್ಟ್ರುಮೆಂಟ್ಗಳನ್ನು (PPIs) ನೀಡಲು ‘ಇನ್-ಪ್ರಿನ್ಸಿಪಲ್’ ಅನುಮತಿ ನೀಡಿದೆ.
ಈ ಕ್ರಮದಿಂದ ಬ್ಯಾಂಕ್ ಖಾತೆ ಇಲ್ಲದ ಮೈನರ್ಗಳು ಕೂಡಾ ಯುಪಿಐ ಪಾವತಿಗಳನ್ನು (UPI Payment) ಮಾಡಲು ಸಾಧ್ಯವಾಗಲಿದೆ. ಜೂನಿಯೋ ಕಂಪನಿ ಈ ಅನುಮತಿಯೊಂದಿಗೆ ಯುವ ಬಳಕೆದಾರರಿಗಾಗಿ ಯುಪಿಐ ಲಿಂಕ್ ಮಾಡಿದ ಡಿಜಿಟಲ್ ವಾಲೆಟ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಇದನ್ನೂ ಓದಿ: ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! ಲೋನ್ ಹಾಗೂ ಇಎಂಐ ಮೇಲೆ ಭಾರಿ ರಿಲೀಫ್ ಘೋಷಣೆ
ಈ ವಾಲೆಟ್ನ ಮೂಲಕ ಮಕ್ಕಳು QR ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು. ಪೋಷಕರ ಖಾತೆಗೆ ಲಿಂಕ್ ಆಗಿರುವುದರಿಂದ ಸುರಕ್ಷತೆಯೊಂದಿಗೆ ವ್ಯವಹಾರ ನಡೆಸಬಹುದು.
ಜೂನಿಯೋ ಆ್ಯಪ್ನ ಉದ್ದೇಶ ಕೇವಲ ಪಾವತಿಗಳು ಮಾತ್ರವಲ್ಲ, ಮಕ್ಕಳಲ್ಲಿ ಹಣ ನಿರ್ವಹಣೆ ಕುರಿತ ಅರಿವು ಮೂಡಿಸುವುದಾಗಿದೆ. ಪೋಷಕರು ತಮ್ಮ ಮಕ್ಕಳ ಖರ್ಚು ಮಿತಿಯನ್ನು ನಿಗದಿಪಡಿಸಬಹುದು, ಟ್ರಾನ್ಸಕ್ಷನ್ಗಳನ್ನು ನೇರವಾಗಿ ತಪಾಸಣೆ ಮಾಡಬಹುದು ಮತ್ತು ಡಿಜಿಟಲ್ ಹಣಕಾಸು ಪಾಠಗಳನ್ನು ಮನರಂಜನೆಯ ರೀತಿಯಲ್ಲಿ ಕಲಿಸಬಹುದು.
ಇದನ್ನೂ ಓದಿ: ಮೋದಿಜಿಯಿಂದ ರೈತರಿಗೆ ಬಂಪರ್ ಸುದ್ದಿ, ₹3 ಲಕ್ಷ ಸಾಲ ಸೌಲಭ್ಯ! ಆನ್ಲೈನ್ನಲ್ಲೇ ಅರ್ಜಿ ಹಾಕಿ
ಈ ಆ್ಯಪ್ನಲ್ಲಿ ಟಾಸ್ಕ್ ಆಧಾರಿತ ರಿವಾರ್ಡ್ಗಳು, ಸೇವಿಂಗ್ ಗುರಿಗಳು ಮತ್ತು ಗೇಮಿಫೈಡ್ ಫೈನಾನ್ಷಿಯಲ್ ಪಾಠಗಳಿವೆ. ರೂಪೇ ಬ್ರ್ಯಾಂಡ್ನ ಫಿಜಿಕಲ್ ಹಾಗೂ ವರ್ಚುವಲ್ ಕಾರ್ಡ್ಗಳ ಮೂಲಕ ಆನ್ಲೈನ್ ಹಾಗೂ ಆಫ್ಲೈನ್ ಪಾವತಿಗಳನ್ನು ಸಹ ಮಾಡಬಹುದು. ಎರಡು ಮಿಲಿಯನ್ಗಿಂತ ಹೆಚ್ಚು ಯುವ ಬಳಕೆದಾರರೊಂದಿಗೆ ಜೂನಿಯೋ ಈಗಾಗಲೇ ಭಾರತದಲ್ಲಿ ಜನಪ್ರಿಯವಾಗಿದೆ.
RBIನ ಈ ಹೊಸ ಹೆಜ್ಜೆ “UPI ಸರ್ಕಲ್ ಇನಿಶಿಯೇಟಿವ್” ಯೋಜನೆಯಡಿ ಯುವ ಪೀಳಿಗೆಯಲ್ಲಿ ಹಣಕಾಸು ಜ್ಞಾನವನ್ನು ಉತ್ತೇಜಿಸಲು ಸಹಾಯ ಮಾಡಲಿದೆ. ಡಿಜಿಟಲ್ ಪಾವತಿಗಳ ಭವಿಷ್ಯವನ್ನು ಇನ್ನಷ್ಟು ವಿಸ್ತರಿಸಲು ಇದು ಮಹತ್ವದ ಹೆಜ್ಜೆ ಎಂದಿದ್ದಾರೆ ತಜ್ಞರು.
RBI Allows Junio Payments to Offer UPI Without Bank Account




