ಮೋದಿಜಿಯಿಂದ ರೈತರಿಗೆ ಬಂಪರ್ ಸುದ್ದಿ, ₹3 ಲಕ್ಷ ಸಾಲ ಸೌಲಭ್ಯ! ಆನ್ಲೈನ್ನಲ್ಲೇ ಅರ್ಜಿ ಹಾಕಿ
Kisan Credit Card: ಭಾರತ ಸರ್ಕಾರದ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರೈತರು ₹3 ಲಕ್ಷವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದಾಗಿದೆ. ಅರ್ಜಿ ಪ್ರಕ್ರಿಯೆ ತುಂಬಾ ಸುಲಭವಾಗಿದೆ.

- ಕಿಸಾನ್ ಕಾರ್ಡ್ ಮೂಲಕ ₹3 ಲಕ್ಷ ಸಾಲ ಸೌಲಭ್ಯ
- ರೈತರಿಗೆ 3% ಬಡ್ಡಿ ರಿಯಾಯಿತಿ ಲಭ್ಯ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಸೌಲಭ್ಯ
Kisan Credit Card: ರೈತರಿಗೆ ಈಗ ಸರ್ಕಾರದಿಂದ ಮತ್ತೊಂದು ಬಂಪರ್ ಸುದ್ದಿ. ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಯೋಜನೆಯಡಿ ಸರ್ಕಾರ ರೈತರಿಗೆ ₹3 ಲಕ್ಷವರೆಗೆ ಸಾಲ (Loan) ನೀಡುತ್ತಿದೆ. ಇದರಿಂದ ಕೃಷಿ ಅವಶ್ಯಕತೆಗಳಿಗಾಗಿ ರೈತರು ಪ್ರೈವೇಟ್ ಸಾಲದಾರರ ಬಳಿ ಹೋಗಬೇಕಾದ ಅಗತ್ಯ ಕಡಿಮೆಯಾಗಿದೆ.
ಭಾರತ ಸರ್ಕಾರದ NABARD ಸಂಸ್ಥೆಯ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಈ ಯೋಜನೆಯಡಿ ರೈತರು ಕೇವಲ ಕ್ರೆಡಿಟ್ ಕಾರ್ಡ್ ಮಾತ್ರವಲ್ಲದೆ, ಒಂದು ಉಳಿತಾಯ ಖಾತೆಯನ್ನೂ ಪಡೆಯುತ್ತಾರೆ. ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ 3% ಬಡ್ಡಿ ರಿಯಾಯಿತಿ ದೊರೆಯುತ್ತದೆ.
ಇದನ್ನೂ ಓದಿ: ಕೇವಲ 10,000ಕ್ಕೆ ನಿಮ್ಮ ಮನೆಯಲ್ಲೇ ಮಿನಿ ಸಿನಿಮಾ ಥಿಯೇಟರ್ ಮಾಡಿಕೊಳ್ಳಿ! ಇಲ್ಲಿದೆ ಬೆಸ್ಟ್ ಪ್ರೊಜೆಕ್ಟರ್ಗಳು
ಅದರಲ್ಲೂ ಸಣ್ಣ ಹಾಗೂ ಅಲ್ಪ ಭೂಸ್ವಾಮ್ಯ ರೈತರಿಗೆ ₹1.6 ಲಕ್ಷವರೆಗೆ ಯಾವುದೇ ಗ್ಯಾರಂಟಿ ಇಲ್ಲದೇ ಸಾಲ ನೀಡಲಾಗುತ್ತದೆ. ಸರ್ಕಾರ ಇದೀಗ ಈ ಯೋಜನೆಯನ್ನು ಸಂಪೂರ್ಣ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಲಭ್ಯವನ್ನಾಗಿಸಿದೆ.
ಈಗ ರೈತರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಿಂದಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ನಂತರ 15 ದಿನಗಳೊಳಗೆ ಕಾರ್ಡ್ ರೈತನಿಗೆ ತಲುಪುತ್ತದೆ. ಬ್ಯಾಂಕ್ ಹಾಗೂ ಸ್ಥಳೀಯ ಆಡಳಿತ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಕಾರ್ಡ್ ನೀಡುತ್ತಾರೆ.
ಇದನ್ನೂ ಓದಿ: ನಂಬಿದ್ರೆ ನಂಬಿ ಬಿಟ್ರೆ ಬಿಡಿ! ತಿಂಗಳಿಗೆ 2,467 ರೂಪಾಯಿ ಸಿಗುವ ಪೋಸ್ಟ್ ಆಫೀಸ್ ಯೋಜನೆ ಇದು
ಎಸ್ಬಿಐ (SBI) ಸೇರಿದಂತೆ ಪ್ರಮುಖ ಬ್ಯಾಂಕ್ಗಳಲ್ಲಿ ರೈತರು ಈ ಸೌಲಭ್ಯ ಪಡೆಯಬಹುದು. ಯೋನೋ ಆಪ್ (YONO App) ಮೂಲಕವೂ ಕಿಸಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆಪ್ನಲ್ಲಿ ‘YONO Krishi’ ವಿಭಾಗದಲ್ಲಿ ‘KCC Review’ ಆಯ್ಕೆ ಮಾಡಿ ಫಾರ್ಮ್ ತುಂಬಬಹುದು.
ಇದನ್ನೂ ಓದಿ: ಕಡಿಮೆ ಕ್ರೆಡಿಟ್ ಸ್ಕೋರ್ನಿಂದ ಕಂಗಾಲಾಗಬೇಡಿ! ಕೇವಲ 1 ತಿಂಗಳಲ್ಲಿ ಹೆಚ್ಚಿಸಿಕೊಳ್ಳಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆಯುತ್ತಿರುವ ರೈತರು ಈ ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ಹೆಚ್ಚುವರಿ ಪ್ರಯೋಜನ ಪಡೆಯಬಹುದು. ಕೃಷಿಗೆ ಅಗತ್ಯವಾದ ಹೂಡಿಕೆಗೆ ತಕ್ಷಣದ ಹಣದ ವ್ಯವಸ್ಥೆ ದೊರೆಯುವುದರಿಂದ, ರೈತರಿಗೆ ಇದು ನಿಜಕ್ಕೂ ಬೃಹತ್ ಸಹಾಯವಾಗಿದೆ.
Farmers can get 3 lakh loan from PM Kisan Card, Apply online easily




