ಕಡಿಮೆ ಕ್ರೆಡಿಟ್ ಸ್ಕೋರ್‌ನಿಂದ ಕಂಗಾಲಾಗಬೇಡಿ! ಕೇವಲ 1 ತಿಂಗಳಲ್ಲಿ ಹೆಚ್ಚಿಸಿಕೊಳ್ಳಿ

Credit Score: ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಚಿಂತಿಸಬೇಕಾಗಿಲ್ಲ. EMI, ಬಿಲ್ ಪಾವತಿ, ಕ್ರೆಡಿಟ್ ಕಾರ್ಡ್ ಬಳಕೆ ನಿಯಂತ್ರಣ ಮತ್ತು ಸಮಯಕ್ಕೆ ಪಾವತಿ ಮಾಡಿದರೆ ಕೇವಲ ಒಂದು ತಿಂಗಳಲ್ಲಿ ಸ್ಕೋರ್ ಸುಧಾರಿಸಬಹುದು.

Credit Score: ಕ್ರೆಡಿಟ್ ಸ್ಕೋರ್ ಎಂದರೆ ವ್ಯಕ್ತಿಯ ಆರ್ಥಿಕ ನಡವಳಿಕೆಯನ್ನು ತೋರಿಸುವ ಅಳತೆಯಾಗಿದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸಾಲ ನೀಡುವ ಮೊದಲು ಈ ಸ್ಕೋರ್ ಪರಿಶೀಲಿಸುತ್ತವೆ.

ಉತ್ತಮ ಕ್ರೆಡಿಟ್ ಸ್ಕೋರ್ (700 ಕ್ಕಿಂತ ಹೆಚ್ಚು) ಇದ್ದರೆ, ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ (Loan) ಪಡೆಯಬಹುದು. ಆದರೆ 300 ರಿಂದ 500 ನಡುವಿನ ಸ್ಕೋರ್ ಅಲ್ಪಮಟ್ಟದ್ದು ಎಂದು ಪರಿಗಣಿಸಲಾಗುತ್ತದೆ.

ಸ್ಕೋರ್ ಸುಧಾರಿಸಲು ತಿಂಗಳುಗಳು ಬೇಕು ಎನ್ನುವವರೂ ಇದ್ದಾರೆ, ಆದರೆ ಸರಿಯಾದ ಕ್ರಮ ತೆಗೆದುಕೊಂಡರೆ ಕೇವಲ ಒಂದು ತಿಂಗಳಲ್ಲೇ ಗಮನಾರ್ಹ ಬದಲಾವಣೆಯನ್ನು ಕಾಣಬಹುದು.

ಇದನ್ನೂ ಓದಿ: 100 ಕಿಮೀ ರೇಂಜ್, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ! ಕಮ್ಮಿ ಬೆಲೆಗೆ ಹೊಸ ಮಾದರಿ ಬಿಡುಗಡೆ

ಪ್ರಮುಖ ವಿಷಯ ಎಂದರೆ, ನಿಮ್ಮ ಬಿಲ್ ಹಾಗೂ EMI ಪಾವತಿಯನ್ನು ಯಾವಾಗಲೂ ಸಮಯಕ್ಕೆ ಮಾಡಬೇಕು. ಕ್ರೆಡಿಟ್ ಕಾರ್ಡ್ ಮಿತಿಯನ್ನು ಮೀರಿಸದೆ, ಅವಶ್ಯಕ ವೆಚ್ಚಗಳಿಗಷ್ಟೇ ಬಳಸಿ.

ಮತ್ತೊಂದು ಮುಖ್ಯ ಅಂಶ ಕ್ರೆಡಿಟ್ ಯೂಟಿಲೈಜೆಷನ್ ರೇಶಿಯೋ. ಅಂದರೆ ನೀವು ನಿಮ್ಮ ಮಿತಿ ಮೀರಿ ಖರ್ಚು ಮಾಡುತ್ತಿದ್ದೀರಾ ಎನ್ನುವುದು. ಈ ಪ್ರಮಾಣ ಹೆಚ್ಚಾದರೆ ಸ್ಕೋರ್ ಕುಸಿಯುತ್ತದೆ. ಅದನ್ನು 30% ಕ್ಕಿಂತ ಕಡಿಮೆ ಇಡುವುದು ಸೂಕ್ತ. ಆಗ ಬ್ಯಾಂಕ್‌ಗಳಿಗೆ ನಿಮ್ಮ ಹಣಕಾಸು ನಡವಳಿಕೆ ವಿಶ್ವಾಸಾರ್ಹವಾಗಿ ಕಾಣುತ್ತದೆ.

ಇದನ್ನೂ ಓದಿ: Best Cars: ಬೆಲೆ ಕೇವಲ 3.50 ಲಕ್ಷದಿಂದ ಆರಂಭ! ಭಾರತದಲ್ಲಿ ಇವೇ ಅಗ್ಗದ ಹೊಸ ಕಾರುಗಳು

ಮತ್ತೆಮತ್ತೆ ಸಾಲದ ಅರ್ಜಿ ಸಲ್ಲಿಸುವುದು ತಪ್ಪು ಅಭ್ಯಾಸ. ಇದು ಕ್ರೆಡಿಟ್ ವರದಿಯಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಬದಲಿಗೆ ಸಕಾಲದಲ್ಲಿ ಪಾವತಿ ಮಾಡಿ, ಜವಾಬ್ದಾರಿಯುತ ಹಣಕಾಸು ನಡವಳಿಕೆಯನ್ನು ತೋರಿಸುವುದು ಅತ್ಯುತ್ತಮ ಕ್ರಮ. ಈ ಕ್ರಮಗಳನ್ನು ಅನುಸರಿಸಿದರೆ, ಕೇವಲ 30 ದಿನಗಳಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸುತ್ತದೆ.

How to Improve Your Credit Score in Just 1 Month

English Summary▼

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories