60 ಲಕ್ಷ ರೂಪಾಯಿ ಹೋಂ ಲೋನ್ ತಗೊಂಡ್ರೆ ತಿಂಗಳಿಗೆ ಕಟ್ಟಬೇಕಾದ EMI ಎಷ್ಟು?
- ಎಸ್ ಬಿ ಐ ಗೃಹ ಸಾಲ ತೆಗೆದುಕೊಳ್ಳುವವರಿಗೆ ನೀಡಿದೆ ಬಂಪರ್ ಆಫರ್
- ಕೇವಲ 8.5% ಬಡ್ಡಿ ದರದಿಂದ ಹೋಂ ಲೋನ್ ಆರಂಭ
- 60 ಲಕ್ಷ ರೂಪಾಯಿ ಸಾಲಕ್ಕೆ ಭರಿಸಬೇಕಾದ EMI ಎಷ್ಟು
Home Loan : ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅನ್ನುವ ಮಾತೇ ಇದೆ ಇವೆರಡು ಬಹಳ ಕಷ್ಟದ ಕೆಲಸ.. ನಾವು ಹಣವಂತರಾಗಿದ್ದರೆ, ಬಹುಶಃ ಇದೆರಡು ಕೆಲಸ ಸ್ವಲ್ಪ ಸುಲಭವಾಗಬಹುದು. ಮನೆ ಕಟ್ಟುವಂತಹ ಕನಸನ್ನು ನನಸು ಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ.
ಒಂದು ಮನೆ ಕಟ್ಟಬೇಕು ಅಂದ್ರೆ ಬ್ಯಾಂಕ್ಗಳಲ್ಲಿ ಗೃಹ ಸಾಲವನ್ನು (Bank Home Loan) ತೆಗೆದುಕೊಳ್ಳಬಹುದು. ಈಗ ಬೇರೆ ಬೇರೆ ಬ್ಯಾಂಕುಗಳು ತಮ್ಮದೇ ಆಗಿರುವ ನಿಯಮಗಳನ್ನ ಹೊಂದಿರುವ ಗೃಹ ಸಾಲವನ್ನು ಮಂಜೂರು ಮಾಡುತ್ತವೆ.
ನೀವು ಪ್ರತಿ ತಿಂಗಳು ಎಷ್ಟು ಹಣವನ್ನು ಸಂಪಾದನೆ ಮಾಡುತ್ತೀರಿ, ಬ್ಯಾಂಕ್ ನಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಎಷ್ಟಿದೆ ಎನ್ನುವುದರ ಆಧಾರದ ಮೇಲೆ ಸುಲಭವಾಗಿ ಬ್ಯಾಂಕಿನಿಂದ ದೊಡ್ಡ ಮೊತ್ತದ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಪ್ರತಿ ತಿಂಗಳು ಭರಿಸಬೇಕು EMI
ಬ್ಯಾಂಕುಗಳಲ್ಲಿ ನಮಗೆ ಬೇಕಾಗಿರುವಷ್ಟು ಮೊತ್ತದ ಸಾಲ ತೆಗೆದುಕೊಳ್ಳಬಹುದು. ನಂತರ 20 ಅಥವಾ 30 ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡು ಪ್ರತಿ ತಿಂಗಳು EMI ಮೂಲಕ ಹಣ ಪಾವತಿ ಮಾಡಬೇಕಾಗುತ್ತದೆ. ಇದೀಗ ಗೃಹ ಸಾಲವನ್ನು ನೀವು ಎಸ್ ಬಿ ಐ ಬ್ಯಾಂಕ್ ನಲ್ಲಿ ತೆಗೆದುಕೊಂಡರೆ ಕೇವಲ 8.50% ಬಡ್ಡಿ ದರ ವಿಧಿಸಲಾಗುತ್ತದೆ. ಕಾಲಕ್ಕೆ ತಕ್ಕಂತೆ ಈ ಬಡ್ಡಿ ದರದಲ್ಲಿ ವ್ಯತ್ಯಾಸವಾಗಬಹುದು.
ಇನ್ನು ಮಹಿಳೆಯರು ಗೃಹ ಸಾಲ ತೆಗೆದುಕೊಂಡರೆ 0.05% ನಷ್ಟು ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯ. ಗೃಹ ಸಾಲವನ್ನು 25 ವರ್ಷದಿಂದ 30 ವರ್ಷಗಳ ವರೆಗೆ ವಿಸ್ತರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಗೃಹ ಸಾಲವನ್ನು ಮರುಪಾವತಿ ಮಾಡುವುದಕ್ಕೆ ಹೆಚ್ಚು ಸಮಯ ಸಿಗುತ್ತದೆ.
ಇನ್ನು ನೀವು ತೆಗೆದುಕೊಂಡ ಸಾಲಕ್ಕೆ 2000 ರೂ.ಗಳಿಂದ ರೂ.10,000 ವರೆಗೂ ಪ್ರೋಸಸಿಂಗ್ ಫೀ ಹಾಗೂ ಇತರ ಶುಲ್ಕಗಳನ್ನು ವಿಧಿಸಲಾಗುತ್ತದೆ. ನಿಮ್ಮ ಆಸ್ತಿ ಮೌಲ್ಯದ ಶೇಕಡ 90% ವರೆಗೂ ಸಾಲವನ್ನು ಬ್ಯಾಂಕ್ ನಲ್ಲಿ (Bank Loan) ಪಡೆಯಬಹುದು.
8.5% ಬಡ್ಡಿಯಲ್ಲಿ 60 ಲಕ್ಷ ರೂಪಾಯಿಗಳಿಗೆ ಪಾವತಿಸಬೇಕಾಗುವ EMI ಮೊತ್ತ ಎಷ್ಟು?
30 ವರ್ಷಗಳ ಅವಧಿಗೆ : ಒಟ್ಟು ಪಾವತಿಸಬೇಕಾದ ಮೊತ್ತ, 1,66,08,600 ರೂಪಾಯಿಗಳು
EMI – 46135 ರೂಪಾಯಿಗಳು
25 ವರ್ಷಗಳ ಅವಧಿಗೆ ಹುಟ್ಟು ಪಾವತಿಸಬೇಕಾದ ಮೊತ್ತ – 1,44,94, 088 ರೂಪಾಯಿಗಳು. ಒಟ್ಟು ಬಡ್ಡಿ 84,94, 088 ರೂಪಾಯಿಗಳು
EMI – 48,314 ರೂಪಾಯಿಗಳು.
20 ವರ್ಷಗಳ ಅವಧಿಗೆ ಕಟ್ಟಬೇಕಾದ ಒಟ್ಟು ಮೊತ್ತ – 1,24,96,655 ರೂಪಾಯಿಗಳು
EMI ಮೊತ್ತ – 52, 069 ರೂಪಾಯಿಗಳು
ಒಟ್ಟು ಬಡ್ಡಿ – 64,96,665 ರೂಪಾಯಿಗಳು.
ಈ ಬಡ್ಡಿ ದರ ಹಾಗೂ ಒಟ್ಟಾರೆಯಾಗಿ ಕಟ್ಟಬೇಕಾದ ಮೊತ್ತವನ್ನು ಲೆಕ್ಕಾಚಾರ ಹಾಕಿ ಗೃಹ ಸಾಲವನ್ನು ತೆಗೆದುಕೊಳ್ಳಿ. ಸಾಲದ ಮೊತ್ತ ನಿಮ್ಮ ಆಸ್ತಿ ಮೌಲ್ಯ ಅಥವಾ ದುಡಿಮೆಗಿಂತ ಕಡಿಮೆ ಇದ್ದರೆ ಆರ್ಥಿಕವಾಗಿ ಯಾವುದೇ ರೀತಿಯ ಹೊರೆಯಾಗುವುದಿಲ್ಲ.
How much would the monthly EMI be if you take a home loan of 60 lakh rupees