ಆಧಾರ್ ಕಾರ್ಡ್ ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಚೇಂಜ್ ಮಾಡೋದು ಹೇಗೆ? ಮನೆಯಲ್ಲೇ ಕುಳಿತು ಮಾಡಬಹುದಾ?

Story Highlights

ನಿಮ್ಮ ಮೊಬೈಲ್ ನಂಬರ್ ಬದಲಾದರೂ ಕೂಡ ತಕ್ಷಣವೇ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಹೊಸ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಮಾಡಿಸಿ. ಇದನ್ನು ನೀವು ಸುಲಭವಾಗಿ ಮಾಡಬಹುದು

ಭಾರತದ ಸದಸ್ಯರಿಗೆ ಬಹಳ ಮುಖ್ಯವಾಗಿ ಬೇಕಾಗಿರುವ ವಸ್ತು ಈಗ ಆಧಾರ್ ಕಾರ್ಡ್ (Aadhaar Card) ಆಗಿದೆ. ಇದೊಂದು ಕಾರ್ಡ್ ಇದ್ದರೆ ಸರ್ಕಾರದ ಯೋಜನೆಗಳ ಸೌಲಭ್ಯಗಳ ಪಡೆಯಬಹುದು. ಒಂದು ಕೆಲಸಕ್ಕೆ ಅಪ್ಲೈ ಮಾಡುವುದರಿಂದ ಹಿಡಿದು, ಬ್ಯಾಂಕ್ ಕೆಲಸಗಳು ಮತ್ತು ಇನ್ನಿತರ ಎಲ್ಲಾ ಕೆಲಸಗಳಿಗೆ ಈಗ ಆಧಾರ್ ಕಾರ್ಡ್ ಬೇಕೇ ಬೇಕು.

ಅದಿಲ್ಲದೆ ಮುಖ್ಯವಾದ ಕೆಲಸಗಳಿಗೂ ಆಧಾರ್ ಕಾರ್ಡ್ ಬೇಕೇ ಬೇಕು.. ಹಾಗಾಗಿ ಆಧಾರ್ ಕಾರ್ಡ್ ಅನ್ನು ಕೆಲವು ಪ್ರಮುಖ ಡಾಕ್ಯುಮೆಂಟ್ ಗಳ ಜೊತೆಗೆ ಲಿಂಕ್ ಮಾಡಬೇಕು ಎಂದು ಹೇಳಲಾಗಿದೆ. ಅದರಲ್ಲಿ ಪ್ರಮುಖವಾಗಿ ನಿಮ್ಮ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಮಾಡಬೇಕು. ಆಗಾಗ ನಿಮ್ಮ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸುತ್ತಿರಬೇಕು.

ಜಸ್ಟ್ ₹100 ರೂಪಾಯಿ ಖರ್ಚು.. 500 ಕಿ.ಮೀ ಸುತ್ತಾಡಬಹುದು, ಬಂದೇ ಬಿಡ್ತು ಬಜೆಟ್ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್!

ಒಂದು ವೇಳೆ ನಿಮ್ಮ ಮೊಬೈಲ್ ನಂಬರ್ ಬದಲಾದರೂ ಕೂಡ ತಕ್ಷಣವೇ ಆಧಾರ್ ಕಾರ್ಡ್ ಜೊತೆಗೆ ನಿಮ್ಮ ಹೊಸ ಮೊಬೈಲ್ ನಂಬರ್ ಜೊತೆಗೆ ಲಿಂಕ್ ಮಾಡಿಸಿ. ಇದನ್ನು ನೀವು ಸುಲಭವಾಗಿ ಮಾಡಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ಲೇಖನವನ್ನು ಪೂರ್ತಿಯಾಗಿ ಓದಿ.. ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಚೇಂಜ್ ಮಾಡುವ ಪ್ರಕ್ರಿಯೆ ಮನೆಯಲ್ಲಿ ಅಥವಾ ಆನ್ಲೈನ್ ಮೂಲಕ ಮಾಡಲು ಆಗುವುದಿಲ್ಲ.

ಇದಕ್ಕಾಗಿ ಆಧಾರ್ ಕೇಂದ್ರಕ್ಕೆ (Aadhaar Update Center) ಹೋಗಬೇಕು, ನಿಮಗೆ ಹತ್ತಿರದಲ್ಲಿ ಆಧಾರ್ ಕೇಂದ್ರ (Aadhaar Kendra) ಎಲ್ಲಿದೆ ಎನ್ನುವುದನ್ನು UIDAI ವೆಬ್ಸೈಟ್ ಮೂಲಕ ಪತ್ತೆ ಮಾಡಿ. ಈ ಪ್ರಕ್ರಿಯೆಯನ್ನು ನೀವು ಆಧಾರ್ ಕೇಂದ್ರಕ್ಕೆ ಹೋಗಿ ಮಾತ್ರವೇ ಪೂರ್ತಿಗೊಳಿಸಬಹುದು. ಆಧಾರ್ ಅಪ್ಡೇಟ್ ಕೇಂದ್ರಕ್ಕೆ ಹೋಗಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಬದಲಾಯಿಸಲು ಅಪ್ಲಿಕೇಶನ್ ಅನ್ನು ಕೇಳಿ ಪಡೆಯಿರಿ.

ಅಪ್ಲಿಕೇಶನ್ ನಲ್ಲಿ ಕೇಳಿರುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಫಿಲ್ ಮಾಡಿದ ನಂತರ, ಆಧಾರ್ ಕೇಂದ್ರದ ಸಹಾಯ ನಿರ್ವಾಹಕರಿಗೆ ಅದನ್ನು ನೀಡಿ. ಹೊಸ ಫೋನ್ ನಂಬರ್ ಲಿಂಕ್ ಮಾಡಲು ನೀವು ಕೆಲವು ದಾಖಲೆಗಳನ್ನು ಸಬ್ಮಿಟ್ ಮಾಡಬೇಕಾಗುತ್ತದೆ. ಹೀಗಿರುವ ಆಧಾರ್ ಕಾರ್ಡ್ ನಿಮ್ಮ ಅಡ್ರೆಸ್ ಪ್ರೂಫ್ ಹಾಗೂ ಇನ್ನೂ ಕೆಲವು ದಾಖಲೆಗಳನ್ನು ಕೇಳುತ್ತಾರೆ ಅದೆಲ್ಲವನ್ನು ನೀವು ಸರಿಯಾಗಿ ಸಲ್ಲಿಸಬೇಕು.

ಜೀರೋ ಡೌನ್ ಪೇಮೆಂಟ್, ಜೀರೋ ಬಡ್ಡಿ! ₹1 ರೂಪಾಯಿ ಪಾವತಿಸದೇ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ.. ಇದಕ್ಕಿಂತ ಆಫರ್ ಬೇಕಾ?

Aadhaar Card Updateಜೊತೆಗೆ ರೂ. 50 ಶುಲ್ಕವನ್ನು ಕೂಡ ನೀಡಬೇಕಾಗುತ್ತದೆ. ನೀವು ಅಪ್ಲಿಕೇಶನ್ ಸಲ್ಲಿಸಿದ ನಂತರ ಆಧಾರ್ ಕೇಂದ್ರದಲ್ಲಿರುವ ಸಹಾಯಕ ನಿರ್ವಾಹಕರು ನಿಮಗೆ ಯುಆರ್‌ಎನ್ ನಂಬರನ್ನು ನೀಡುತ್ತಾರೆ. ಈ ನಂಬರ್ ಮೂಲಕ ನೀವು ನಿಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗುತ್ತಿರುವ ಪ್ರಕ್ರಿಯೆ ಯಾವ ಹಂತದಲ್ಲಿದೆ ಎನ್ನುವುದನ್ನು ಟ್ರ್ಯಾಕ್ ಮಾಡಬಹುದು.

ಇದನ್ನು ಟ್ರ್ಯಾಕ್ ಮಾಡಲು ನೀವು ಯುಐಡಿಎಐ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ myaadhaar.uidai.gov.in . ಅಧಿಕೃತ ವೆಬ್ಸೈಟ್ಗೆ ಹೋದ ನಂತರ ರಿಜಿಸ್ಟ್ರೇಷನ್ ಪರಿಶೀಲನೆ ಮಾಡುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಅಲ್ಲಿ ಕೇಳುವ ಮಾಹಿತಿಗಳನ್ನು ನೀಡಿ ನಿಮ್ಮ URN ನಂಬರ್ ಅನ್ನು ಎಂಟ್ರಿ ಮಾಡಿ.

SBI ತಂದಿದೆ ಬಂಪರ್ ಆಫರ್! WeCare ಯೋಜನೆಯಲ್ಲಿ ಹೂಡಿಕೆ ಮಾಡಿ ಮಿಲಿಯನೇರ್ ಆಗಿ! ಅಷ್ಟಕ್ಕೂ ಏನಿದು ಸ್ಕೀಮ್

ಈಗ ನಿಮ್ಮ ಫೋನ್ ನಂಬರ್ (Phone Number) ಲಿಂಕ್ ಆಗುವ ಪ್ರೋಸೆಸ್ ಯಾವ ಹಂತದಲ್ಲಿದೆ ಎಂದು ತೋರಿಸುತ್ತದೆ. ಫೋನ್ ನಂಬರ್ ಲಿಂಕ್ ಆಗುವುದಕ್ಕೆ ಜನರಲ್ ಆಗಿ 90 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಆ 90 ದಿನಗಳು ಕಳೆಯುವವರೆಗೂ ಈ ಹಿಂದೆ ನೀವು ಆಧಾರ್ ಕಾರ್ಡ್ಗೆ ಲಿಂಕ್ ಮಾಡಿರುವ ಫೋನ್ ನಂಬರ್ ಗೆ ಎಲ್ಲಾ ವಿವರಗಳು ಮಾಹಿತಿಗಳು ಹೋಗುತ್ತದೆ.

ಆಧಾರ್ ಕಾರ್ಡ್ ವಿಚಾರದಲ್ಲಿ ಯುಐಡಿಎ ಐ ನಿಯಮಗಳನ್ನು (UIDAI Rules) ಆಗಾಗ ಜಾರಿಗೆ ತರುತ್ತಲೇ ಇರುತ್ತದೆ. ಈ ನಿಯಮಗಳ ಪ್ರಕಾರ 10 ವರ್ಷಗಳಿಗೆ ಒಂದು ಸಾರಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ ಸುತ್ತಲೇ ಇರಬೇಕು ಯಾವುದಾದರೂ ಒಂದು ಮಾಹಿತಿ ತಪ್ಪಾಗಿದ್ದರೆ ಅಥವಾ ಯಾವುದಾದರೂ ಮಾಹಿತಿಯನ್ನು ಸರಿಪಡಿಸಬೇಕು ಎಂದರೆ 10 ವರ್ಷಗಳಿಗೆ ಒಂದು ಸಾರಿಯಾದರೂ ಅವುಗಳಲ್ಲಿ ಅಪ್ಡೇಟ್ (Aadhaar Update) ಮಾಡಿಸಬೇಕು.

ಹಳೆಯದು ಎಂದು ಬಿಟ್ಟಿದ್ದ 1 ರೂಪಾಯಿ ನಾಣ್ಯದಿಂದಲೇ ಲಕ್ಷ ಗಳಿಸುವ ಅವಕಾಶ! ಅಪ್ಪಿ ತಪ್ಪಿಯೂ ಮಿಸ್ ಮಾಡ್ಕೋಬೇಡಿ

ಮೊದಲ ಸಾರಿ ಆಧಾರ್ ಕಾರ್ಡ್ ಪಡೆಯುವಾಗ ನೀಡಿರುವ ಮಾಹಿತಿಗಳಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂದರೆ ಅದನ್ನು ಮಾಡಿಸಬೇಕು. ಇಲ್ಲದಿದ್ದರೆ ನಿಮ್ಮ ಆಧಾರ್ ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಅದರಲ್ಲೂ ನೀವು ಫೋನ್ ನಂಬರನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡುವ ಪ್ರಕ್ರಿಯೆ ಬಹಳ ಮುಖ್ಯವಾದದ್ದು ಇದರಿಂದ ವಂಚನೆ ಅಕ್ರಮಗಳು ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗಾಗಿ ವರ್ಷಕ್ಕೆ ಒಂದು ಸಾರಿಯಾದರೂ ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಫೋನ್ ನಂಬರ್ ಲಿಂಕ್ ಆಗಿರುವ ಸಂಖ್ಯೆ ಸರಿಯಾಗಿದೆ ಎಂದು ಪರೀಕ್ಷಿಸಿ, ಅಪ್ಡೇಟ್ ಮಾಡಿ.

How To Change Your Mobile Number Linked to Aadhaar Card

Related Stories