SBI Fixed Deposit : ಒಂದು ವೇಳೆ ನಿಮ್ಮ ಹತ್ತಿರ ಹೆಚ್ಚಿನ ಹಣವಿದ್ದರೆ, ಆ ಹಣವನ್ನು ನೀವು ಉತ್ತಮವಾದ ಯೋಜನೆಯಲ್ಲಿ ಹೂಡಿಕೆ (Money Investment) ಮಾಡುವುದು ಅತ್ಯುತ್ತಮವಾದ ಆಯ್ಕೆ ಆಗಿದೆ. ಇದರಿಂದಾಗಿ ನೀವು ಉತ್ತಮವಾದ ಲಾಭ ಪಡೆಯಬಹುದು. ಈ ರೀತಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಮಾಡುವುದದಿಂದ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಹಾಗೆಯೇ ಉತ್ತಮವಾಗಿ ಬಡ್ಡಿ ಕೂಡ ಸಿಗುತ್ತದೆ.
ಇದರಿಂದ ಒಳ್ಳೆಯ ಲಾಭ ನಿಮ್ಮದಾಗುತ್ತದೆ. ಒಂದು ವೇಳೆ ನೀವು ಸ್ಥಿರ ಠೇವಣಿ ಮಾಡಬೇಕು ಎಂದುಕೊಂಡಿದ್ದರೆ, ಪೋಸ್ಟ್ ಆಫೀಸ್ ಮತ್ತು ಎಸ್.ಬಿ.ಐ (SBI) ನಲ್ಲಿ ಫಿಕ್ಸ್ಡ್ ಡೆಪಾಸಿಟ್ ಖಾತೆ ತೆರೆಯುವುದು ಉತ್ತಮವಾದ ಆಯ್ಕೆ ಆಗಿದೆ. ನೀವು ಹೂಡಿಕೆ ಮಾಡುವ ಹಣಕ್ಕೆ ಉತ್ತಮವಾದ ಪ್ರಯೋಜನ ಮತ್ತು ಖಂಡಿತವಾದ ಲಾಭ ಬರುವಂಥ ಯೋಜನೆ ಬೇಕು ಎಂದರೆ..
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank of India) SBI Wecare Scheme ನಿಮಗೆ ಒಳ್ಳೆಯ ಆಯ್ಕೆ ಆಗಿದೆ. ಹಣ ಇನ್ವೆಸ್ಟ್ ಮಾಡುವುದಕ್ಕೆ ಇದೊಂದು ಅತ್ಯುತ್ತಮ ಯೋಜನೆ ಆಗಿದ್ದು, ಇದರಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚು ಬಡ್ಡಿದರ ಪಡೆಯುವುದರ ಜೊತೆಗೆ ಬಹಳ ಬೇಗ ನಿಮ್ಮ ಹಣ ದುಪ್ಪಟ್ಟು ಆಗುತ್ತದೆ.
ಹಳೆಯದು ಎಂದು ಬಿಟ್ಟಿದ್ದ 1 ರೂಪಾಯಿ ನಾಣ್ಯದಿಂದಲೇ ಲಕ್ಷ ಗಳಿಸುವ ಅವಕಾಶ! ಅಪ್ಪಿ ತಪ್ಪಿಯೂ ಮಿಸ್ ಮಾಡ್ಕೋಬೇಡಿ
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಗರಿಷ್ಠ ಮೊತ್ತದ ಮಿತಿಯನ್ನು ಇಡಲಾಗಿದೆ, ಈ ಯೋಜನೆಯಲ್ಲಿ ನೀವು ₹2 ಕೋಟಿಗಿಂತ ಕಡಿಮೆ ಹಣ ಹೂಡಿಕೆ ಮಾಡಬಹುದು. ಹಾಗೆಯೇ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಇರುವ ಮೆಚ್ಯುರಿಟಿ ಅವಧಿ, 5 ವರ್ಷಗಳು ಮತ್ತು 10 ವರ್ಷಗಳು. ಇಷ್ಟು ಸಮಯಕ್ಕೆ ನಿಮ್ಮ ಹಣವನ್ನು SBI Wecare ಯೋಜನೆಯಲ್ಲಿ ಹೂಡಿಕೆ ಮಾಡಬಹುದು..
SBI Wecare ಯೋಜನೆಯಲ್ಲಿ ನಿಮಗೆ ಬ್ಯಾಂಕ್ ಕಡೆಯಿಂದ 7.5% ಬಡ್ಡಿ (Interest Rate) ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ನಿಮ್ಮ ಕಾರ್ಡ್ ರೇಟ್ ನಲ್ಲಿ 30bps ಅಷ್ಟು ಹೆಚ್ಚುವರಿ ಪ್ರೀಮಿಯಂ ಕೂಡ ಸೆಪರೇಟ್ ಆಗಿ ನಿಮಗೆ ಸಿಗುತ್ತದೆ.. ಈ ಯೋಜನೆ ವಿಶೇಷವಾಗಿ ನಮ್ಮ ದೇಶದ ಹಿರಿಯ ಸದಸ್ಯರಿಗೆಂದು ಶುರು ಮಾಡಿರುವ ಯೋಜನೆ ಆಗಿದ್ದು..
ಇದು ಸರ್ಕಾರಿ ಬ್ಯಾಂಕ್ ಯೋಜನೆ (Government Bank Scheme) ಆಗಿರುವುದರಿಂದ, ನೀವು ಆದಾಯದ ಬಗ್ಗೆ ಮತ್ತು ಸುರಕ್ಷತೆ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ಈ ಯೋಜನೆ ಉತ್ತಮ ಆದಾಯ ನೀಡುವ, ವಿಶೇಷವಾದ ಇನ್ವೆಸ್ಟ್ಮೆಂಟ್ ಯೋಜನೆ (Investment Scheme) ಆಗಿದೆ.. ಈ ಯೋಜನೆಯಲ್ಲಿ ನಿಮಗೆ ಸಿಗುವ ಬಡ್ಡಿಯ ಹಣದಲ್ಲಿ, ನಿಮಗೆ ಡಬಲ್ ಲಾಭ ಸಿಗುತ್ತದೆ.
ಈ ಯೋಜನೆ ಮುಗಿದ ಬಳಿಕ ನಿಮಗೆ ಕೈತುಂಬಾ ಹಣ ಸಿಗುತ್ತದೆ. ಅಷ್ಟೇ ಅಲ್ಲದೆ, ಈ ಫಿಕ್ಸ್ಡ್ ಡೆಪಾಸಿಟ್ ಮೇಲೆ ನೀವು ಬ್ಯಾಂಕ್ ಇಂದ ಸಾಲ ಕೂಡ ಪಡೆಯಬಹುದು. SBI ನ ಈ ಯೋಜನೆಯಲ್ಲಿ ನೀವು ₹5ಲಕ್ಷ ರೂಪಾಯಿಗಳನ್ನು 10 ವರ್ಷಗಳ ವರೆಗು ಹೂಡಿಕೆ ಮಾಡಿದರೆ, ಎರಡು ರೀತಿಯಲ್ಲಿ ನಿಮಗೆ ಆದಾಯ ಬರುತ್ತದೆ.
ದಿಢೀರ್ ಹಣ ಗಳಿಸಬೇಕಾ? ಈ 4 ಕೆಲಸಗಳನ್ನು ಮಾಡಿ ಸಾಕು.. ಕೈತುಂಬಾ ಆದಾಯ! ಅಷ್ಟೇನೂ ಕಷ್ಟ ಇಲ್ಲ
ಅದು ಹೇಗೆ? ಎಷ್ಟು ಆದಾಯ ಬರುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಇಲ್ಲಿ ನೀವು ಹೂಡಿಕೆ ಮಾಡುವ ಮೊತ್ತ ₹5ಲಕ್ಷ, ಹೂಡಿಕೆಯ ಅವಧಿ 10 ವರ್ಷಗಳು, ಇಲ್ಲಿ ನಿಮಗೆ ಸಿಗುವ ಬಡ್ಡಿದರ 7.50%, ಒಟ್ಟಾರೆ ಹೂಡಿಕೆ ಮೊತ್ತ 5 ಲಕ್ಷ ರೂಪಾಯಿಗಳು, ನಿಮಗೆ ಸಿಗುವ ಒಟ್ಟು ಆದಾಯದ ಅಂದಾಜು ₹5,51,175 ರೂಪಾಯಿ. ಮೆಚ್ಯುರಿಟಿ ಬಳಿಕ ನಿಮಗೆ ಸಿಗುವ ಒಟ್ಟು ಮೊತ್ತ, ₹10,51,175 ರೂಪಾಯಿ.
SBI Wecare ಯೋಜನೆಯಲ್ಲಿ ನಿಮಗೆ ಸಿಗುವ ಮೊತ್ತ ಇಷ್ಟು, SBI ನ ಸಾಮಾನ್ಯ ಹೂಡಿಕೆ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ, ಬಡ್ಡಿಹಣ ಮತ್ತು ಆದಾಯ ಇಷ್ಟು ಇರುವುದಿಲ್ಲ. ಬೇರೆ ಯೋಜನೆಯಲ್ಲಿ ನಿಮಗೆ ಸಿಗುವುದು 6.50% ಬಡ್ಡಿ ಮಾತ್ರ ಆಗಿರುತ್ತದೆ. ಅದರಲ್ಲಿ ನಿಮಗೆ ಆದಾಯ ಹೇಗೆ ಬರುತ್ತದೆ ಎಂದು ಹೋಲಿಸಿ ನೋಡಿದರೆ ನಿಮಗೆ ಅರ್ಥವಾಗುತ್ತದೆ.
ಉಚಿತವಾಗಿ ₹22 ಸಾವಿರ ಪಡೆಯಿರಿ, ಮೋದಿ ಸರ್ಕಾರದ ಬಂಪರ್ ಆಫರ್! ಆಗಸ್ಟ್ 15ರವರೆಗೆ ಮಾತ್ರ
ಸಾಮಾನ್ಯ ಯೋಜನೆಯಲ್ಲಿ ನೀವು 10 ವರ್ಷಗಳ ಕಾಲಕ್ಕೆ, ₹5 ಲಕ್ಷ ಹೂಡಿಕೆ ಮಾಡಿದರೆ, ನಿಮಗೆ ಸಿಗುವ ಬಡ್ಡಿದರ 6.50%, ಒಟ್ಟಾರೆಯಾಗಿ ನೀವು ಹೂಡಿಕೆ ಮಾಡಿದ ಮೊತ್ತ 5 ಲಕ್ಷ ರೂಪಾಯಿಗಳು, ಇದರಲ್ಲಿ ನಿಮಗೆ ಸಿಗುವ ಒಟ್ಟು ಬಡ್ಡಿ ಮೊತ್ತ ₹4,52,779 ರೂಪಾಯಿಗಳು. ಮೆಚ್ಯುರಿಟಿ ನಂತರ ನಿಮ್ಮ ಕೈಗೆ ಬರುವ ಮೊತ್ತ ₹9,52,779 ರೂಪಾಯಿ ಆಗಿರುತ್ತದೆ.
ಎರಡು ಬೇರೆ ಬೇರೆ ಯೋಜನೆಯಲ್ಲಿ ಒಂದೇ ಮೊತ್ತ ಹೂಡಿಕೆ ಮಾಡಿದಾಗ ನಿಮಗೆ ಸಿಗುವ ಆದಾಯದ ಮಾಹಿತಿ ಈ ರೀತಿ ಇದೆ. ಈ ಬಡ್ಡಿ ದರ ಹೆಚ್ಜು ಕಡಿಮೆ ಆಗಬಹುದು. ಒಟ್ಟಿನಲ್ಲಿ ಸ್ನೇಹಿತರೇ ನೀವು ಹಣ ಹೂಡಿಕೆ ಮಾಡುವಾಗ ಯೋಚನೆ ಮಾಡಿ ಹೂಡಿಕೆ ಮಾಡಿ.
ಸ್ಟೇಟ್ ಬ್ಯಾಂಕ್ ಖಾತೆ ತೆರೆದು 6 ತಿಂಗಳಾಗಿದೆಯೇ? ಹಾಗಾದ್ರೆ ಈ ಬಂಪರ್ ಯೋಜನೆ ಮೂಲಕ ಸಿಗಲಿದೆ 1 ಲಕ್ಷ
SBI Wecare Fixed Deposit scheme Benefits
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.