ರಾಂಗ್ ನಂಬರ್‌ಗೆ ರೀಚಾರ್ಜ್ ಮಾಡಿದ್ದೀರಾ? ಹಣ ವಾಪಸ್ ಪಡೆಯಲು ಇಲ್ಲಿದೆ ಟ್ರಿಕ್, ಕ್ಷಣದಲ್ಲಿ ಹಣ ವಾಪಸ್ ಪಡೆಯಿರಿ
ಆದರೆ ಅನೇಕ ಬಾರಿ ನಾವು ಆತುರದಿಂದ ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿಬಿಡುತ್ತೇವೆ? ಹೀಗೆ ತಪ್ಪು ಸಂಖ್ಯೆಗೆ ರಿಚಾರ್ಜ್ ಮಾಡಿದಾಗ ಮುಂದೇನು?
Recharged to the wrong number: ಮೊದಲು ಜನರು ಮೊಬೈಲ್ ರೀಚಾರ್ಜ್‌ಗಾಗಿ (Mobile Recharge) ಅಂಗಡಿಗಳಿಗೆ ಹೋಗಿ ಟಾಪ್ ಅಪ್ ಕಾರ್ಡ್‌ಗಳನ್ನು (Recharge Top Up) ಖರೀದಿಸುತ್ತಿದ್ದರು. ಆ ಸಮಯದಲ್ಲಿ ಇಂಟರ್ನೆಟ್ (Data Pack) ಕೂಡ ತುಂಬಾ ದುಬಾರಿಯಾಗಿತ್ತು. ಆದರೆ ಕಾಲ ಬದಲಾಗಿದೆ. ತಂತ್ರಜ್ಞಾನ (Technology) ಮಾರುಕಟ್ಟೆ ಸಾಕಷ್ಟು ಅಭಿವೃದ್ಧಿ ಕಂಡಿದೆ.
ಇಂದು ಮನೆಯಲ್ಲಿ ಅದು ಕುಳಿತಲ್ಲಿಯೇ ರೀಚಾರ್ಜ್ ಮಾಡುವ ಸಾಧ್ಯತೆಯಿದೆ. ನೀವು PhonePe, Google Pay, Paytm ನಂತಹ ಹಲವಾರು ಅಪ್ಲಿಕೇಶನ್‌ಗಳನ್ನು ಬಳಸಿ ಕ್ಷಣಾರ್ಧದಲ್ಲಿ ರೀಚಾರ್ಚ್ ಮಾಡಿಕೊಳ್ಳಬಹುದು, ನಿಮ್ಮ ಸಿಮ್ Airtel, Reliance Jio, Vodafone Idea ಯಾವುದೇ ಆಗಿರಲಿ ನಮ್ಮ ನೆಚ್ಚಿನ ಪ್ಲಾನ್ (Recharge Plan) ಆಯ್ಕೆ ಮಾಡಿಕೊಳ್ಳಬಹುದು.
Maruti Wagon R VXI: ಮಾರುಕಟ್ಟೆಯಲ್ಲಿ ವ್ಯಾಗನ್ ಆರ್ ಹೊಸ ಆವೃತ್ತಿ.. ಎಷ್ಟು ಮೈಲೇಜ್ ಕೊಡುತ್ತೆ ಗೊತ್ತಾ?
ಆದರೆ ಅನೇಕ ಬಾರಿ ನಾವು ಆತುರದಿಂದ ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿಬಿಡುತ್ತೇವೆ? ಹೀಗೆ ತಪ್ಪು ಸಂಖ್ಯೆಗೆ ರಿಚಾರ್ಜ್ ಮಾಡಿದಾಗ ಮುಂದೇನು?
ಸಣ್ಣ ಪ್ರಮಾಣದ ರೀಚಾರ್ಜ್ ಅನ್ನು ನಿರ್ಲಕ್ಷಿಸಬಹುದು, ಅದೇ ದೊಡ್ಡ ಮೊತ್ತದಲ್ಲಿ ತಪ್ಪು ಸಂಖ್ಯೆ (Wrong Number) ರೀಚಾರ್ಜ್ ಮಾಡಿದರೆ, ಸುಮ್ಮನೆ ಕೂರಲು ಸಾಧ್ಯವೇ? ಇದಕ್ಕೂ ದಾರಿ ಇದೆ ಸ್ನೇಹಿತರೆ, ರಾಂಗ್ ನಂಬರ್‌ಗೆ ರೀಚಾರ್ಜ್ ಮಾಡಿದರೆ ಈ ಹಣವನ್ನು ಹೇಗೆ ಹಿಂಪಡೆಯಬಹುದು ಎಂಬುದು ಹಲವರಿಗೆ ತಿಳಿದಿಲ್ಲ.
ಅಕಸ್ಮಾತ್ ನೀವು ತಪ್ಪಾದ ರೀಚಾರ್ಜ್ ಬಗ್ಗೆ ಸಂಪೂರ್ಣ ವಿವರಗಳೊಂದಿಗೆ ಸಂಬಂಧಿಸಿದ ಕಂಪನಿಗೆ ಇಮೇಲ್ ಮಾಡಬಹುದು. ಈ ರೀತಿಯಲ್ಲಿ ನೀವು ನಿಮ್ಮ ಹಣವನ್ನು ಮರಳಿ ಪಡೆಯಬಹುದು. ಭಾರತದಲ್ಲಿ ಹೆಚ್ಚಿನ ಜನರು ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಸಿಮ್ ಕಾರ್ಡ್‌ಗಳನ್ನು ಬಳಸುತ್ತಿದ್ದಾರೆ. ಈ ಟೆಲಿಕಾಂ ಕಂಪನಿ ಇಮೇಲ್ ಐಡಿಯನ್ನು ನೀವು ಸುಲಭವಾಗಿ ಪಡೆಯಬಹುದು. ಹಾಗಾಗಿ ಈ ಮೇಲ್ ಮೂಲಕ ಅವರಿಗೆ ಸ್ಪಷ್ಟ ಮಾಹಿತಿ ನೀಡಿ ನಿಮ್ಮ ಹಣವನ್ನು ನೀವು ಮರಳಿ ಪಡೆಯಬಹುದು.
ಟೆಲಿಕಾಂ ಕಂಪನಿ ಪ್ರತಿಕ್ರಿಯಿಸದಿದ್ದರೆ ಏನು ಮಾಡಬೇಕು?
ಅನೇಕ ಬಾರಿ ಟೆಲಿಕಾಂ ಕಂಪನಿಗಳು ಗ್ರಾಹಕರ ದೂರುಗಳನ್ನು ಸ್ವೀಕರಿಸುವುದಿಲ್ಲ. ಎಷ್ಟು ಈ ಮೇಲ್ ಮಾಡಿದರು ಪ್ರತಿಕ್ರಿಯೆ ಬರುವುದಿಲ್ಲ. ಕೆಲವೊಮ್ಮೆ ಕರೆ ಕೂಡ ಕನೆಕ್ಟ್ ಆಗುವುದಿಲ್ಲ. ಟೆಲಿಕಾಂ ಕಂಪನಿಯು ನಿಮ್ಮ ದೂರಿನ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿದ್ದರೂ ಸಹ, ನೀವು ಅದನ್ನು ಕಸ್ಟಮರ್ ಕೇರ್ ಪೋರ್ಟಲ್‌ನಲ್ಲಿ ವರದಿ ಮಾಡಬಹುದು.
Education Loan: ನೀವು ಶಿಕ್ಷಣ ಸಾಲ ಪಡೆಯಲು ಬಯಸಿದರೆ, ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕುಗಳು ಇವು!
ಅಥವಾ ನೀವು ನಿಮ್ಮ ದೂರನ್ನು ವಾಟ್ಸಾಪ್ ಮೂಲಕ ನೋಂದಾಯಿಸಬಹುದು. ಇದಲ್ಲದೆ, ನೀವು ಪ್ಲೇ ಸ್ಟೋರ್‌ನಿಂದ ಗ್ರಾಹಕ ಸೇವಾ ಪೋರ್ಟಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕವೂ ದೂರು ಸಲ್ಲಿಸಬಹುದು.
ಆದರೆ ಒಂದು ವಿಷಯ ನೆನಪಿಡಿ, ನೀವು ಸಮಯಕ್ಕೆ ದೂರು ನೀಡಿದರೆ ಮಾತ್ರ ನಿಮ್ಮ ಹಣವನ್ನು ಮರಳಿ ಪಡೆಯಬಹುದು. ನಿಮ್ಮ ಮೊಬೈಲ್ ಸಂಖ್ಯೆಯು ರೀಚಾರ್ಜ್ ಮಾಡಿದ ಸಂಖ್ಯೆಗೆ ಹೊಂದಿಕೆಯಾಗಬೇಕು. ಅಂದರೆ ಒಂದು ಅಥವಾ ಎರಡು ಸಂಖ್ಯೆಗಳಿಂದಾಗಿ ರೀಚಾರ್ಜ್ ತಪ್ಪು ಸಂಖ್ಯೆಗೆ ಹೋದರೆ, ಹಣವನ್ನು ಹಿಂತಿರುಗಿಸಬಹುದು.
Personal Loan: ನೀವು ಪರ್ಸನಲ್ ಲೋನ್ ತೆಗೆದುಕೊಳ್ಳುವಾಗ ಈ ಪ್ರಮುಖ ಅಂಶಗಳ ಬಗ್ಗೆ ತಿಳಿದಿರಲಿ!
ನೀವು ತಿಳಿಸಿದ ಮೊತ್ತವು ವಿಭಿನ್ನವಾಗಿದ್ದರೆ, ಅಂತಹ ಸಂದರ್ಭದಲ್ಲಿ ಕಂಪನಿಯು ಪಾವತಿಸಲು ಹಿಂಜರಿಯುತ್ತದೆ. ನೀವು ನೀಡುವ ಎಲ್ಲಾ ಮಾಹಿತಿ ಸರಿಹೊಂದುವಂತೆ ಇದ್ದರೆ ಮಾತ್ರ ನಿಮಗೆ ನಿಮ್ಮ ಹಣ ತ್ವರಿತವಾಗಿ ಸಿಗುತ್ತದೆ.
How To Get Back Money When Recharged to the wrong number
Follow us On
Google News |