ಗ್ಯಾಸ್ ಸಿಲಿಂಡರ್ Expiry ಡೇಟ್ ತಿಳಿಯೋದು ಹೇಗೆ? ಅಷ್ಟಕ್ಕೂ ಎಕ್ಸ್ಪೈರಿ ಆಗಿದ್ರೆ ಏನಾಗುತ್ತೆ ಗೊತ್ತಾ?
ಗ್ಯಾಸ್ ಸಿಲಿಂಡರ್ (gas cylinder) ಬಳಕೆ ಮಾಡಿ ಅಡುಗೆ ಮಾಡುವುದು ಎಷ್ಟು ಸುಲಭ ಅದರ ಬಗ್ಗೆ ಜಾಗೃತಿಯಿಂದ ಇರುವುದು ಕೂಡ ಅಷ್ಟೇ ಮುಖ್ಯ. ಪ್ರತಿ ವರ್ಷ ಭಾರತದಲ್ಲಿ ಗ್ಯಾಸ್ ಸಿಲಿಂಡರ್ ಸಿಡಿದು ಸಾಕಷ್ಟು ಸಾವುಗಳು ಸಂಭವಿಸುತ್ತದೆ, ಹಾಗಾಗಿ ಬಹಳ ಮುಂಜಾಗ್ರತೆಯಿಂದ ಗ್ಯಾಸ್ ಸಿಲಿಂಡರ್ ಬಳಕೆ ಮಾಡಬೇಕು.
ಗ್ಯಾಸ್ ಸಿಲಿಂಡರ್ ದಿನಾಂಕ ತಿಳಿದುಕೊಳ್ಳಿ (Know expiry date of gas cylinder)
ನಾವು ಬಳಕೆ ಮಾಡುವ ಪ್ರತಿಯೊಂದು ವಸ್ತುವಿಗೂ ಎಕ್ಸ್ಪೈರಿ ಡೇಟ್ (expiry date) ಇದ್ದೇ ಇರುತ್ತದೆ. ಇದು ಸಿಲಿಂಡರ್ ಗೂ (Gas Cylinder) ಕೂಡ ಇದೇ ಎನ್ನುವುದು ಹಲವರಿಗೆ ಗೊತ್ತಿಲ್ಲ.
ಹಾಗಾಗಿ ಗ್ಯಾಸ್ ಸಿಲಿಂಡರ್ ವಿಚಾರವಾಗಿ ನಾವು ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ, ಆದರೆ ಎಕ್ಸ್ಪೈರಿ ಡೇಟ್ ಆಗಿರುವ ಗ್ಯಾಸ್ ಸಿಲಿಂಡರ್ ಬಳಸುವುದು ಬಹಳ ಡೇಂಜರ್, ಇದು ಯಾವಾಗ ಬೇಕಾದರೂ ಬ್ಲಾಸ್ಟ್ (cylinder blast) ಆಗುವ ಸಂಭವ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ನಾವು ಅಪ್ಡೇಟ್ ಆಗುತ್ತಿದ್ದೇವೆ, ಪ್ರತಿಯೊಂದು ವಿಷಯಗಳಲ್ಲಿಯೂ ಕೂಡ ನವೀಕರಣ ಕಾಣಬಹುದು. ಉದಾಹರಣೆಗೆ ಸಾಕಷ್ಟು ಅಪಾರ್ಟ್ಮೆಂಟ್ಗಳಲ್ಲಿ (apartments) ಇಂದು ಸಿಲಿಂಡರ್ ಬಳಸದೆ ಗ್ಯಾಸ್ ಅನ್ನು ಪೈಪ್ ಮೂಲಕ ಸರಬರಾಜು ಮಾಡಲಾಗುತ್ತದೆ, ಹಾಗಾಗಿ ಇದರಲ್ಲಿ ಮುಗಿದು ಹೋಗುವ ದಿನಾಂಕ ಎನ್ನುವ ಚಿಂತೆಯೇ ಇಲ್ಲ.
ರೈತರಿಗೆ ಸಿಹಿ ಸುದ್ದಿ, ರಕ್ತ ಚಂದನ ಬೆಳೆಯಲು ಮತ್ತು ಮಾರಲು ಸರ್ಕಾರದ ಗ್ರೀನ್ ಸಿಗ್ನಲ್!
ಸಿಲಿಂಡರ್ ಮುಕ್ತಾಯ ದಿನಾಂಕವನ್ನು ಕಂಡುಹಿಡಿಯುವುದು ಹೇಗೆ? Check expiry date
ಅಡುಗೆ ಮನೆಯಲ್ಲಿ ಅವಧಿ ಮುಗಿದ ಸಿಲಿಂಡರ್ ಬಳಸುತ್ತಿದ್ದರೆ ಕೂಡಲೇ ಅದರ ಬಗ್ಗೆ ಜಾಗೃತಿ ವಹಿಸಿ ಇಲ್ಲವಾದರೆ ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ಅಪಾಯ ಎದುರಾಗಬಹುದು. ಹಾಗಾದ್ರೆ ಸಿಲಿಂಡರ್ ನ ದಿನಾಂಕ ಮುಗಿದು ಹೋಗಿರುವುದನ್ನು ಪರಿಶೀಲನೆ ಮಾಡುವುದು ಹೇಗೆ?
ಪ್ರತಿ ಸಿಲಿಂಡರ್ ಮೇಲೆಯೂ ಕೂಡ ಮುಗಿದುಹೋಗುವ ದಿನಾಂಕವನ್ನು ಬರೆದಿರಲಾಗುತ್ತದೆ. ಉದಾಹರಣೆಗೆ ನೀವು ನಿಮ್ಮ ಸಿಲಿಂಡರ್ ನ ಮೇಲ್ಭಾಗದಲ್ಲಿ A- 26 ಎಂದು ಬರೆದಿರುವುದನ್ನು ಕಾಣಬಹುದು.
8 ಕೋಟಿ ರೈತರಿಗೆ ಸಿಹಿ ಸುದ್ದಿ, ಮೋದಿ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ₹2000 ಜಮೆ
ಇಲ್ಲಿ A ಎನ್ನುವುದು ತಿಂಗಳನ್ನು ಸೂಚಿಸಿದರೆ 26 ಎನ್ನುವುದು ವರ್ಷವನ್ನು ಸೂಚಿಸುತ್ತದೆ. ಜನವರಿಯಿಂದ ಮಾರ್ಚ್ ತಿಂಗಳವರೆಗೆ A, ಏಪ್ರಿಲ್ ನಿಂದ ಜೂನ್ ವರೆಗೆ B, ಜುಲೈನಿಂದ ಸೆಪ್ಟೆಂಬರ್ ವರೆಗೆ C ಹಾಗೂ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ D ಎಂದು ಗುರುತಿಸಲಾಗುತ್ತದೆ.
ಹಾಗಾಗಿ ಮೇಲೆ ಹೇಳಿದಂತೆ A- 26 ಎಂದು ಬರೆದರೆ, ನಿಮ್ಮ ಸಿಲಿಂಡರ್ ಜನವರಿ ತಿಂಗಳ 2026ರಲ್ಲಿ ಎಕ್ಸ್ಪೈರ್ ಆಗುತ್ತದೆ ಎನ್ನುವ ಅರ್ಥವನ್ನು ನೀಡುತ್ತದೆ. ಆದ್ದರಿಂದ ತಪ್ಪದೇ ಪ್ರತಿ ಸಿಲಿಂಡರ್ ಪಡೆದು ಕೊಂಡಾಗ ದಿನಾಂಕವನ್ನು ಚೆಕ್ ಮಾಡಿ.
How to know Gas Cylinder Expiry Date, Do you know what happens when it expires