ರೈತರಿಗೆ ಸಿಹಿ ಸುದ್ದಿ, ರಕ್ತ ಚಂದನ ಬೆಳೆಯಲು ಮತ್ತು ಮಾರಲು ಸರ್ಕಾರದ ಗ್ರೀನ್ ಸಿಗ್ನಲ್!

ನಮ್ಮ ದೇಶದಲ್ಲಿ ರಕ್ತ ಚಂದನ ಮರ (red sandal Tree) ಕೆಲವು ಪ್ರಮುಖ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ ಹಾಗೂ ಇದನ್ನ ಅರಣ್ಯ ಇಲಾಖೆ (forest department) ರಕ್ಷಣೆ ಮಾಡಿಕೊಂಡು ಬಂದಿದೆ

Bengaluru, Karnataka, India
Edited By: Satish Raj Goravigere

ಭಾರತದಲ್ಲಿ ಸಾಕಷ್ಟು ವೈವಿಧ್ಯತೆ ಹೊಂದಿರುವ ಮರಗಿಡಗಳು (tree) ಇವೆ, ಕೆಲವು ಮರಗಳಂತೂ ಎಷ್ಟು ಔಷಧೀಯ ಗುಣಗಳನ್ನು (medicinal properties) ಹೊಂದಿರುತ್ತವೆ ಹಾಗೂ ಎಷ್ಟು ಮಹತ್ವವನ್ನು ಪಡೆದುಕೊಂಡಿರುತ್ತವೆ ಅಂದರೆ ಅದನ್ನ ಸಾಮಾನ್ಯವಾಗಿ ಎಲ್ಲಾ ಕಡೆ ಬೆಳೆಸುವಂತಿಲ್ಲ. ಅಷ್ಟೇ ಅಲ್ಲದೆ ಮಾರಾಟ ಮಾಡುವಂತಿಲ್ಲ.. ಉದಾಹರಣೆಗೆ ರಕ್ತ ಚಂದನ (red sandal) ಮರ.

ಹೌದು ನಮ್ಮ ದೇಶದಲ್ಲಿ ರಕ್ತ ಚಂದನ ಮರ (red sandal Tree) ಕೆಲವು ಪ್ರಮುಖ ಕಾಡುಗಳಲ್ಲಿ ಮಾತ್ರ ಕಂಡುಬರುತ್ತದೆ ಹಾಗೂ ಇದನ್ನ ಅರಣ್ಯ ಇಲಾಖೆ (forest department) ರಕ್ಷಣೆ ಮಾಡಿಕೊಂಡು ಬಂದಿದೆ

Good news for farmers, Govt green signal to grow and sell Red Sandal

ಯಾರು ರಕ್ತ ಚಂದನವನ್ನ ಕಳ್ಳತನ ಮಾಡಬಾರದು ಎನ್ನುವ ಕಾರಣಕ್ಕೆ ಅದಕ್ಕೆ ಸೂಕ್ತ ರಕ್ಷಣೆಯನ್ನು ಕೊಡಲಾಗುತ್ತದೆ ಯಾಕೆಂದರೆ ರಕ್ತ ಚಂದನಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ (international market) ಕೂಡ ಸಾಕಷ್ಟು ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ರಕ್ತ ಚಂದನವನ್ನ ಚಿನ್ನದ ಬೆಳೆ ಎಂದೇ ಹೇಳಬಹುದು.

8 ಕೋಟಿ ರೈತರಿಗೆ ಸಿಹಿ ಸುದ್ದಿ, ಮೋದಿ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ₹2000 ಜಮೆ

ರಕ್ತ ಚಂದನ ಬೆಳೆಸಲು ಸರ್ಕಾರದ ಗ್ರೀನ್ ಸಿಗ್ನಲ್! Red Sandal

ಸರ್ಕಾರದ ಪರವಾನಿಗೆ ಇಲ್ಲದೆ ಯಾರು ಕೂಡ ರಕ್ತ ಚಂದನ ಬೆಳೆಸುವ ಹಾಗೆ ಇರಲಿಲ್ಲ, ಹಾಗೆ ಕಾಡಿನಲ್ಲಿ ಇರುವ ರಕ್ತ ಚಂದನ ಮರವನ್ನು ಕಡೆದು ಮಾರಾಟ ಮಾಡುವ ಹಾಗೆ ಇಲ್ಲ

ಈ ರೀತಿ ಮಾಡಿದ್ರೆ ಅದು ಅಪರಾಧವಾಗುತ್ತದೆ ಹಾಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಇದೀಗ ಸರ್ಕಾರ ರೈತರಿಗೂ ಕೂಡ ರಕ್ತ ಚಂದನ ಬೆಳೆಯಲು ಗ್ರೀನ್ ಸಿಗ್ನಲ್ ಕೊಟ್ಟಿದೆ.

ನಿಷೇಧಿತ ಪಟ್ಟಿಯಲ್ಲಿ ಇದ್ದ ರಕ್ತ ಚಂದನವನ್ನ ಇನ್ನು ಮುಂದೆ ರೈತರು (Farmers) ಬೆಳೆಸಬಹುದು ಅಷ್ಟೇ ಅಲ್ಲದೆ ಅರಣ್ಯ ಅಧಿಕಾರಿಗಳ ಅನುಮತಿ ಪಡೆದು ಸೂಕ್ತ ಹಣಕ್ಕೆ ಮಾರಾಟ ಮಾಡಬಹುದು.

ಕೇಂದ್ರ ಅರಣ್ಯ ಸಚಿವ ಭೋಪೆಂದರ್ ಯಾದವ್, ಇದಕ್ಕೆ ಮಾಹಿತಿ ನೀಡಿದ್ದು ಅಳಿವಿನ ಅಂಚಿನಲ್ಲಿ ಇರುವ ಪ್ರಾಣಿ ಹಾಗೂ ಸಸ್ಯಗಳನ್ನು ಉಳಿಸುವ ಸಲುವಾಗಿ ರೆಡ್ ಸ್ಯಾಂಡಲ್ ಅಥವಾ ರಕ್ತ ಚಂದನವನ್ನು ದೇಶದಲ್ಲಿ ಇನ್ನಷ್ಟು ಬೆಳೆಸುವ ಉದ್ದೇಶದಿಂದ ರೈತರಿಗೆ ಪರವಾನಿಗೆ ನೀಡಲಾಗಿದೆ ಎಂಬುದನ್ನು ತಿಳಿಸಿದ್ದಾರೆ.

ರಿವ್ಯೂ ಆಫ್ ಸಿಗ್ನಿಫಿಕೆಂಟ್ ಟ್ರೇಡ್ ನಿಂದ ರಕ್ತ ಚಂದನದ ಮೇಲೆ ಇರುವ ನಿರ್ಬಂಧವನ್ನು ತೆಗೆದು ರಕ್ತ ಚಂದನ ಬೆಳೆಸಲು ಹಾಗೂ ರಫ್ತು ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಇಂತಹ ವಿದ್ಯಾರ್ಥಿಗಳಿಗೆ ಎಸ್​ಬಿಐನಿಂದ ಸಿಗುತ್ತೆ ₹10,000 ಸ್ಕಾಲರ್ಶಿಪ್; ಇಂದೇ ಅಪ್ಲೈ ಮಾಡಿ

ರಕ್ತ ಚಂದನ ಮರಗಳು ಹೆಚ್ಚಾಗಿ ಬೆಳೆಯುವ ಕಾಡುಗಳು!

Red Sandalಆಂಧ್ರಪ್ರದೇಶದ (Andhra Pradesh) ಶೇಷಾಚಲಂ ಅರಣ್ಯದಲ್ಲಿ, ವೆಲುಗೊಂಡ, ಪಾಲಕೊಂಡ, ಲಕ್ಕಮಲ, ನಲ್ಲಮಲ ಅರಣ್ಯಗಳು ಪೂರ್ವ ಘಟ್ಟಗಳಲ್ಲಿ ರಕ್ತ ಚಂದನ ಮರಗಳನ್ನು ಕಾಣಬಹುದು

2014ರಲ್ಲಿ ರಕ್ತ ಚಂದನ ಹಾಗೂ ಇತರ ಶ್ರೀಗಂಧದ ತಳಿಯ ಮರಗಳನ್ನು ಬೆಳೆಸುವುದಕ್ಕೆ ನಿರ್ಬಂಧ ಹೇರಲಾಗಿತ್ತು, ಆದರೆ ಈಗ ಈ ನಿರ್ಬಂಧ ಹಿಂತೆಗೆದುಕೊಂಡಿರುವ ಸರ್ಕಾರ ಯಾರು ಬೇಕಾದರೂ ರಕ್ತ ಚಂದನ ಮರವನ್ನು ಬೆಳೆಸಬಹುದು ಹಾಗೂ ರಫ್ತು ಮಾಡಬಹುದು ಎಂದು ತಿಳಿಸಿದೆ

ಜಮೀನಿನ ಹಳೆಯ ದಾಖಲೆಗಳನ್ನು ಮೊಬೈಲ್‌ನಲ್ಲೇ ನೋಡುವ ಸುಲಭ ವಿಧಾನ ಇಲ್ಲಿದೆ

ಆದರೆ ಮರವನ್ನ ಬೆಳೆಸಿ ಅದನ್ನು ಕಡಿದು ಮಾರಾಟ ಮಾಡುವುದಕ್ಕೂ ಮೊದಲು ಅರಣ್ಯ ಇಲಾಖೆಯ (Forest Deportment) ಗಮನಕ್ಕೆ ತರಬೇಕು. ರೈತರು ಕೆಲವೇ ವರ್ಷಗಳಲ್ಲಿ ಲಕ್ಷಾಧಿಪತಿಗಳನ್ನಾಗಿಸುವ ರಕ್ತ ಚಂದನ (Red Sandal Wood) ಮರ ಬೆಳೆಸುವುದಕ್ಕೆ ಇಂದೇ ಆರಂಭಿಸಿ.

Good news for farmers, Govt green signal to grow and sell Red Sandal