ಇಂತಹ ವಿದ್ಯಾರ್ಥಿಗಳಿಗೆ ಎಸ್ಬಿಐನಿಂದ ಸಿಗುತ್ತೆ ₹10,000 ಸ್ಕಾಲರ್ಶಿಪ್; ಇಂದೇ ಅಪ್ಲೈ ಮಾಡಿ
Education Scholarship : ಎಸ್ ಬಿ ಐ ಆಶಾ ಸ್ಕಾಲರ್ಶಿಪ್ 2023 (SBI Asha scholarship 2023) ವಿದ್ಯಾರ್ಥಿ ವೇತನ (Education scholarship) ನೀಡಲು ಅರ್ಜಿ ಆಹ್ವಾನಿಸಿದ್ದು ಅರ್ಹ ವಿದ್ಯಾರ್ಥಿಗಳಿಗೆ 10000 ವಿದ್ಯಾರ್ಥಿ ವೇತನ ನೀಡುತ್ತದೆ.
ಈ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿ ಲೇಖನದಲ್ಲಿ ಕೊಡಲಾಗಿದೆ ಓದಿ ಹಾಗೂ ಅರ್ಜಿ ಸಲ್ಲಿಸಿ.
3 ನಿಮಿಷದಲ್ಲಿ ಸಿಗುತ್ತೆ ₹3 ಲಕ್ಷ ರೂಪಾಯಿ ಸಾಲ! ಯಾವುದೇ ದಾಖಲೆ ಬೇಕಿಲ್ಲ, ವೆರಿಫಿಕೇಷನ್ ಇಲ್ಲ
ಎಸ್ ಬಿ ಐ ಆಶಾ ಸ್ಕಾಲರ್ಶಿಪ್ 2023 (SBI Asha scholarship 2023)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಫೌಂಡೇಶನ್ (foundation) ಅಡಿಯಲ್ಲಿ ಆಶಾ ಸ್ಕಾಲರ್ಶಿಪ್ (scholarship) ಅನ್ನು ಪ್ರತಿ ವರ್ಷ ಬಡವರಿಗಾಗಿಯೇ ನೀಡುತ್ತಾ ಬಂದಿದೆ.
ಕಡಿಮೆ ಆದಾಯ ಹೊಂದಿರುವ ಕುಟುಂಬದಲ್ಲಿ ಇರುವಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ (talented students) ಸ್ಕಾಲರ್ಶಿಪ್ ನೀಡುವ ಒಂದು ಉಪಕ್ರಮ ಇದಾಗಿದ್ದು ಆರನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಓದುವ (6th standard to 2nd PUC) ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 10,000ಗಳನ್ನು ಎಸ್‌ಬಿಐ (SBI Bank) ನೀಡುತ್ತದೆ.
ಜಮೀನಿನ ಹಳೆಯ ದಾಖಲೆಗಳನ್ನು ಮೊಬೈಲ್‌ನಲ್ಲೇ ನೋಡುವ ಸುಲಭ ವಿಧಾನ ಇಲ್ಲಿದೆ
ಎಸ್ ಬಿ ಐ ಸ್ಕಾಲರ್ಶಿಪ್ ಪಡೆದುಕೊಳ್ಳಲು ವಿದ್ಯಾರ್ಥಿಗಳಲ್ಲಿ ಇರಬೇಕಾದ ಅರ್ಹತೆ!
6ನೇ ತರಗತಿಯಿಂದ ದ್ವಿತೀಯ ಪಿಯುಸಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಹಾಕಬಹುದು.
ಅರ್ಜಿ ಹಾಕಲು ಇಚ್ಚಿಸುವ ವಿದ್ಯಾರ್ಥಿಗಳ ಕುಟುಂಬದ ವರಮಾನ, ವಾರ್ಷಿಕ ಆದಾಯ (yearly income) 3 ಲಕ್ಷಕ್ಕಿಂತ ಕಡಿಮೆ ಇರಬೇಕು.
ವಿದ್ಯಾರ್ಥಿ ಹಿಂದಿನ ಶೈಕ್ಷಣಿಕ (last year marks) ವರ್ಷದಲ್ಲಿ 75% ನಷ್ಟು ಅಂಕ ಪಡೆದಿರಬೇಕು.
₹1 ಲಕ್ಷಕ್ಕೆ ಮಾರಾಟಕ್ಕಿದೆ ಮಾರುತಿ ಆಲ್ಟೊ 800 ಕಾರು, 2017ರ ಮಾಡೆಲ್; ಸೂಪರ್ ಕಂಡೀಷನ್
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!
ವಿದ್ಯಾರ್ಥಿ ಹಾಗೂ ಪೋಷಕರ ಆಧಾರ್ ಕಾರ್ಡ್
ಶಾಲೆಗೆ ಸೇರ್ಪಡೆಗೊಂಡಿರುವ ಫೀ ರಸಿದಿ (School Fees)
ಇಂದಿನ ವರ್ಷದ 75% ಅಂಕ ಪಡೆದಿರುವ ಸಬೂತು ನೀಡುವ ಅಂಕಪಟ್ಟಿ (marks card)
ಆದಾಯ ಪ್ರಮಾಣ ಪತ್ರ
ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕು ಖಾತೆಯ (Bank Account) ವಿವರ.
2019ಕ್ಕೂ ಮೊದಲು ಖರೀದಿಸಿರುವ ಕಾರು, ಬೈಕ್ ಸೇರಿದಂತೆ ಈ ವಾಹನಗಳು ರಸ್ತೆಗೆ ಇಳಿಯುವ ಹಾಗಿಲ್ಲ!
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 30 2003
ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಎಸ್ ಬಿಐನ ವೆಬ್ಸೈಟ್ https://www.buddy4study.com/page/sbi-asha-scholarship-program ಗೆ ಭೇಟಿ ನೀಡಿ. ಅಗತ್ಯ ಇರುವ ಹಾಗೂ ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ 10,000ಗಳ ಸ್ಕಾಲರ್ಶಿಪ್ ನಿಮ್ಮದಾಗಿಸಿಕೊಳ್ಳಿ.
Apply for SBI Asha Education Scholarship Online