ಜಮೀನಿನ ಹಳೆಯ ದಾಖಲೆಗಳನ್ನು ಮೊಬೈಲ್‌ನಲ್ಲೇ ನೋಡುವ ಸುಲಭ ವಿಧಾನ ಇಲ್ಲಿದೆ

ರೈತರಿಗೆ ಎಷ್ಟೋ ಸಂದರ್ಭದಲ್ಲಿ ತಮ್ಮ ಜಮೀನಿನ ಹಳೆಯ ದಾಖಲೆಗಳು (Land Old Documents) ಬೇಕಾಗುತ್ತವೆ, ಉದಾಹರಣೆಗೆ ಸಾಲ ಸೌಲಭ್ಯ (Loan) ಪಡೆದುಕೊಳ್ಳಲು ತಮ್ಮ ಜಮೀನು ಮಾರಾಟ ಮಾಡಲು (Property Sale) ಹೀಗೆ ಹಲವು ಕಾರಣಗಳಿಗೆ ಜಮೀನಿನ ಹಳೆಯ ದಾಖಲೆಗಳು ಬೇಕಾಗುತ್ತವೆ.

Bengaluru, Karnataka, India
Edited By: Satish Raj Goravigere

ಯಾವುದೇ ವ್ಯಕ್ತಿ ತನ್ನ ಜಮೀನಿನ ವಿವರಗಳನ್ನು (land information) ತಿಳಿದುಕೊಳ್ಳಲು ಈಗ ಜೊತೆಯಲ್ಲಿ ಕಾಗದ ಪತ್ರಗಳನ್ನು (documents hard copy) ಇಟ್ಟುಕೊಳ್ಳುವ ಅಗತ್ಯವಿಲ್ಲ, ಆನ್ಲೈನ್ ನಲ್ಲಿ ಎಲ್ಲಾ ದಾಖಲೆಗಳು ಕೂಡ ಸಿಗುತ್ತವೆ. ಆದರೆ ಹಳ್ಳಿ ಜನರಿಗೆ ಅಥವಾ ಹಳ್ಳಿಯಲ್ಲಿ ವಾಸಿಸುವ ರೈತರಿಗೆ ಇದರ ಬಗ್ಗೆ ಅರಿವು ಇರುವುದಿಲ್ಲ.

ರೈತರಿಗೆ ಎಷ್ಟೋ ಸಂದರ್ಭದಲ್ಲಿ ತಮ್ಮ ಜಮೀನಿನ ಹಳೆಯ ದಾಖಲೆಗಳು (Land Old Documents) ಬೇಕಾಗುತ್ತವೆ, ಉದಾಹರಣೆಗೆ ಸಾಲ ಸೌಲಭ್ಯ (Loan) ಪಡೆದುಕೊಳ್ಳಲು ತಮ್ಮ ಜಮೀನು ಮಾರಾಟ ಮಾಡಲು (Property Sale) ಹೀಗೆ ಹಲವು ಕಾರಣಗಳಿಗೆ ಜಮೀನಿನ ಹಳೆಯ ದಾಖಲೆಗಳು ಬೇಕಾಗುತ್ತವೆ.

App for measure agriculture land By Your Smartphone

₹1 ಲಕ್ಷಕ್ಕೆ ಮಾರಾಟಕ್ಕಿದೆ ಮಾರುತಿ ಆಲ್ಟೊ 800 ಕಾರು, 2017ರ ಮಾಡೆಲ್; ಸೂಪರ್ ಕಂಡೀಷನ್

ಆದರೆ ಎಲ್ಲರ ಬಳಿಯೂ ಈ ದಾಖಲೆಗಳು ಇರಲು ಸಾಧ್ಯವೇ ಇಲ್ಲ, ಎಷ್ಟೋ ಜನ ದಾಖಲೆ ಪತ್ರಗಳನ್ನು ಕಳೆದುಕೊಂಡಿರಬಹುದು. ಇಂತಹ ಸಂದರ್ಭದಲ್ಲಿ ತುರ್ತಾಗಿ ದಾಖಲೆಗಳನ್ನು ಪಡೆದುಕೊಳ್ಳಬೇಕು ಅಂದ್ರೆ ನಾಡ ಕಚೇರಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು, ಇದಕ್ಕೆ ಸಾಕಷ್ಟು ಸಮಯವೂ ತಗುಲುತ್ತದೆ ಜೊತೆಗೆ ರೈತರು ಹಣವನ್ನು ಖರ್ಚು ಮಾಡಬೇಕು.

ಕೇವಲ ಒಂದು ನಿಮಿಷಗಳಲ್ಲಿ ನೂರು ವರ್ಷಗಳ ದಾಖಲೆಗಳು ಪಡೆಯಿರಿ

ನಿಮಗೆ ಆಶ್ಚರ್ಯ ಎನಿಸಿದರು ಇದು ಸತ್ಯ. ಇದು ಡಿಜಿಟಲ್ (digital) ಯುಗ. ನಾವು ತಂತ್ರಜ್ಞಾನದಲ್ಲಿಯೂ (technology) ಸಾಕಷ್ಟು ಮುಂದೆ ಇದ್ದೇವೆ ಇದೇ ಕಾರಣಕ್ಕೆ ಸುಲಭವಾಗಿ ಯಾವುದೇ ರೀತಿಯ ವೈಯಕ್ತಿಕ ಮಾಹಿತಿ ಅಥವಾ ಭೂ ದಾಖಲೆಗಳನ್ನು (Land Records) ಆನ್ಲೈನ್ ನಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.

ನಮ್ಮ ಬಳಿ ಯಾವುದೇ ಕಡತ ಪತ್ರಗಳು ಇಲ್ಲದೆ ಇದ್ದರೂ ಕೂಡ ಜಮೀನಿನ ಸರ್ವೇ ನಂಬರ್ ಹಾಗೂ ಪಹಣಿ ಪತ್ರದ ಮಾಹಿತಿ ಇದ್ದರೆ ತಕ್ಷಣವೇ ನೂರಾರು ವರ್ಷಗಳ ಹಿಂದಿನ ಜಮೀನಿನ ದಾಖಲೆಗಳನ್ನು ಕೂಡ ಕ್ಷಣಮಾತ್ರದಲ್ಲಿ ಪಡೆಯಬಹುದು.

2019ಕ್ಕೂ ಮೊದಲು ಖರೀದಿಸಿರುವ ಕಾರು, ಬೈಕ್ ಸೇರಿದಂತೆ ಈ ವಾಹನಗಳು ರಸ್ತೆಗೆ ಇಳಿಯುವ ಹಾಗಿಲ್ಲ!

ಭೂ ದಾಖಲೆ ಪಡೆದುಕೊಳ್ಳುವುದು ಹೇಗೆ? (How to get land documents)

Land Documentshttp://landrecords.karnataka.gov.in/ ಕರ್ನಾಟಕ ಕಂದಾಯ ಇಲಾಖೆಯ (revenue department) ಅಧಿಕೃತ ವೆಬ್ಸೈಟ್ (official website) ಆಗಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. View RTC ಮತ್ತು MR ಇನ್ನು ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಮತ್ತೊಂದು ಪುಟ ತೆಗೆದುಕೊಳ್ಳುತ್ತದೆ. RTC, Mutation Status ಪೇಜಿನಲ್ಲಿ ಸರ್ವೇ ಡಾಕ್ಯುಮೆಂಟ್ಸ್ (survey documents) ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಈಗ ಮತ್ತೊಂದು ಹೊಸ ಪುಟ್ಟ ತೆರೆದುಕೊಳ್ಳುತ್ತದೆ, ಅದರಲ್ಲಿ ನಿಮ್ಮ ನೋಂದಾಯಿತ ಮೊಬೈಲ್ (registered mobile number) ಸಂಖ್ಯೆಯನ್ನು ಹಾಕಿ ನಿಮ್ಮ ಜಮೀನಿನ ಸರ್ವೆ ನಂಬರ್ (land survey number) ಹಾಗೂ ಮಾಹಿತಿಗಳನ್ನು ಭರ್ತಿ ಮಾಡಬೇಕು

ಯಾವುದೇ ಬ್ಯಾಂಕ್‍ನ ಚೆಕ್ ವ್ಯವಹಾರಕ್ಕೆ ಹೊಸ ರೂಲ್ಸ್! ಈ ತಪ್ಪು ಮಾಡಿದ್ರೆ ಕಂಬಿ ಎಣಿಸಬೇಕಾಗುತ್ತೆ

ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ (OTP) ಬರುತ್ತದೆ ಅದನ್ನು ನಮೂದಿಸಿ, view documents ಎಂದು ಕೊಟ್ಟರೆ ನಿಮ್ಮ ಜಮೀನಿನ ಎಲ್ಲಾ ಮಾಹಿತಿಗಳು ಕೂಡ ಕ್ಷಣಮಾತ್ರದಲ್ಲಿ ಕಣ್ಣಿಗೆ ಕಾಣಿಸುತ್ತದೆ.

ಈ ದಾಖಲೆಗಳನ್ನು ನೀವು ಪ್ರಿಂಟ್ ಔಟ್ (print out) ಕೂಡ ತೆಗೆದುಕೊಳ್ಳಬಹುದು. ಅಥವಾ ಡೌನ್ಲೋಡ್ (Download) ಮಾಡಿ ಇಟ್ಟುಕೊಳ್ಳಬಹುದು. ಹಾಗಾಗಿ ಇನ್ನು ಮುಂದೆ ಯಾವುದೇ ರೀತಿಯ ಜಮೀನಿನ ದಾಖಲೆಗಳು ತಕ್ಷಣಕ್ಕೆ ಸಿಗದೇ ಇದ್ದರೆ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಪಡೆದುಕೊಳ್ಳಬಹುದು. ಒಂದು ರೂಪಾಯಿಗಳನ್ನು ಕೂಡ ಖರ್ಚು ಮಾಡಬೇಕಾಗಿಲ್ಲ. ಉಚಿತವಾಗಿ ನಿಮ್ಮ ಜಮೀನಿನ ಎಲ್ಲಾ ದಾಖಲೆಗಳನ್ನು ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಿ.

Here is an easy way to view old land records on Smartphone