5 ಲಕ್ಷ ಹೂಡಿಕೆ ಮಾಡಿದ್ರೆ ಸಿಗುತ್ತೆ 15 ಲಕ್ಷ ರೂಪಾಯಿ; ಈ ಯೋಜನೆ ಮಿಸ್ ಮಾಡ್ಕೋಬೇಡಿ
ಅಂಚೆ ಕಚೇರಿಯಲ್ಲಿ ಎಫ್ ಡಿ (Post Office Fixed Deposit) ಹೂಡಿಕೆ ಮಾಡುವುದರ ಮೂಲಕ ನೀವು ಹೂಡಿಕೆ ಮಾಡಿದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಹಿಂಪಡೆಯಬಹುದು.
- ಪೋಸ್ಟ್ ಆಫೀಸ್ FD ಗೆ ಸಿಗತ್ತೆ 7.5% ಬಡ್ಡಿ.
- ಕೇವಲ 5 ಲಕ್ಷ ಹೂಡಿಕೆ ಮಾಡಿದ್ರೆ 15 ಲಕ್ಷ ರಿಟರ್ನ್.
- FD ಯೋಜನೆ ಹೂಡಿಕೆ ಅವಧಿ ವಿಸ್ತರಣೆಯಿಂದ ಹೆಚ್ಚು ಲಾಭ.
Fixed Deposit : ನಾವು ಹೂಡಿಕೆ ಮಾಡುವ ಮೊತ್ತ ಎಷ್ಟೇ ಆಗಿರಲಿ ಅದಕ್ಕೆ ಸಿಗುವ ರಿಟರ್ನ್ ಮಾತ್ರ ಉತ್ತಮವಾಗಿರಬೇಕು ಎಂದೆ ಭಾವಿಸುತ್ತೇವೆ ಜೊತೆಗೆ ನಮ್ಮ ಹೂಡಿಕೆಯ ಹಣಕ್ಕೆ ಸರಿಯಾದ ಸೆಕ್ಯೂರಿಟಿಯನ್ನು ಕೂಡ ಬಯಸುತ್ತೇವೆ ಅಂತಹ ನಂಬಿಕಸ್ತ ಹೂಡಿಕೆ ಯೋಜನೆಗಳನ್ನು ಭಾರತೀಯ ಅಂಚೆ ಕಚೇರಿ ಪರಿಚಯಿಸಿದೆ.
ಹೌದು ಪೋಸ್ಟ್ ಆಫೀಸ್ ನಲ್ಲಿ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ಉತ್ತಮ ಮೊತ್ತವನ್ನು ಹಿಂಪಡೆಯುವುದರ ಜೊತೆಗೆ ನೀವು ಹೂಡಿಕೆ ಮಾಡಿದ ಹಣಕ್ಕೆ ಸುರಕ್ಷತೆಯು ಇರುತ್ತದೆ. ಹಾಗಾದ್ರೆ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಪಡೆಯಬಹುದು ಎಂಬುದನ್ನು ನೋಡೋಣ.
5 ಲಕ್ಷ ರೂಪಾಯಿ ಹೂಡಿಕೆಗೆ 15 ಲಕ್ಷ ರೂಪಾಯಿಗಳ ರಿಟರ್ನ್
ಅಂಚೆ ಕಚೇರಿಯಲ್ಲಿ ಎಫ್ ಡಿ (Post Office Fixed Deposit) ಹೂಡಿಕೆ ಮಾಡುವುದರ ಮೂಲಕ ನೀವು ಹೂಡಿಕೆ ಮಾಡಿದ ಹಣಕ್ಕಿಂತ ದುಪ್ಪಟ್ಟು ಹಣವನ್ನು ಹಿಂಪಡೆಯಬಹುದು. ಉದಾಹರಣೆಗೆ ಅಂಚೆ ಕಚೇರಿಯಲ್ಲಿ 5 ಲಕ್ಷಗಳನ್ನು ಹೂಡಿಕೆ ಮಾಡಿದರೆ 15 ಲಕ್ಷ ರೂಪಾಯಿಗಳ ದೊಡ್ಡ ಮೊತ್ತ ನಿಮ್ಮ ಕೈ ಸೇರುತ್ತದೆ. ಐದು ಲಕ್ಷ ರೂಪಾಯಿಗಳನ್ನು ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕು.
ಮತ್ತೆ ತಲಾ ಐದು ವರ್ಷಗಳಿಗೆ ಎಫ್ ಡಿ ಮುಂದುವರಿಸಬೇಕು. ಅಂದರೆ ನೀವು ಐದು ಲಕ್ಷ ರೂಪಾಯಿಗಳನ್ನು 15 ವರ್ಷಗಳ ಅವಧಿಗೆ ಎಫ್ ಡಿ ಮಾಡಿದರೆ, ನಿಮಗೆ ಸಿಗುವ ಒಟ್ಟು ಬಡ್ಡಿ ಮೊತ್ತ 10,24,149 ರೂಪಾಯಿಗಳು.
ಅಂದರೆ ಮೆಚ್ಯುರಿಟಿಯ ಅವಧಿಯಲ್ಲಿ ಸಂಪೂರ್ಣ 15,24,149 ರೂಪಾಯಿಗಳ ದೊಡ್ಡ ಮೊತ್ತ ರಿಟರ್ನ್ ಪಡೆಯಬಹುದು. ಇಲ್ಲಿ ನೀವು ಇಟ್ಟ ಹಣದ fd ಅವಧಿಯ ವಿಸ್ತರಣೆ ಮಾಡಿಕೊಂಡರೆ ಮಾತ್ರ 15 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದಾಗಿದೆ.
15 ಲಕ್ಷ ರೂಪಾಯಿ ಹಿಂಪಡೆಯಲು ಹೀಗೆ ಮಾಡಿ
ನೀವು ಊರಿಗೆ ಮಾಡಿದ ಹಣವನ್ನು ಎಷ್ಟು ವರ್ಷಗಳಿಗೆ ವಿಸ್ತರಿಸುತ್ತೀರಿ ಎನ್ನುವುದರ ಆಧಾರದ ಮೇಲೆ ಹೆಚ್ಚಿನ ಮೊತ್ತವನ್ನು ಹಿಂಪಡೆಯಬಹುದಾಗಿದೆ. ಉದಾಹರಣೆಗೆ ಒಂದು ವರ್ಷದ ಅವಧಿಯ ಎಫ್ ಡಿ ಯನ್ನು, ಆರು ತಿಂಗಳುಗಳ ಒಳಗೆ ವಿಸ್ತರಿಸಿಕೊಳ್ಳಬೇಕು.
ಅದೇ ರೀತಿ ಒಂದು ವರ್ಷದ fdಯನ್ನು ಒಂದು ವರ್ಷದ ಒಳಗೆ ವಿಸ್ತರಿಸಿಕೊಳ್ಳಲು ಅವಕಾಶವಿದೆ. ಅದೇ ರೀತಿ ಮೂರು ಅಥವಾ ಐದು ವರ್ಷಗಳ ಎಫ್ ಡಿ ಹೂಡಿಕೆಯ ಅವಧಿ ವಿಸ್ತರಣೆಗೆ 18 ತಿಂಗಳುಗಳ ಅವಕಾಶ ಇರುತ್ತದೆ. ಈ ಅವಧಿಯ ಒಳಗೆ ಅಂಚೆ ಕಚೇರಿಗೆ ಭೇಟಿ ನೀಡಿ ನಿಮ್ಮ ಎಫ್ ಡಿ ಅವಧಿಯನ್ನು ವಿಸ್ತರಿಸಿಕೊಳ್ಳಿ.
ಎಫ್ಡಿ ಅವಧಿ ವಿಸ್ತರಣೆಗೆ ಸಿಗುವ ಬಡ್ಡಿ ದರ
ಸಾಮಾನ್ಯವಾಗಿ ಬ್ಯಾಂಕ್ ನಲ್ಲಿ ಇರುವಂತೆ ಅಂಚೆ ಕಚೇರಿಯಲ್ಲಿಯೂ ಎಫ್ ಡಿ ಅವಧಿ ವಿಸ್ತರಣೆಯ ಆಧಾರದ ಮೇಲೆ ಬಡ್ಡಿ ದರ ನಿಗದಿಯಾಗುತ್ತದೆ. ಒಂದು ವರ್ಷಕ್ಕೆ 6.9% ಬಡ್ಡಿ, 2 ವರ್ಷಕ್ಕೆ 7% ವಾರ್ಷಿಕ ಬಡ್ಡಿ, 3 ವರ್ಷಕ್ಕೆ 7.1% ವಾರ್ಷಿಕ ಬಡ್ಡಿ ಹಾಗೂ 5 ವರ್ಷದ ಖಾತೆಗೆ 7.5% ಬಡ್ಡಿಯನ್ನು ಪಡೆಯುತ್ತೀರಿ. ಉತ್ತಮ ರಿಟರ್ನ್ ಪಡೆಯಲು FD ಅವಧಿ ವಿಸ್ತರಣೆ ಉತ್ತಮ ಆಯ್ಕೆಯಾಗಿದೆ.
Invest 5 Lakh and Get 15 Lakh by This Post Office Fixed Deposit Scheme