ಐಫೋನ್ 16 ಪ್ಲಸ್ ಮೇಲೆ ಭಾರೀ ರಿಯಾಯಿತಿ! ₹25,000ಕ್ಕೂ ಹೆಚ್ಚು ಬೆಲೆ ಕಡಿತ
ಆಪಲ್ ಪ್ರೇಮಿಗಳಿಗೆ ಖುಷಿಯ ಸುದ್ದಿ! ರಿಲಯನ್ಸ್ ಡಿಜಿಟಲ್ನಲ್ಲಿ ಐಫೋನ್ 16 ಪ್ಲಸ್ ಮಾದರಿಯ ಬೆಲೆ ಈಗ ರೂ.25,000ಕ್ಕೂ ಹೆಚ್ಚು ಕಡಿತಗೊಂಡಿದೆ. ಹೊಸ ಆಫರ್ನಲ್ಲಿ ಹೆಚ್ಚು ಉಳಿತಾಯ ಸಾಧ್ಯ.

iPhone 16 Plus: ದೀಪಾವಳಿ ಸಮಯದಲ್ಲಿ ಆಪಲ್ ಫೋನ್ ಖರೀದಿಸಲು ಸಾಧ್ಯವಾಗದವರಿಗೆ ಇದೀಗ ಒಳ್ಳೆಯ ಅವಕಾಶ ಬಂದಿದೆ. ರಿಲಯನ್ಸ್ ಡಿಜಿಟಲ್ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಐಫೋನ್ 16 ಪ್ಲಸ್ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಮೂಲ ಬೆಲೆ ₹89,900 ಆಗಿದ್ದ ಈ ಫೋನ್ ಈಗ ₹67,990 ಕ್ಕೆ ಲಭ್ಯ. ಅಂದರೆ ಕಂಪನಿ ನೇರವಾಗಿ ₹21,910 ಕಡಿತ ನೀಡಿದೆ.
ಇದಲ್ಲದೆ, IDFC, ಅಕ್ಸಿಸ್, ಐಸಿಐಸಿಐ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ಗಳ ಕ್ರೆಡಿಟ್ ಕಾರ್ಡ್ ಮೂಲಕ EMI ಮೂಲಕ ಖರೀದಿಸಿದರೆ, ₹4,000 ತಕ್ಷಣದ ಡಿಸ್ಕೌಂಟ್ ಸಿಗುತ್ತದೆ. ಒಟ್ಟಿನಲ್ಲಿ ₹25,910 ವರೆಗೆ ಉಳಿತಾಯ ಸಾಧ್ಯವಾಗುತ್ತದೆ. ಖರೀದಿಸಲು ಇದು ಅತ್ಯುತ್ತಮ ಸಮಯವೆಂದರೆ ತಪ್ಪಾಗುವುದಿಲ್ಲ.
ಐಫೋನ್ 16 ಪ್ಲಸ್ ವೈಶಿಷ್ಟ್ಯಗಳು ಕೂಡ ಅದ್ಭುತವಾಗಿವೆ. ಈ ಫೋನ್ನಲ್ಲಿ 6.7 ಇಂಚಿನ ಸೂಪರ್ ರೆಟಿನಾ XDR OLED ಡಿಸ್ಪ್ಲೇ ಇದೆ. ಆಪಲ್ನ ಇತ್ತೀಚಿನ A18 ಚಿಪ್ಸೆಟ್ ಸಹಿತ ಬಂದಿದೆ. ಆಪಲ್ ಇಂಟೆಲಿಜೆನ್ಸ್ ಫೀಚರ್ಗಳಿಗೆ ಸಂಪೂರ್ಣ ಬೆಂಬಲ ನೀಡುತ್ತದೆ.
4674mAh ಬ್ಯಾಟರಿಯು 27 ಗಂಟೆಗಳವರೆಗೆ ವೀಡಿಯೋ ಪ್ಲೇಬ್ಯಾಕ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ, IP68 ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ ರೇಟಿಂಗ್ ಹಾಗೂ ಆಲ್ಯುಮಿನಿಯಂ ಫ್ರೇಮ್ ಕೂಡ ಇದೆ. ಹೊಸ ತಾಪಮಾನ ನಿರ್ವಹಣಾ ವಿನ್ಯಾಸವು ದೀರ್ಘಗೇಮಿಂಗ್ ವೇಳೆ ಉತ್ತಮ ಕಾರ್ಯಕ್ಷಮತೆ ನೀಡಲು ಸಹಾಯ ಮಾಡುತ್ತದೆ.
ಕ್ಯಾಮೆರಾ ವಿಭಾಗದಲ್ಲಿ 48MP ಪ್ರೈಮರಿ ಹಾಗೂ 12MP ಅಲ್ಟ್ರಾವೈಡ್ ಡ್ಯುಯಲ್ ಲೆನ್ಸ್ ಹಿಂಬದಿ ಕ್ಯಾಮೆರಾ ಇದೆ. 12MP ಮುಂಭಾಗದ ಕ್ಯಾಮೆರಾ ವೀಡಿಯೋ ಕಾಲ್ ಮತ್ತು ಸೆಲ್ಫಿಗಳಿಗೆ ಸೂಕ್ತವಾಗಿದೆ. ಪ್ರೀಮಿಯಂ ಫೀಲ್ ಹಾಗೂ ಅತ್ಯುತ್ತಮ ಪರ್ಫಾರ್ಮೆನ್ಸ್ ಬಯಸುವವರಿಗೆ ಇದು ಉತ್ತಮ ಆಯ್ಕೆ.
iPhone 16 Plus Gets ₹25,000 Price Cut in India



