ಎಲ್‌ಐಸಿ ಬಂಪರ್ ಆದಾಯ ಯೋಜನೆ, ಪ್ರತಿ ತಿಂಗಳು 16 ಸಾವಿರ ಸಿಗುವ ಎಲ್‌ಐಸಿ ಸ್ಕೀಮ್ ಇದು
ವಯಸ್ಸಾದ ಕಾಲದಲ್ಲಿ ನೆಮ್ಮದಿ ಇಂದ ಇರಬೇಕು, ಒಳ್ಳೆಯ ಪೆನ್ಶನ್ ಬರಬೇಕು ಎಂದರೆ ಈಗಿನಿಂದಲೇ ಹೂಡಿಕೆ ಮಾಡುವುದು ಒಳ್ಳೆಯದು. ಇದಕ್ಕಾಗಿ LIC ಯಲ್ಲಿ ಸಾಕಷ್ಟು ಒಳ್ಳೆಯ ಯೋಜನೆಗಳು ಜಾರಿಗೆ ಬಂದಿವೆ.
ನಿವೃತ್ತಿ ಹೊಂದಿದ ನಂತರ ವಯಸ್ಸಾದ ಕಾಲದಲ್ಲಿ ಹಣ ಸಂಪಾದನೆ ಮಾಡಲು ಶಕ್ತಿ ಇರುವುದಿಲ್ಲ. ಅಂಥ ಸಮಯದಲ್ಲಿ ಪ್ರತಿ ತಿಂಗಳು ಪೆನ್ಶನ್ (Pension) ಬಂದರೆ ಹಿರಿಯ ವ್ಯಕ್ತಿಗಳಿಗೆ ಸಹಾಯ ಆಗುತ್ತದೆ.. ವಯಸ್ಸಾದ ಕಾಲದಲ್ಲಿ ನೆಮ್ಮದಿ ಇಂದ ಇರಬೇಕು, ಒಳ್ಳೆಯ ಪೆನ್ಶನ್ ಬರಬೇಕು ಎಂದರೆ ಈಗಿನಿಂದಲೇ ಹೂಡಿಕೆ ಮಾಡುವುದು ಒಳ್ಳೆಯದು. ಇದಕ್ಕಾಗಿ LIC ಯಲ್ಲಿ ಸಾಕಷ್ಟು ಒಳ್ಳೆಯ ಯೋಜನೆಗಳು ಜಾರಿಗೆ ಬಂದಿವೆ.
LIC ಯಲ್ಲಿ ನಿವೃತ್ತಿ ನಂತರ ಉತ್ತಮ ಆದಾಯ ಪಡೆಯುವ ಸಾಕಷ್ಟು ಯೋಜನೆಗಳಿದ್ದು (LIC Schemes) ಅವುಗಳ ಪೈಕಿ ಜೀವನ್ ಅಕ್ಷಯ್ ಪಾಲಿಸಿ (Jeevan Akshay Policy) ಸಹ ಒಂದು, ಇದು ವಿಶೇಷವಾಗಿ ಪೆನ್ಶನ್ ಯೋಜನೆ ಎಂದೇ ಹೆಸರುವಾಸಿ ಆಗಿದೆ.
ಚಿನ್ನ ಖರೀದಿ ಮತ್ತು ಮಾರಾಟದ ನಿಯಮ ಬದಲಾವಣೆ ಮಾಡಿದ ಸರ್ಕಾರ! ರಾತ್ರೋ ರಾತ್ರಿ ಹೊಸ ರೂಲ್ಸ್ ಜಾರಿ
ಒಂದು ವೇಳೆ ನೀವು ಕೂಡ ನಿವೃತ್ತಿ ನಂತರ ಒಳ್ಳೆಯ ಪೆನ್ಶನ್ ಪಡೆಯಬೇಕು ಎಂದು ಬಯಸಿದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯು ಒಂದು ಸಾರಿ ಹೂಡಿಕೆ ಆಗಿದೆ.
ವರ್ಷಾಶನ ಯೋಜನೆ ಆಗಿರುವ LIC ಜೀವನ್ ಅಕ್ಷಯ್ ಯೋಜನೆಯಲ್ಲಿ ಪ್ರತಿ ತಿಂಗಳು ನಿಮಗೆ ಪೆನ್ಶನ್ ಸಿಗುತ್ತದೆ. ಇಲ್ಲಿ ನೀವು ಒಂದು ಸಾರಿ ಹಣ ಹೂಡಿಕೆ ಮಾಡಿದರೆ ಸಾಕು, ನೀವು ಎಷ್ಟು ಹಣ ಹೂಡಿಕೆ ಮಾಡುತ್ತೀರಿ ಎನ್ನುವುದರ ಮೇಲೆ ನಿಮಗೆ ಸಿಗುವ ಪೆನ್ಶನ್ ಹಣ ನಿಗದಿಯಾಗುತ್ತದೆ.
ಈ ಪೆನ್ಶನ್ ಹಣವನ್ನು ನಿಮ್ಮ ಇಚ್ಛೆಯ ಅನುಸಾರ ಒಂದು ತಿಂಗಳಿಗೆ, 3 ತಿಂಗಳಿಗೆ ಅಥವಾ 6 ತಿಂಗಳಿಗೆ ಒಂದು ಸಾರಿ ಪಡೆಯಬಹುದು.
ವರಮಹಾಲಕ್ಷ್ಮಿ ಹಬ್ಬದ ಎಫೆಕ್ಟ್! ಚಿನ್ನದ ಬೆಲೆ ₹220 ಏರಿಕೆ, ಬೆಳ್ಳಿ ಬೆಲೆ ಬರೋಬ್ಬರಿ ₹1600ರಷ್ಟು ಏರಿಕೆ
ಒಂದು ಸಾರಿ ನೀವು ಪಾವತಿ ಮಾಡುವ ಹಣವನ್ನು ಆಯ್ಕೆ ಮಾಡಿದರೆ, ಬದಲಾವಣೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ನೀವು ಆಯ್ಕೆ ಮಾಡುವಾಗ ಹುಷಾರಾಗಿರಿ. ಈ ಯೋಜನೆಯಲ್ಲಿ ಹೆಚ್ಚು ಹೂಡಿಕೆ ಮಾಡಿದಷ್ಟು ಹೆಚ್ಚು ಪೆನ್ಶನ್ ಸಿಗುತ್ತದೆ. 30 ವರ್ಷ ಮೇಲ್ಪಟ್ಟ ಯಾರೇ ಆದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಈ ಯೋಜನೆಯಲ್ಲಿ ನಿಮಗೆ ಹೇಗೆ ರಿಟರ್ನ್ಸ್ ಸಿಗುತ್ತದೆ ಎಂದು ಉದಾಹರಣೆ ಕೊಡುವುದಾದರೆ, 30 ವರ್ಷದಲ್ಲಿ ಈ ಪಾಲಿಸಿ ಖರೀದಿ ಮಾಡಿ, ಲೈಫ್ ಟೈಮ್ ಆಯ್ಕೆ ಮಾಡಿ, 5 ಲಕ್ಷ ಹೂಡಿಕೆ ಮಾಡಿದರೆ. ನಿವೃತ್ತಿ ನಂತರ ನಿಮಗೆ 28 ಸಾವಿರ ಪೆನ್ಶನ್ ಬರುತ್ತದೆ.
ಗ್ರಾಂಡ್ ಲುಕ್, ಟಾಪ್ ಫೀಚರ್ಸ್! ಹೀರೋ ಸ್ಪ್ಲೆಂಡರ್ ಪ್ಲಸ್ ಎಕ್ಸ್‌ಟೆಕ್ ಬೈಕ್, ಕಡಿಮೆ ಬೆಲೆ ಅತ್ಯುತ್ತಮ ಮೈಲೇಜ್
ಅಂದರೆ ತಿಂಗಳಿಗೆ ₹2,300 ರೂಪಾಯಿ ಪೆನ್ಶನ್ (Pension) ಬರುತ್ತದೆ. ಇಲ್ಲಿ 6 ತಿಂಗಳಿಗೆ ₹14,000.. 3 ತಿಂಗಳಿಗೆ ₹7,000 ಪೆನ್ಶನ್ ಬರುತ್ತದೆ. ಇಲ್ಲಿ ನೀವು ತಿಂಗಳಿವೆ 16 ಸಾವಿರ ಪೆನ್ಶನ್ ಪಡೆಯಬೇಕು ಎಂದರೆ ಈ ಯೋಜನೆಯಲ್ಲಿ ₹35 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ.
ಈ ಪಾಲಿಸಿಯಲ್ಲಿ ಹೂಡಿಕೆ ಮಾಡುವ ಮೂಲಕ ನಿವೃತ್ತಿ ನಂತರ ನೀವು ನಿಷ್ಚಿಂತೆಯಿಂದ ಇರಬಹುದು.
Jeevan Akshay Pension Policy Benefits Details