ಜಿಯೋ ಸಿಮ್ ಬಳಕೆದಾರರಿಗೆ ಬಂಪರ್! ಹೊಸ ಸ್ಟಾರ್ಟರ್ ಪ್ಯಾಕ್ ಬಿಡುಗಡೆ
₹349 ಕ್ಕೆ ಹೊಸ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಜಿಯೋ ಸ್ಮಾರ್ಟ್ ಸ್ಟಾರ್ಟರ್ ಪ್ಯಾಕ್ ಲಭ್ಯ. ಅನಿಯಮಿತ 5G ಸೇವೆ, ಫೈಬರ್ ಟ್ರಯಲ್, AI ಕ್ಲೌಡ್ ಒಳಗೊಂಡ ಆಕರ್ಷಕ ಕೊಡುಗೆ.

- ₹349 ಕ್ಕೆ ಜಿಯೋ ಹೊಸ ಸ್ಟಾರ್ಟರ್ ಪ್ಯಾಕ್ ಲಾಂಚ್
- 5G, ಫೈಬರ್ ಟ್ರಯಲ್, ಹಾಟ್‌ಸ್ಟಾರ್, ಕ್ಲೌಡ್ ಸೌಲಭ್ಯ
- ಅತ್ಯುತ್ತಮ 5G ಸೇವೆಗಳ ಜೊತೆಗೆ ಹಲವು ಉಚಿತ ಸೌಲಭ್ಯ
ಹೊಸ ಮೊಬೈಲ್ ಬಳಕೆದಾರರಿಗೆ ಡಿಜಿಟಲ್ ಅನುಭವ ಹೆಚ್ಚಿಸಲು ಜಿಯೋ ಹೊಸ ಪ್ಯಾಕ್ (Jio Recharge Plan), ಹೊಸ ಸ್ಮಾರ್ಟ್‌ಫೋನ್ (smartphone) ಖರೀದಿಸುವ ಗ್ರಾಹಕರಿಗೆ ಆಧುನಿಕ ಡಿಜಿಟಲ್ ಅನುಭವವನ್ನು ನೀಡಲು ಜಿಯೋ ಹೊಸ “ಸ್ಟಾರ್ಟರ್ ಪ್ಯಾಕ್” ಪರಿಚಯಿಸಿದೆ.
ಈ ಪ್ಯಾಕ್ ಕೇವಲ ₹349 ಕ್ಕೆ ಲಭ್ಯವಿದ್ದು, ಅತ್ಯುತ್ತಮ 5G ಸೇವೆಗಳ ಜೊತೆಗೆ ಹಲವು ಉಚಿತ ಸೌಲಭ್ಯಗಳನ್ನೂ ಒಳಗೊಂಡಿದೆ.
ಇದನ್ನೂ ಓದಿ: ₹10 ಸಾವಿರದೊಳಗೆ 5G ಸ್ಮಾರ್ಟ್‌ಫೋನ್‌ಗಳು! ನಿಮ್ಮ ಬಜೆಟ್‌ಗೆ ಈ ಪಟ್ಟಿ ಪರ್ಫೆಕ್ಟ್
ಈ ಪ್ಯಾಕ್‌ನಲ್ಲಿರುವ ಮುಖ್ಯ ಆಫರ್‌ಗಳು
28 ದಿನಗಳ ಕಾಲ ಅನಿಯಮಿತ 5G ಡೇಟಾ (network), 50 ದಿನಗಳ ಜಿಯೋ ಫೈಬರ್ ಅಥವಾ ಎಯರ್‌ಫೈಬರ್ ಟ್ರಯಲ್ ಸಂಪರ್ಕ (WiFi, TV, OTT), 50 GB ಜಿಯೋ AI ಕ್ಲೌಡ್ ಸ್ಟೋರೇಜ್ (cloud), ಮತ್ತು 90 ದಿನಗಳ ಜಿಯೋ ಹಾಟ್‌ಸ್ಟಾರ್ ಉಚಿತವಿದೆ.
ಜಿಯೋ ಹೊಸ ಪ್ಯಾಕ್ ನೊಂದಿಗೆ ತನ್ನ 5G ಸೇವೆಗಳನ್ನು ಹೆಚ್ಚಿಸಲು ಉದ್ದೇಶಿಸಿದ್ದು, ಜಿಯೋ ರಿಟೈಲ್ ಔಟ್‌ಲೆಟ್‌ಗಳು, ಇತರ ಪಾಲುದಾರ ಅಂಗಡಿಗಳ ಮೂಲಕ ಈ ಪ್ಯಾಕ್ ದೊರೆಯುತ್ತದೆ.
5G ಫಿಕ್ಸ್‌ಡ್ ವೈರ್‌ಲೆಸ್ ಆಕ್ಸೆಸ್ (FWA) ವಿಭಾಗದಲ್ಲಿ ಜಿಯೋ ಎಯರ್‌ಫೈಬರ್ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸೇವೆಯಾಗಿ ಹೊರಹೊಮ್ಮಿದೆ. ಏಪ್ರಿಲ್ 2025 ವೇಳೆಗೆ ಭಾರತದಲ್ಲಿ 6.14 ಮಿಲಿಯನ್ ಸಬ್ಸ್ಕ್ರೈಬರ್‌ಗಳನ್ನು ಹೊಂದಿದೆ
ಇದನ್ನೂ ಓದಿ: ಬೆಂಕಿ ಫೀಚರ್ಸ್, ಪ್ರೀಮಿಯಂ ಲುಕ್! ಟಿವಿಎಸ್ ಅಪಾಚೆ ಹೊಸ ಬೈಕ್ ಬಿಡುಗಡೆ
ಟೆಲಿಕಾಂ ಹಾದಿಯಲ್ಲಿ ಜಿಯೋಗೆ ಮತ್ತೊಂದು ಮುನ್ನಡೆ
TRAI ವರದಿಯ ಪ್ರಕಾರ, ಏಪ್ರಿಲ್ 2025ರಲ್ಲಿ ಜಿಯೋ ಮೊಬೈಲ್ ವಲಯದಲ್ಲಿ 95,000 ಕ್ಕೂ ಹೆಚ್ಚು ಹೊಸ ಗ್ರಾಹಕರನ್ನು ಸೇರಿಸಿಕೊಂಡಿದೆ. March 2025ರಲ್ಲಿ 3.17 ಕೋಟಿ ಗ್ರಾಹಕರಿಂದ ಏಪ್ರಿಲ್‌ನಲ್ಲಿ 3.18 ಕೋಟಿಗೆ ಏರಿಕೆಯಾಗಿದೆ. ಜಿಯೋ ಫೈಬರ್ ಕೂಡ 54,000 ಹೊಸ ಸಬ್ಸ್ಕ್ರೈಬರ್‌ಗಳನ್ನು ಸೇರಿಸಿಕೊಂಡು, ಒಟ್ಟಾರೆ ಗ್ರಾಹಕರ ಸಂಖ್ಯೆಯನ್ನು 1.66 ಮಿಲಿಯನ್‌ಗೆ ದಾಟಿಸಿದೆ.
ಇದನ್ನೂ ಓದಿ: ನಿಮ್ಮದು ಪಿಎಂ ಜನ್ ಧನ್ ಬ್ಯಾಂಕ್ ಖಾತೆ ಇದ್ಯಾ? ಹಾಗಾದ್ರೆ ಇಲ್ಲಿದೆ ಬಿಗ್ ಅಪ್ಡೇಟ್
ಗ್ರಾಮೀಣ ಪ್ರದೇಶಗಳಲ್ಲಿ ಕೇಬಲ್ ಸಮಸ್ಯೆಗಳನ್ನು ದಾಟಿ ಜಿಯೋ ತನ್ನ 5G ಇನ್‌ಫ್ರಾಸ್ಟ್ರಕ್ಚರ್ ಮೂಲಕ ಇಂಟರ್ನೆಟ್ ಸಂಪರ್ಕವನ್ನೂ ತಲುಪಿಸುತ್ತಿದೆ. ಇದರಿಂದ ಹೆಚ್ಚು ಗ್ರಾಹಕರು ಜಿಯೋ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಲಘು ಬಜೆಟ್ ಪ್ಯಾಕ್‌ನಿಂದ ಜಿಯೋ ತನ್ನ ಗ್ರಾಹಕರನ್ನು ಹೆಚ್ಚಿಸುವ ಹೊಸ ದಾರಿಯನ್ನು ಮಾಡಿದೆ
Jio ₹349 Starter Pack with Unlimited 5G




