ನಿಮ್ಮದು ಪಿಎಂ ಜನ್ ಧನ್ ಬ್ಯಾಂಕ್ ಖಾತೆ ಇದ್ಯಾ? ಹಾಗಾದ್ರೆ ಇಲ್ಲಿದೆ ಬಿಗ್ ಅಪ್ಡೇಟ್
ನಿಷ್ಕ್ರಿಯ ಪಿಎಂ ಜನ್ ಧನ್ ಖಾತೆಗಳನ್ನು (PMJDY accounts) ಮುಚ್ಚುವಂತೆ ಯಾವುದೇ ಸೂಚನೆ ನೀಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದ್ದು, ಜನರಲ್ಲಿ ಆತಂಕ, ಗೊಂದಲ ಬೇಡವೆಂದು ಹೇಳಿದೆ.

- ಪಿಎಂ ಜನ್ ಧನ್ ಖಾತೆ ಮುಚ್ಚುವ ಕುರಿತು ಸರ್ಕಾರದ ಸ್ಪಷ್ಟನೆ
- ಖಾತೆಗಳನ್ನು ಸಕ್ರಿಯಗೊಳಿಸಲು ಬ್ಯಾಂಕ್‌ಗಳಿಗೆ ಸೂಚನೆ
- ಪಿಎಂ ಜನ್ ಧನ್ ಖಾತೆಗಳು ಝೀರೋ ಬ್ಯಾಲನ್ಸ್ ಉಳ್ಳದ್ದು
ಪಿಎಂ ಜನ್ ಧನ್ ಯೋಜನೆಯಡಿ ತೆರೆದ ನಿಷ್ಕ್ರಿಯ ಖಾತೆಗಳನ್ನು (Bank Account) ಮುಚ್ಚುವ ಬಗ್ಗೆ ಕೆಲವೊಂದು social media ಪೋಸ್ಟುಗಳು ಮತ್ತು ವದಂತಿಗಳ ಹಿನ್ನೆಲೆಯಲ್ಲಿ, ಈ ವಿಚಾರದ ಬಗ್ಗೆ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.
ಪಿಎಂ ಜನ್ ಧನ್ (PMJDY) ಅಕೌಂಟ್‌ಗಳನ್ನು ಮುಚ್ಚಲು ಬ್ಯಾಂಕುಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಹಣಕಾಸು ಸೇವೆಗಳ ಇಲಾಖೆ ಆರಂಭಿಸಿರುವ ಜಾಗೃತಿ ಅಭಿಯಾನವು ಮೂರು ತಿಂಗಳ ಕಾಲ ನಡೆಯಲಿದ್ದು, ಪಿಎಂ ಜನ್ ಧನ್ ಯೋಜನೆ, ಜೀವನ್ ಜ್ಯೋತಿ ಬಿಮಾ, ಅಟಲ್ ಪೆನ್ಷನ್ ಸ್ಕೀಮ್‌ಗಳ (welfare schemes) ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿದೆ.
ಇದನ್ನೂ ಓದಿ: ಮನೆ ಕಟ್ಟಲು 30 ಲಕ್ಷ ಲೋನ್ ತಗೊಂಡ್ರೆ ಬಡ್ಡಿ ಎಷ್ಟು? EMI ಎಷ್ಟಾಗುತ್ತೆ? ಇಲ್ಲಿದೆ ಲೆಕ್ಕ
ಈ ಅಭಿಯಾನದ ಸಮಯದಲ್ಲಿ ಬ್ಯಾಂಕುಗಳು KYC ವಿವರಗಳನ್ನು ನವೀಕರಿಸುತ್ತಿವೆ ಮತ್ತು ಖಾತೆದಾರರ ಸಂಪರ್ಕ ಪುನಃ ಸ್ಥಾಪಿಸಲು ಪ್ರಯತ್ನಿಸುತ್ತಿವೆ.
ಇನ್ನೊಂದು ಪ್ರಮುಖ ಅಂಶವೆಂದರೆ, ಈ ಯೋಜನೆಯು ಗ್ರಾಮೀಣ ಮತ್ತು ಬ್ಯಾಂಕಿಂಗ್ ಸೇವೆಗಳಿಂದ ದೂರವಿರುವ ಜನರಿಗೆ ಬ್ಯಾಂಕ್ ಸೇವೆಗಳ ಪ್ರವೇಶವನ್ನು ನೀಡುವುದು.
ಈ ಮೂಲಕ, ಸಬ್ಸಿಡಿ ಹಾಗೂ ಉಳಿದಾ ಹಣಕಾಸು ಸೌಲಭ್ಯಗಳು ನೇರವಾಗಿ ಖಾತೆಗೆ ತಲುಪುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಮಧ್ಯವರ್ತಿತನವನ್ನು ಕಡಿಮೆಮಾಡಿ, ಪಾರದರ್ಶಕತೆಗೆ ದಾರಿ ಮಾಡಿಕೊಟ್ಟಿದೆ.
ಪಿಎಂ ಜನ್ ಧನ್ ಖಾತೆಗಳು ಝೀರೋ ಬ್ಯಾಲನ್ಸ್ (zero balance) ಸೌಲಭ್ಯವಿರುವವುಗಳು. ಖಾತೆದಾರರು ಕನಿಷ್ಟ ಮೊತ್ತ ಇರಿಸಬೇಕೆಂಬ ನಿರ್ಬಂಧವಿಲ್ಲ. ಇಂತಹ ಖಾತೆಗಳಿಗೆ ಡೆಬಿಟ್ ಕಾರ್ಡ್ ಮತ್ತು ಕಡಿಮೆ ಮೊತ್ತದ ಇನ್ಷೂರೆನ್ಸ್ (insurance) ಸೌಲಭ್ಯವೂ ಸಿಗುತ್ತದೆ.
ಇದನ್ನೂ ಓದಿ: ಅತ್ತೆ-ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇರುತ್ತಾ? ಇಲ್ಲಿದೆ ಕೋರ್ಟ್ ತೀರ್ಪು
ಅದರ ಜೊತೆಗೆ, ಇನಾಪರೇಟಿವ್ ಖಾತೆಗಳನ್ನು ಮುಚ್ಚಲಾಗುತ್ತದೆ, ಎಂಬ ಮಾತುಗಳಲ್ಲಿ ಸತ್ಯವಿಲ್ಲ. ಬದಲಿಗೆ ಬ್ಯಾಂಕುಗಳಿಗೆ ನಿಷ್ಕ್ರಿಯ ಖಾತೆಗಳನ್ನು ಗುರುತಿಸಿ, ಅದರ ಮಾಲೀಕರನ್ನು ಸಂಪರ್ಕಿಸಿ ಮತ್ತೆ ಸಕ್ರಿಯಗೊಳಿಸುವ ಸೂಚನೆ ನೀಡಲಾಗಿದೆ. ಖಾತೆ ಮುಚ್ಚುವ ಬಗ್ಗೆ ಜನರಲ್ಲಿ ಅಪಪ್ರಚಾರ ನಡೆಯುತ್ತಿರುವ ಹಿನ್ನೆಲೆ ಈ ಸ್ಪಷ್ಟನೆ ನೀಡಲಾಗಿದೆ.
ಹೀಗಾಗಿ, ಸಾರ್ವಜನಿಕರು ಈ ರೀತಿಯ ವದಂತಿಗಳ ಮೇಲೆ ನಂಬಿಕೆ ಇಡುವುದು ತಪ್ಪು. ಸರ್ಕಾರವೇ ಈ ಯೋಜನೆಯ ಮೂಲಕ ಹಲವಾರು ಕಲ್ಯಾಣ ಯೋಜನೆಗಳ ಹಣವನ್ನು ನೇರವಾಗಿ ಫಲಾನುಭವಿಗಳ ತಲುಪಿಸುತ್ತಿರುವುದರಿಂದ, ಇಂಥ ಖಾತೆಗಳ ಅಗತ್ಯ ಇನ್ನಷ್ಟು ವೃದ್ಧಿಯಾಗುತ್ತದೆ.
No Plans to Close Inactive PMJDY Accounts, Centre Clarifies




