ಐದು ವರ್ಷಗಳಲ್ಲಿ 42 ಲಕ್ಷ ರೂಪಾಯಿ ಬೇಕು ಅಂದ್ರೆ ಇಲ್ಲಿ ಹೂಡಿಕೆ ಮಾಡಿ ಸಾಕು!
ನಿವೃತ್ತಿ ಹೊಂದಿದ ನಂತರ ಸ್ಥಿರವಾದ ಮತ್ತು ಸುರಕ್ಷಿತವಾದ ಆದಾಯವನ್ನು ಒದಗಿಸುವ ಸಲುವಾಗಿ ಹಿರಿಯ ನಾಗರಿಕರಿಗಾಗಿ SCSS ಯೋಜನೆಯನ್ನು ಪರಿಚಯಿಸಲಾಗಿದೆ.
- SCSS ನಲ್ಲಿ ಹೂಡಿಕೆ ಮಾಡಿದರೆ ಸಿಗುತ್ತೆ 42 ಲಕ್ಷ ರೂಪಾಯಿ!
- ಹಿರಿಯ ನಾಗರಿಕರಿಗೆ ಇಲ್ಲ ತೆರಿಗೆ ತೊಂದರೆ
- ಕನಿಷ್ಠ ಸಾವಿರ ರೂಪಾಯಿಗಳಿಂದ ಹೂಡಿಕೆ ಮಾಡಿ
ಹಿರಿಯ ನಾಗರಿಕರಿಗಾಗಿ ಭಾರತ ಸರ್ಕಾರ ಸಾಕಷ್ಟು ವಿಶೇಷ ಯೋಜನೆಗಳನ್ನು ಪರಿಚಯಿಸಿದೆ ಅದರಲ್ಲೂ ಹೂಡಿಕೆ ವಿಚಾರಕ್ಕೆ ಬಂದರೆ ನಿವೃತ್ತಿಯ ನಂತರ ವಯಸ್ಸಾದವರು ಆರ್ಥಿಕವಾಗಿ ಯಾವುದೇ ಸಮಸ್ಯೆ ಅನುಭವಿಸಬಾರದು ಎನ್ನುವ ಕಾರಣಕ್ಕೆ ಸರ್ಕಾರ ಕೆಲವು ಪ್ರಮುಖ ಯೋಜನೆಗಳನ್ನು ಪರಿಚಯಿಸಿದೆ.
ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಯಾವುದೇ ಮಾರುಕಟ್ಟೆ ಅಪಾಯ ಇಲ್ಲದೆ ಉತ್ತಮ ಆದಾಯ ಸಿಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)
ಹೌದು, ನಿವೃತ್ತಿ ಹೊಂದಿದ ನಂತರ ಸ್ಥಿರವಾದ ಮತ್ತು ಸುರಕ್ಷಿತವಾದ ಆದಾಯವನ್ನು ಒದಗಿಸುವ ಸಲುವಾಗಿ ಹಿರಿಯ ನಾಗರಿಕರಿಗಾಗಿ SCSS ಯೋಜನೆಯನ್ನು ಪರಿಚಯಿಸಲಾಗಿದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಉಳಿತಾಯ ಮಾಡಿದರೆ ಹೆಚ್ಚು ಲಾಭವನ್ನು ಗಳಿಸಿಕೊಳ್ಳಬಹುದು, ಯಾಕೆಂದರೆ ಹಿರಿಯ ನಾಗರಿಕರ ಹೂಡಿಕೆಗೆ ಪ್ರಸ್ತುತ ಕೊಡುತ್ತಿರುವ ಬಡ್ಡಿ 8.2% ನಷ್ಟು. ಇನ್ನು ಇಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಕೂಡ ಪಡೆಯಬಹುದು.
ದುಬೈನಲ್ಲಿ 1BHK ಮನೆ ಬಾಡಿಗೆ ಎಷ್ಟು ಗೊತ್ತಾ? ಬೆಂಗಳೂರಲ್ಲಿ ಫ್ಲಾಟ್ ಖರೀದಿ ಮಾಡಬಹುದು!
ಯಾರು ಖಾತೆ ತೆರೆಯಬಹುದು!
ಹಿರಿಯ ನಾಗರಿಕರ ಹೊಡಿತಾಯ ಯೋಜನೆಯಲ್ಲಿ ಒಂಟಿಯಾಗಿ ಅಥವಾ ಜಂಟಿಯಾಗಿ ಖಾತೆ ತೆರೆಯಬಹುದು. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿಗೆ ವಯಸ್ಸಾಗಿರುವವರು ಯಶಸ್ಸಿ ಎಸ್ಎಸ್ ಖಾತೆ ತೆರೆಯಬಹುದು.
ಕನಿಷ್ಠ ಸಾವಿರ ರೂಪಾಯಿಗಳಿಂದ ಗರಿಷ್ಠ 30 ಲಕ್ಷ ರೂಪಾಯಿಗಳವರೆಗೆ ಠೇವಣಿ ಮಾಡಬಹುದು. ಇನ್ನು ಒಂದು ಲಕ್ಷಕ್ಕಿಂತ ಹೆಚ್ಚಿನ ಜೀವನ ಮಾಡಿದರೆ ಬ್ಯಾಂಕಿಗೆ ಚೆಕ್ ನೀಡುವುದರ ಮೂಲಕ ಠೇವಣಿ ಮಾಡಬೇಕಾಗುತ್ತದೆ.
SCSS ನಲ್ಲಿ ಹೂಡಿಕೆ ಮಾಡಿದ್ರೆ ಬರುವ ಆದಾಯ ಎಷ್ಟು?
ನೀವು ವಯಕ್ತಿಕ ಖಾತೆಯಲ್ಲಿ 30 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಿದ್ದೀರಿ ಎಂದು ಭಾವಿಸಿ. ಆಗ ಮೂರು ತಿಂಗಳಿಗೆ 60,150 ರೂಪಾಯಿಗಳ ಬಡ್ಡಿ ಪಡೆಯಬಹುದು. ಅಂದರೆ ವರ್ಷಕ್ಕೆ 2,40,600 ರೂಪಾಯಿಗಳು ಕೇವಲ ಬಡ್ಡಿಯಾಗಿ ಸಿಗುತ್ತವೆ. ಐದು ವರ್ಷಗಳಲ್ಲಿ 12,03,000 ರೂಪಾಯಿಗಳ ಬಡ್ಡಿ ಹಾಗೂ ಮೆಚುರಿಟಿಯ ಅವಧಿಗೆ ಒಟ್ಟಾರೆಯಾಗಿ 42, 03,000ಗಳನ್ನು ಪಡೆದುಕೊಳ್ಳುತ್ತೀರಿ.
ಇದೇ ರೀತಿ ಜಂಟಿ ಖಾತೆಯಲ್ಲಿ 60 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ವಾರ್ಷಿಕವಾಗಿ 4,81,200 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಮೆಚುರಿಟಿಯ ಸಮಯಕ್ಕೆ ನಿಮಗೆ ಸಿಗುವ ಒಟ್ಟು ಮೊತ್ತ 84,06,000 ರೂಪಾಯಿಗಳು.
ಇಲ್ಲಿ ಹೂಡಿಕೆ ಮಾಡಿದರೆ 1.5 ಲಕ್ಷ ರೂಪಾಯಿಗಳವರೆಗೂ ತೆರಿಗೆ ವಿನಾಯಿತಿ ಪಡೆಯಬಹುದು. ಹಿರಿಯ ನಾಗರಿಕರು ಉತ್ತಮ ಆದಾಯ ಗಳಿಸಿಕೊಳ್ಳಲು ಇದು ಬೆಸ್ಟ್ ಪ್ಲಾನ್ ಎನ್ನಬಹುದು.
just invest here If you need 42 lakh in five years