ಜಸ್ಟ್ 1 ರೂಪಾಯಿ ಫೋನ್‌ಪೇ ಮಾಡಿ ಸಾಕು, ನಿಮಗೆ ಸಿಗುತ್ತೆ 144 ರೂಪಾಯಿ ಕ್ಯಾಶ್‌ಬ್ಯಾಕ್
Phonepe : ಇದು ಡಿಜಿಟಲ್ ಯುಗ. ಪ್ರತಿಯೊಬ್ಬರು ಮೊಬೈಲ್ ಇಂಟರ್ನೆಟ್ ಮೂಲಕವೇ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ. ಅದರಲ್ಲೂ ಹಣಕಾಸಿನ ವ್ಯವಹಾರ ಮಾಡುವುದಕ್ಕೆ ಈಗ ಯಾವುದೇ ಬ್ಯಾಂಕಿಗೆ ಹೋಗಬೇಕಾಗಿಲ್ಲ.
ಮನೆಯಲ್ಲಿ ಕುಳಿತು ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಕೂಡ ಮೊಬೈಲ್ ಮೂಲಕವೇ ಹಣಕಾಸಿನ ವ್ಯವಹಾರವನ್ನ ಮಾಡಬಹುದು. ಒಂದು ಚಿಕ್ಕ ಅಂಗಡಿಯಲ್ಲಿ ವಸ್ತು ಖರೀದಿಸಿದರು ಕೂಡ ಯುಪಿಐ ಮೂಲಕ ಪೇಮೆಂಟ್ (UPI Payment) ಮಾಡಬಹುದು.

ಯುಪಿಐ ಪೇಮೆಂಟ್ ನಿಂದ ಸಿಗುತ್ತೆ ಬೆನಿಫಿಟ್ಸ್!
ಹೌದು, ಈಗಂತೂ ಪ್ರತಿಯೊಬ್ಬರೂ ಫೋನ್ ಪೇ (Phonepe), ಗೂಗಲ್ ಪೇ (Google Pay) ಮೊದಲಾದ ಅಪ್ಲಿಕೇಶನ್ ಮೂಲಕ ಹಣಕಾಸಿನ ವ್ಯವಹಾರವನ್ನು ಮಾಡುತ್ತಾರೆ. ಯಾರಿಗೆ ದುಡ್ಡನ್ನು ಕೊಡುವುದು ಇರಲಿ ಅಥವಾ ಯಾರಿಂದಲೇ ಹಣ ಪಡೆದುಕೊಳ್ಳುವುದಿರಲಿ ಈ ಅಪ್ಲಿಕೇಶನ್ ಗಳು ನಿಮ್ಮ ಮೊಬೈಲ್ ನಲ್ಲಿ ಇದ್ದರೆ ಕ್ಷಣ ಮಾತ್ರದಲ್ಲಿ ಪೇಮೆಂಟ್ ಮಾಡಿಬಿಡಬಹುದು.
ಫೋನ್ ಪೇ ಅಪ್ಲಿಕೇಶನ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಕೋಟ್ಯಂತರ ಗ್ರಾಹಕರನ್ನು ಆಕರ್ಷಿಸಿದೆ. ಅದು ಅಲ್ಲದೆ ಗ್ರಾಹಕರಿಗೆ ಅಗತ್ಯವಿರುವಂತಹ ಸಾಕಷ್ಟು ಕೊಡುಗೆಗಳನ್ನು ಕೂಡ ನೀಡುತ್ತಾ ಬಂದಿದೆ. ಮೊಟ್ಟ ಮೊದಲನೆಯದಾಗಿ ಫೋನ್ ಪೇ ಮೂಲಕ ರಿಚಾರ್ಜ್ ಮಾಡಿಸಿದರೆ ಅಥವಾ ಯಾವುದೇ ಬಿಲ್ ಪಾವತಿಸಿದರೆ ಕ್ಯಾಶ್ಬ್ಯಾಕ್ ಗಳು, ಕೂಪನ್ ಕೋಡ್ ಗಳು ಸಿಗುತ್ತವೆ.
ಈ ಕೂಪನ್ ಕೋಡ್ ಗಳ ಮೂಲಕ ವಸ್ತು ಖರೀದಿ ಮಾಡಬಹುದು. ಇದೀಗ ಫೋನ್ ಪೇ ಹೊಸದಾಗಿ ಮತ್ತೊಂದು ಕ್ಯಾಶ್ ಬ್ಯಾಕ್ ಆರಂಭಿಸಿದ್ದು, ಮೊದಲ ಬಾರಿಗೆ ಫೋನ್ ಪೇ ಯೂಸ್ ಮಾಡುವವರಿಗೆ ಮೊದಲ ಪೇಮೆಂಟ್ ಗೆ 144ಗಳ ಕ್ಯಾಶ್ಬ್ಯಾಕ್ ಸಿಗುತ್ತದೆ.
ಚೆಕ್ ಮೇಲೆ ಕಪ್ಪು ಇಂಕ್ ನಲ್ಲಿ ಬರೆದರೆ ಏನಾಗುತ್ತೆ ಗೊತ್ತಾ? ಮಾರ್ಗಸೂಚಿ ಇಲ್ಲಿದೆ!
ಇದು ಮಹಾ ಕುಂಭಮೇಳ ಕೊಡುಗೆ!
ಫೋನ್ ಪೇ ಮಹಾ ಕುಂಭಮೇಳಕ್ಕಾಗಿ ಈ ಕೊಡುಗೆಯನ್ನು ಘೋಷಿಸಿದೆ. ಈ ರೀತಿ ಪ್ರಮೋಟ್ ಮಾಡುವುದರ ಮೂಲಕ ಕ್ಯಾಶ್ ಬ್ಯಾಕ್ ಬಗ್ಗೆ ಫೋನ್ ಪೇ ಪ್ರತಿಯೊಬ್ಬರಿಗೂ ಮಾಹಿತಿ ನೀಡುತ್ತಿದೆ.
ಫೋನ್ ಪೇ ಡಿಜಿಟಲ್ ಕಂಪನಿ, ಮಹಾ ಕುಂಭ ಕಾ ಮಹಾಶಗುನ್ ಅನ್ನು ಆರಂಭಿಸಿದ್ದು ಪ್ರಯಾಗ್ ರಾಜ್ ನಲ್ಲಿ ಮೊದಲ ಪೇಮೆಂಟ್ ಮಾಡುವವರಿಗೆ ಈ ಕೊಡುಗೆ ಅನ್ವಯವಾಗುತ್ತದೆ. ಕೇವಲ ಒಂದು ರೂಪಾಯಿ ಪೇಮೆಂಟ್ ಮಾಡಿದರು ಕೂಡ 144 ರೂಪಾಯಿ ಕ್ಯಾಶ್ಬ್ಯಾಕ್ ಪಡೆಯಬಹುದು.
ಆದರೆ ನೆನಪಿರಲಿ ಪ್ರಯಾಗ್ ರಾಜ್ ನಲ್ಲಿ ಮಾತ್ರ ಈ ಕೊಡುಗೆ ಲಭ್ಯವಿದೆ. ಪ್ರಯಾಗ್ರಾಜ್ ನಲ್ಲಿ ಮೊದಲ ಪೇಮೆಂಟ್ ಮಾಡಿದರೆ ಈ ಕೊಡುಗೆ ಸಿಗುತ್ತದೆ.
ಇದಕ್ಕಾಗಿ ಆಪಲ್ ಅಥವಾ ಆಂಡ್ರಾಯ್ಡ್ ಫೋನ್ ನಲ್ಲಿ ಫೋನ್ ಪೇ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಅಗತ್ಯ ಇರುವ ಮಾಹಿತಿಗಳನ್ನು ಹಾಕಿ ಯುಪಿಐ ಕೋಡ್ ಹಾಕಬೇಕು. ನಂತರ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪೇಮೆಂಟ್ ಮಾಡಿದರು ಕೂಡ ಕ್ಯಾಶ್ ಬ್ಯಾಕ್ ಸಿಗುತ್ತದೆ. ಫೆಬ್ರುವರಿ 26, 2025 ರವರೆಗೆ ಮಾತ್ರ ಈ ಕೊಡುಗೆ ಲಭ್ಯ.
Just Pay 1 Rupee on PhonePe and Get 144 Cashback