ಒಂದು ಸ್ವಂತ ಮನೆ (Own House) ಮಾಡಿಕೊಳ್ಳಬೇಕು ಎನ್ನುವುದು ಎಲ್ಲರ ಕನಸು, ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುವುದು ಇದಕ್ಕಾಗಿಯೇ. ಆದರೆ ಹಲವರು ಈಗ ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡುತ್ತಾರೆ, ಆ ರೀತಿ ಇದ್ದಾಗ ಬಾಡಿಗೆ ಮನೆಗಳಲ್ಲಿ (Rent House) ವಾಸ ಮಾಡಬೇಕಾದ ಪ್ರಸಂಗ ಎದುರಾಗುತ್ತದೆ.
ಬಾಡಿಗೆ ಮನೆಯಲ್ಲಿ ವಾಸ ಮಾಡುವುದಕ್ಕೆ ರೆಂಟ್ ಅಗ್ರಿಮೆಂಟ್ (Rent Agreement) ಮಾಡಿಸಿಕೊಳ್ಳಬೇಕು. ಆದರೆ ರೆಂಟ್ ಅಗ್ರಿಮೆಂಟ್ ಮಾಡಿಸುವಾಗ ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿ ಇಡಬೇಕಾಗುತ್ತದೆ. ಆ ವಿಚಾರಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ಒಂದು ಮನೆಗೆ ಬಾಡಿಗೆಗೆ ಹೋಗುವುದಕ್ಕಿಂತ ಮೊದಲು ರೆಂಟ್ ಅಗ್ರಿಮೆಂಟ್ (Rent Agreement) ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಬಾಡಿಗೆದಾರರು ರೆಂಟ್ ಅಗ್ರಿಮೆಂಟ್ ಗೆ ಸೈನ್ ಮಾಡಬೇಕು. ಇದಕ್ಕೆ ನೀವು ಸೈನ್ ಮಾಡುವುದಕ್ಕಿಂತ ಮೊದಲು, ಅಗ್ರಿಮೆಂಟ್ ನಲ್ಲಿ ಏನು ಬರೆದಿದೆ ಎನ್ನುವುದನ್ನು ಸರಿಯಾಗಿ ಓದಿರಬೇಕು.
ಈ ಚಾನ್ಸ್ ಬಿಟ್ರೆ ಮತ್ತೆ ಸಿಗೋಲ್ಲ! ಚಿನ್ನದ ಬೆಲೆ 1500 ರೂಪಾಯಿ ಇಳಿಕೆ, ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್
ಏಕೆಂದರೆ ಒಂದು ಸಾರಿ ನೀವು ಸೈನ್ ಮಾಡಿದರೆ, ಅಗ್ರಿಮೆಂಟ್ ನಲ್ಲಿರುವ ಎಲ್ಲಾ ವಿಷಯಕ್ಕೂ ನೀವು ಒಪ್ಪಿಕೊಂಡಿರುತ್ತೀರಾ ಎಂದು ಅರ್ಥ. ಹಾಗಾಗಿ ರೆಂಟ್ ಅಗ್ರಿಮೆಂಟ್ ಸೈನ್ ಮಾಡುವುದಕ್ಕಿಂತ ಮೊದಲು, ಎಲ್ಲವನ್ನು ಸರಿಯಾಗಿ ಓದಬೇಕು. ರೆಂಟ್ ಅಗ್ರಿಮೆಂಟ್ ನಲ್ಲಿ ಬಾಡಿಗೆ ಜಾಸ್ತಿ ಮಾಡುವ ಬಗ್ಗೆ ಕೂಡ ಬರೆದಿರುತ್ತದೆ.
ಬಾಡಿಗೆ ಮನೆಯ ಓನರ್ ಗಳಿಗೆ 10% ಬಾಡಿಗೆ ಜಾಸ್ತಿ ಮಾಡುವ ಹಕ್ಕು ಓನರ್ ಗಳಿಗೆ ಇರುತ್ತದೆ. ಹಾಗಾಗಿ ಇದೆಲ್ಲವನ್ನು ಮೊದಲೇ ನೀವು ನಿಮ್ಮ ಮನೆಯ ಓನರ್ ಗಳ ಜೊತೆಗೆ ಮಾತನಾಡಬೇಕು. ಎಲ್ಲವನ್ನು ಕ್ಲಿಯರ್ ಮಾಡಿಕೊಳ್ಳಬೇಕು..
ರೆಂಟ್ ಅಗ್ರಿಮೆಂಟ್ ಸೈನ್ ಮಾಡುವುದಕ್ಕಿಂತ ಮೊದಲು ನೀವು ತಿಳಿದುಕೊಳ್ಳಬೇಕಾದ ಮತ್ತೊಂದು ಮುಖ್ಯವಾದ ವಿಷಯ ಏನು ಎಂದರೆ, ರೆಂಟ್ ಜೊತೆಗೆ ಯಾವೆಲ್ಲಾ ಬಿಲ್ ಕಟ್ಟಬೇಕು ಎಂದು ಬರೆದಿರುತ್ತದೆ, ಅದನ್ನು ಕೂಡ ನೋಡಿಕೊಂಡು ರೆಂಟ್ ಅಗ್ರಿಮೆಂಟ್ ಸೈನ್ ಮಾಡಬೇಕಾಗುತ್ತದೆ.
ಇದನ್ನು ಸರಿಯಾಗಿ ತಿಳಿದುಕೊಳ್ಳದೆ ರೆಂಟ್ ಅಗ್ರಿಮೆಂಟ್ ಗೆ ಸೈನ್ ಮಾಡಿ, ಮುಂದೊಂದು ದಿನ ನಿಮ್ಮ ಓನರ್ ಜೊತೆಗೆ ಜಗಳ ಅಥವಾ ಇನ್ನಿತರ ಸಮಸ್ಯೆ ಉಂಟಾಗಬಹುದು.
ಕೇವಲ 4.69 ಲಕ್ಷಕ್ಕೆ ಹೊಸ ಕಾರು ನಿಮ್ಮದಾಗಿಸಿಕೊಳ್ಳಿ, 55 ಸಾವಿರ ರಿಯಾಯಿತಿ! ಸೀಮಿತ ಅವಧಿಗೆ ಮಾತ್ರ
ಇಷ್ಟೇ ಅಲ್ಲದೆ ಇನ್ನು ಕೆಲವು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ಸಾಮಾನ್ಯವಾಗಿ ರೆಂಟ್ ಅಗ್ರಿಮೆಂಟ್ ನಲ್ಲಿ ಇರುವ ಮತ್ತೊಂದು ವಿಷಯ ಏನು ಎಂದರೆ, ಮನೆಯನ್ನು ಒಂದು ಸಾರಿ ಆದರೂ ರಿಪೇರಿ ಮಾಡಿಸುವ ಅಥವಾ ಪೇಂಟ್ ಮಾಡಿಸುವ ಜವಾಬ್ದಾರಿ ಯಾರದ್ದು ಎಂದು ಕೂಡ ಬರೆದಿರಲಾಗುತ್ತದೆ.
ಈ ಜವಾಬ್ದಾರಿ ಮನೆಯ ಓನರ್ ನ ಜವಾಬ್ದಾರಿ ಆಗಿರುತ್ತದೆ. ಇದನ್ನು ಕೂಡ ಕನ್ಫರ್ಮ್ ಮಾಡಿಕೊಂಡು ಮನೆಯ ರೆಂಟ್ ಅಗ್ರಿಮೆಂಟ್ ಸೈನ್ ಮಾಡಬೇಕು. ಹಾಗೆಯೇ ಮನೆಗೆ ಸೆಕ್ಯೂರಿಟಿ ಡೆಪಾಸಿಟ್ ಮಾಡಬೇಕಾಗುತ್ತದೆ, ಅದನ್ನು ಕೂಡ ಸರಿಯಾಗಿ ತಿಳಿದುಕೊಂಡು, ಮನೆಯ ರೆಂಟ್ ಅಗ್ರಿಮೆಂಟ್ ಸೈನ್ ಮಾಡಬೇಕು.
Know important Things about House Rental Rent Agreement
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.