Loan Recovery : ಬ್ಯಾಂಕ್ ಇಂದ ಹಲವು ಕಾರಣಗಳಿಗೆ ಜನರು ಲೋನ್ ಪಡೆದಿರುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ, ಮನೆ ಕಟ್ಟಿಸಲು, ವಾಹನ ಖರೀದಿಸಲು, ಇನ್ಯಾವುದೋ ಪರ್ಸನಲ್ (Personal Loan) ಕೆಲಸಕ್ಕಾಗಿ ಹೀಗೆ ಅನೇಕ ಕಾರಣಗಳಿಗೆ Loan ಪಡೆದಿರುತ್ತಾರೆ. ಆದರೆ ಅದರ ನಡುವೆ ಇನ್ನೇನೋ ಸಮಸ್ಯೆ ಎದುರಾಗಿ ಲೋನ್ ಪಾವತಿ ಮಾಡಲು ಸಾಧ್ಯ ಆಗಿರುವುದಿಲ್ಲ. ಅಂಥ ಸಮಯದಲ್ಲಿ ಕೆಲವು ಬ್ಯಾಂಕ್ ಗಳು ತಮ್ಮ ಏಜೆನ್ಟ್ ಗಳನ್ನು ಗಳಿಸಿ, ಇಎಂಐ ವಸೂಲಿ ಮಾಡುವಂತೆ ತಿಳಿಸುತ್ತಾರೆ..
ಹೌದು, ಈ ರೀತಿಯ ಅನೇಕ ಘಟನೆಗಳ ಬಗ್ಗೆ ಕೇಳಿರುತ್ತೇವೆ, ಹಾಗೂ ನೋಡಿರುತ್ತೇವೆ. ಹಲವು ಏಜೆನ್ಟ್ ಗಳು ಸಮಯವಲ್ಲದ ಸಮಯದಲ್ಲಿ ಸಾಲಗಾರರ ಮನೆಗೆ ನುಗ್ಗಿ, ಹಣ ಕಟ್ಟಬೇಕು ಎಂದು ಅವರ ಮೇಲೆ ಕೂಗಾಡಿ, ಕಿರುಚಾಡಿ, ಹಲ್ಲೆ ಮಾಡಿರುವ ಘಟನೆಗಳು ನಡೆದಿದೆ.
ಇದರಿಂದ ಸಾಲಗಾರರಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಆಗಿದೆ. ಒಂದು ವೇಳೆ ಬ್ಯಾಂಕ್ ಇಂದ ನಿಮಗೆ ಈ ಥರ ಸಮಸ್ಯೆ ಆಗುತ್ತಿದ್ದರೆ, ನೀವು ಬ್ಯಾಂಕ್ ವಿರುದ್ಧವೇ ದೂರು ಕೊಡಬಹುದು. ಇದು ಹಲವರಿಗೆ ಗೊತ್ತಿರದ ವಿಷಯ ಆಗಿರುತ್ತದೆ..
365 ದಿನಗಳ ಜಿಯೋ, ಏರ್‌ಟೆಲ್ ಮತ್ತು ಬಿಎಸ್ಎನ್ಎಲ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಡೀಟೇಲ್ಸ್
ಹೌದು, ಸಾಲ ಮರುಪಾವತಿ ಮಾಡುವ ವಿಷಯದಲ್ಲಿ RBI ನ ಕೆಲವು ನಿಯಮಗಳಿವೆ ಎಲ್ಲಾ ಬ್ಯಾಂಕ್ ಗಳು ಕೂಡ ಅವುಗಳನ್ನು ಪಾಲಿಸಬೇಕು. ಒಂದು ವೇಳೆ ಪಾಲಿಸದೇ ಹೋದರೆ, ಅಂಥವರ ಮೇಲೆ ನೀವು ಪೊಲೀಸರ ಬಳಿ ದೂರು ಕೊಡಬಹುದು.
ಒಂದು ವೇಳೆ ಬ್ಯಾಂಕ್ ನವರು ನಿಮಗೆ ತೊಂದರೆ ಕೊಡುತ್ತಿದ್ದಾರೆ ಎನ್ನುವುದಾದರೆ ಬ್ಯಾಂಕ್ ಗೆ ದಂಡ ವಿಧಿಸಲಾಗುತ್ತದೆ, ಬ್ಯಾಂಕ್ ಇಂದಲೇ ನಿಮಗೆ ಹಣ ಕಟ್ಟಿಕೊಡಬೇಕಾಗುತ್ತದೆ, ನಿಮಗೆ ಕ್ಷಮೆ ಕೂಡ ಕೇಳುವ ಹಾಗೆ ಇರುತ್ತದೆ..
ಹೌದು, RBI ನಿಯಮದ ಅನುಸಾರ, ಲೋನ್ ಪಡೆದಿರುವ ವ್ಯಕ್ತಿ ಒಂದು ವೇಳೆ 3 ತಿಂಗಳ ಇಎಂಐ ಪಾವತಿ ಮಾಡಿಲ್ಲ ಎನ್ನುವುದಾದರೆ, ಮೊದಲಿಗೆ ಲೀಗಲ್ ಆಗಿ ಆ ವ್ಯಕ್ತಿಗೆ ನೋಟಿಸ್ ಕಳಿಸಬೇಕು. ನೋಟಿಸ್ ಗೆ ರೆಸ್ಪಾಂಡ್ ಮಾಡುವುದಕ್ಕೆ, ಲೋನ್ ಮರುಪಾವತಿ (Loan Re Payment) ಮಾಡುವುದಕ್ಕೆ 60 ದಿನಗಳ ಸಮಯವನ್ನು ಕೊಡಬೇಕು.
ಮತ್ತೆ ಚಿನ್ನದ ಬೆಲೆ ಹೆಚ್ಚಳ, ಹೀಗೇ ಮುಂದುವರಿದರೆ ಇನ್ಮುಂದೆ ಚಿನ್ನ ಖರೀದಿ ಕಷ್ಟ! ಇಲ್ಲಿದೆ ಡೀಟೇಲ್ಸ್
ಈ ಸಮಯ ಕಳೆದು ಹೋದ ಮೇಲೆ ಕೂಡ ಅವರು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದರೆ ಇಎಂಐ ಕಟ್ಟಿಲ್ಲ ಎಂದರೆ ಆಗ ಮಾತ್ರ ಅವರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಅದಕ್ಕೂ ಕೆಲವು ನಿಯಮಗಳಿವೆ…
ಅವುಗಳು ಏನೇನು ಎಂದರೆ, ಲೋನ್ ರಿಕವರಿ ಮಾಡುವ ಏಜೆನ್ಟ್ ನಿಮ್ಮ ಮನೆಗೆ ಯಾವಾಗ ಬೇಕಾದರೂ ಬರುವ ಹಾಗಿಲ್ಲ, ಬೆಳಗ್ಗೆ 7 ಗಂಟೆ ಇಂದ ಸಂಜೆ 7 ಗಂಟೆಯ ಅವಧಿಯಲ್ಲಿ ಮಾತ್ರ ಬರಬೇಕು, ಬರುವುದಕ್ಕೆ ಮೊದಲು ನಿಮಗೆ ಮಾಹಿತಿ ಕೊಡಬೇಕು. ಹಾಗೆಯೇ ನಿಮಗೆ ಕಾಲ್ ಮಾಡುವುದು ಕೂಡ ಬೆಳಗ್ಗೆ 7 ಗಂಟೆ ಇಂದ ಸಂಜೆ 7 ಗಂಟೆ ಒಳಗೆ ಮಾಡಬೇಕು. ಈ ಸಮಯ ಮೀರಿ ಕರೆ ಮಾಡುವ ಹಾಗಿಲ್ಲ.
ಮನೆಗೆ ಬಂದು, ನಿಮ್ಮ ಮನೆ ಜಪ್ತಿ ಮಾಡುತ್ತೇವೆ, ಆಸ್ತಿ ಜಪ್ತಿ ಮಾಡುತ್ತೇವೆ ಎಂದು ನಿಮಗೆ ಬೆದರಿಕೆ ಹಾಕುವ ಹಾಗಿಲ್ಲ. ಈ ವಿಷಯವನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಕ್ರೆಡಿಟ್ ಸ್ಕೋರ್ ಕಡಿಮೆ ಅಂತ ಯಾವುದೇ ಲೋನ್ ಸಿಗ್ತಾಯಿಲ್ವಾ? ಇಲ್ಲಿದೆ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಟಿಪ್ಸ್
ಇಂಥ ಯಾವುದೇ ಘಟನೆ ನಡೆದು ರಿಕವರಿ ಏಜೆನ್ಟ್ ಗಳು ನಿಮಗೆ ತೊಂದರೆ ಕೊಡುತ್ತಿದ್ದಾರೆ ಎಂದರೆ ಅವರ ವಿರುದ್ದು ನೀವು ಪೊಲೀಸರ ಬಳಿ ದೂರು ಕೊಡಬಹುದು. RBI ರೂಲ್ಸ್ ಇದಾಗಿದ್ದು, ಫಾಲೋ ಮಾಡಿಲ್ಲ ಎಂದರೆ ಬ್ಯಾಂಕ್ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ..ಬ್ಯಾಂಕ್ ನವರೆ ನಿಮಗೆ ದಂಡ ಪಾವತಿ ಮಾಡಬೇಕಾಗುತ್ತದೆ. ಈ ನಿಯಮಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ..
Know the New Loan Recovery Rules
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.