ತೋಟ ಮತ್ತು ಕೃಷಿ ಭೂಮಿಯಲ್ಲಿ ಮನೆ ಕಟ್ಟುತ್ತಿರುವರಿಗೆ ಎಚ್ಚರಿಕೆ! ಹೊಸ ರೂಲ್ಸ್.. ಈ ವಿಷಯಗಳನ್ನ ಮೊದಲು ತಿಳಿದುಕೊಳ್ಳಿ
ನೀವು ಕೃಷಿ ನೆಲದಲ್ಲಿ ಮನೆ ಕಟ್ಟುತ್ತಿದ್ದರೆ (House at Agricultural land), ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ, ಇಲ್ಲದೆ ಹೋದರೆ, ನಿಮಗೆ ತೊಂದರೆ ಅಗಬಹುದು.
ಈಗ ನಮ್ಮ ರಾಜ್ಯದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ, ನಮ್ಮ ರಾಜ್ಯದ ಜನರು ಹೊರದೇಶದಿಂದ, ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದು ನೆಲೆಸುತ್ತಿರುವವರು ಇವರ ಸಂಖ್ಯೆ ಜಾಸ್ತಿ ಆಗುತ್ತಿರುವುದರಿಂದ ಅವರಿಗೆಲ್ಲಾ ವಾಸ್ತವ್ಯ ಹೂಡಲು ಮನೆಗಳು ಬೇಕಿದೆ. ಜನ ಜಾಸ್ತಿ ಆಗಿ, ಮನೆ ಅಗತ್ಯ ಹೆಚ್ಚಿರುವುದರಿಂದ ಕೃಷಿ ಭೂಮಿಗಳು (Agricultural land) ಕಡಿಮೆಯಾಗಿದೆ.
ಕೃಷಿ ನಡೆಯುತ್ತಿದ್ದ ಜಾಗದಲ್ಲಿ ಹೊಸ ಏರಿಯಾಗಳು, ಫ್ಲ್ಯಾಟ್ ಗಳು, ಅಪಾರ್ಟ್ಮೆಂಟ್ ಗಳು ತಲೆ ಎತ್ತುತ್ತಿವೆ. ಈಗ ಬೆಂಗಳೂರಿನಲ್ಲಿ ಕೆರೆಯಿದ್ದ ಜಾಗ, ಕೃಷಿ ನಡೆಯುತ್ತಿದ್ದ ಜಾಗದಲೆಲ್ಲಾ ಮನೆ ಕಟ್ಟಲಾಗುತ್ತಿದೆ. ಒಂದು ವೇಳೆ ನೀವು ಕೃಷಿ ನೆಲದಲ್ಲಿ ಮನೆ ಕಟ್ಟುತ್ತಿದ್ದರೆ (House at Agricultural land), ಕೆಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ, ಇಲ್ಲದೆ ಹೋದರೆ, ನಿಮಗೆ ತೊಂದರೆ ಅಗಬಹುದು.
ಆ ನೆಲದ ಮಾಲೀಕರು ಒಪ್ಪಿಗೆ ಕೊಡದೆಯೇ ನೀವು ಮನೆ ಕಟ್ಟುವ ಹಾಗಿಲ್ಲ. ಮಾಲೀಕರ ಒಪ್ಪಿಗೆ ಇಲ್ಲದೆಯೇ ಮನೆ ಕಟ್ಟಿದ್ದು ಆಗಿ ಹೋಗಿದ್ದರೆ, ನೀವು ಕಟ್ಟಿದ ಮನೆಯನ್ನು ಬೀಳಿಸುವ ಅವಕಶ್ಯಕತೆ ಇಲ್ಲ. ಕೆಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಜಮೀನು ಅಥವಾ ಕೃಷಿ ನೆಲ ಎಂದರೆ, ಕೃಷಿ ಮಾಡುವುದಕ್ಕಾಗಿ ರೈತರು ಅಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿರುತ್ತಾರೆ.
ಶಾಶ್ವತವಾಗಿ ಹುಲ್ಲುಗಾವಲಾಗಿ ಮಾಡಿದ್ದರು ಇರುತ್ತದೆ. ಹಾಗಾಗಿ ನೀವು ಕೃಷಿ ಭೂಮಿಯನ್ನು ಖರೀದಿ ಮಾಡಿದ್ದು, ಅದರಲ್ಲಿ ಮನೆ ಕಟ್ಟಬೇಕು (House Construction) ಎಂದುಕೊಂಡಿದ್ದರೆ, ಎಲ್ಲಕ್ಕಿಂತ ಮೊದಲು ಸರ್ಕಾರದ ಒಪ್ಪಿಗೆ ಪಡೆಯಬೇಕು. ಕೃಷಿ ಭೂಮಿಯಲ್ಲಿ ಮನೆ ಕಟ್ಟಬೇಕು ಎಂದರೆ ನೀವು ಪ್ರಮುಖವಾಗಿ ಮಾಡಬೇಕಾದ ಮತ್ತೊಂದು ಕೆಲಸ, ಈ ಕೃಷಿ ನೆಲವನ್ನು ವಾಸ್ತವ್ಯದ ನೆಲವಾಗಿ ಬದಲಾಯಿಸಬೇಕು.
ಈ ರೀತಿ ಮಾಡದೆ ಹೋದರೆ ಕೃಷಿ ನೆಲದಲ್ಲಿ ನೀವು ಮನೆ ಕಟ್ಟಲು ಸಾಧ್ಯ ಆಗುವುದೇ ಇಲ್ಲ. ಕೃಷಿ ನೆಲವನ್ನು ವಸತಿ ಭೂಮಿಯಾಗಿ ಬದಲಾಯಿಸುವುದಕ್ಕೆ ನೀವು ಕೆಲವು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಆದರೆ ಮನೆ ಕಟ್ಟಲು ಈ ಪ್ರಕ್ರಿಯೆ ಬಹಳ ಮುಖ್ಯ. ಕೃಷಿ ಭೂಮಿಯನ್ನು ವಸತಿ ಭೂಮಿಯಾಗಿ ಮಾಡಲು ನಿಮ್ಮ ಹತ್ತಿರ ಕೆಲವು ದಾಖಲೆಗಳು ಕಡ್ಡಾಯವಾಗಿ ಇರಲೇಬೇಕು.
ನೆಲದ ಓನರ್ ನ ಐಡೆಂಟಿಟಿ ಪ್ರೂಫ್, ಬೆಳೆಗಳ ಕುರಿತು ರಿಜಿಸ್ಟರ್ ಆಗಿರುವ ದಾಖಲೆ, ಗುತ್ತಿಗೆಯಾದರೆ ಅಥವಾ ಮಾಲೀಕರಾದರೆ ಅದರ ಬಗ್ಗೆ ಮಾಹಿತಿ. ಭೂ ಬಳಕೆ ಯೋಜನೆ ದಾಖಲೆ, ಸರ್ವೆ ನಕ್ಷೆ, ಭೂಮಿಯ ಕಂದಾಯ ಕಟ್ಟಿರುವ ರಶೀದಿ ಖಂಡಿತವಾಗಿ ಬೇಕು. ಹಾಗೆಯೇ ನಿಮ್ಮ ಭೂಮಿ ಮೇಲೆ ಕಂದಾಯ ಬಾಕಿ ಅಥವಾ ಯಾವುದೇ ಕೇಸ್ ಇರಬಾರದು.
ಈ ಎಲ್ಲಾ ವಿಚಾರಗಳನ್ನು ನೆನಪಿಲ್ಲಿ ಇಟ್ಟುಕೊಂಡು ಕೃಷಿ ಭೂಮಿಯಲ್ಲಿ ಮನೆ ಕಟ್ಟಬಹುದು. ಇದರ ಜೊತೆಗೆ ನೀವು ನೆನಪಿನಲ್ಲಿ ಇಡಬೇಕಾದ ಮುಖ್ಯವಾದ ಮತ್ತೊಂದು ವಿಷಯ, ಈ ರೀತಿ ತೊಂದರೆ ಆಗುವುದಕ್ಕಿಂತ ಮೊದಲೇ, ಭೂಮಿಯನ್ನು ಖರೀದಿ ಮಾಡುವ ಸಮಯದಲ್ಲೇ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿ ಪಡೆದು, ಯಾವುದೇ ಸಮಸ್ಯೆ ಇಲ್ಲ ಎನ್ನುವುದಾದರೆ ಮಾತ್ರ, ಭೂಮಿ ಖರೀದಿ ಮಾಡಿ.
Know these things before constructing house on agricultural land
Follow us On
Google News |