ದಿನಕ್ಕೆ 30 ಲೀಟರ್ ಹಾಲು ಕೊಡುವ ಈ ಎಮ್ಮೆ ಸಾಕಣಿಕೆಯಿಂದ ತಿಂಗಳಿಗೆ ಲಕ್ಷಗಟ್ಟಲೆ ಆದಾಯ!

ಹಸುವಿನ ಹಾಲಿಗಿಂತ ಎಮ್ಮೆಯ ಹಾಲು ದಪ್ಪವಾಗಿದ್ದು, ಈ ಹಾಲಿನಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುವ ಕಾರಣ ಅನೇಕರು ಎಮ್ಮೆಯ ಹಾಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ.

ಸಾಮಾನ್ಯವಾಗಿ ನಾವು ಹಳ್ಳಿ ಪ್ರದೇಶಗಳಲ್ಲಿ ಕೃಷಿ ಹಾಗೂ ಪ್ರಾಣಿ ಸಾಕಾಣಿಕೆಗಳನ್ನು ಹೆಚ್ಚಾಗಿ ನೋಡಬಹುದು. ಇನ್ನು ಅನೇಕ ಮಂದಿ ಕೃಷಿ (Agriculture) ಹಾಗೂ ಪ್ರಾಣಿ ಸಾಕಾಣಿಕೆಗಳನ್ನ ತಮ್ಮ ಮೂಲ ಆದಾಯವಾಗಿ ಮಾಡಿಕೊಂಡಿರುತ್ತಾರೆ.

ಅನೇಕ ರೈತರು ಹಸು ಮತ್ತು ಎಮ್ಮೆ ಸಾಕಾಣಿಕೆ ಮಾಡಿ ಅದರಿಂದ ಸಾಕಷ್ಟು ಆದಾಯ ಸಹ ಗಳಿಸುತ್ತಾರೆ. ಇನ್ನು ಮಾರುಕಟ್ಟೆಯಲ್ಲಿ ಹಸು ಮತ್ತು ಹೆಮ್ಮೆಯ ಹಾಲಿಗೆ ಸಾಕಷ್ಟು ಬೇಡಿಕೆ ಇರುವುದು ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಆದರೆ ಹೆಮ್ಮೆಯ ಹಾಲಿಗೆ (Buffalo Milk) ಹಸುವಿನ ಹಾಲಿಗಿಂತ ಒಂದು ಪಟ್ಟು ಬೇಡಿಕೆ ಹೆಚ್ಚಿದೆ ಎಂದರೆ ತಪ್ಪಾಗುವುದಿಲ್ಲ.

ಮತ್ತೊಮ್ಮೆ ಏರಿಕೆ ಕಂಡ ಚಿನ್ನದ ಬೆಲೆ! ಇನ್ನಷ್ಟು ಏರಿಕೆಯಾಗುವ ಮುನ್ನ ಇಂದೇ ಖರೀದಿಸಿ ಚಿನ್ನ ಬೆಳ್ಳಿ

Murrah Buffalo

ಹಸುವಿನ ಹಾಲಿಗಿಂತ ಎಮ್ಮೆಯ ಹಾಲು ದಪ್ಪವಾಗಿದ್ದು, ಈ ಹಾಲಿನಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುವ ಕಾರಣ ಅನೇಕರು ಎಮ್ಮೆಯ ಹಾಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಇನ್ನು ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಹೆಮ್ಮೆಯ ಹಾಲಿಗೆ ಸಾಕಷ್ಟು ಬೇಡಿಕೆ ಸಹ ಇದೆ.

ಅಲ್ಲದೆ ಹಸು ಸಾಕಾಣಿಕೆಗಿಂತ ಹೆಮ್ಮೆ ಸಾಕಾಣಿಕೆಯಲ್ಲಿ ನೀವು ಹೆಚ್ಚಿನ ಆದಾಯವನ್ನು ಗಳಿಸಬಹುದು. ಹೌದು, ಕೆಲವು ನಿರ್ದಿಷ್ಟ ಹೆಮ್ಮೆಯ ತಳಿಗಳು ದಿನಕ್ಕೆ ಸುಮಾರು ಮೂವತ್ತಕ್ಕೂ ಹೆಚ್ಚು ಲೀಟರ್ ಹಾಲನ್ನು ನೀಡುವ ಸಾಮರ್ಥ್ಯ ಹೊಂದಿದೆ. ಈ ಮೂಲಕ ಇಂತಹ ತಳಿ ಎಮ್ಮೆಗಳನ್ನು ಸಾಕುವ ಮೂಲಕ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು.

ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 35000 ವಿದ್ಯಾರ್ಥಿ ವೇತನ! ಈ ದಾಖಲೆ ಇಟ್ಟುಕೊಂಡು ಅಪ್ಲೈ ಮಾಡಿ

Buffalo Farming Businessನೀವು ಮುರ್ರಾ ಎಮ್ಮೆಯ ತಳಿಯನ್ನು ಸಾಕುವ ಮೂಲಕ ನೀವು ದುಪ್ಪಟ್ಟು ಲಾಭವನ್ನು ಪಡೆಯಬಹುದು ಎಂದರೆ ತಪ್ಪಾಗುವುದಿಲ್ಲ. ಈ ಮುರ್ರಾ ಎಮ್ಮೆ ನೋಡಲು ಕಡು ಕಪ್ಪು ಬಣ್ಣದಲಿದ್ದು, ಇದ್ರ ತಲೆ ಚಿಕ್ಕದಾಗಿದ್ದು, ಉದ್ದನೆಯ ಬಾಲದ ಜೊತೆಗೆ ಸರಿಯಾದ ಮೈಕಟ್ಟು ಹೊಂದಿದೆ. ಹಾಗೂ ಈ ಎಮ್ಮೆಯ ಕೊಂಬುಗಳು ಕೊಂಚ ವಕ್ರವಾಗಿರುವುದನ್ನು ಸಹ ನೀವು ಗಮನಿಸಬಹುದು. ಹಾಗೆ ಈ ಎಮ್ಮೆಯ ತಲೆ ಹಾಗು ಮೈ ಭಾಗದಲ್ಲಿ ನೀವು ಚಿನ್ನದ ಬಣ್ಣದ ಕೂದಲುಗಳನ್ನು ಸಹ ನೋಡಬಹುದು.

ಸಾಮಾನ್ಯವಾಗಿ ಈ ಒಂದು ಮುರ್ರಾ ತಳಿಯ ಎಮ್ಮೆ ಇತರ ತಳಿಗಳಿಗಿಂತ ಹೆಚ್ಚಿನ ಹಾಲು ನೀಡುವ ಸಾಮರ್ಥ್ಯ ಹೊಂದಿದೆ. ಇನ್ನು ಈಗಾಗಲೇ ದೇಶದ ಅನೇಕ ಸ್ಥಳಗಳಲ್ಲಿ ಈ ಒಂದು ಎಮ್ಮೆಯ ಸಾಕಾಣಿಕೆಯಿಂದ ಅನೇಕರು ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ.

ಈ ತಳಿ ಮೇಕೆ ಸಾಕಾಣಿಕೆ ಮಾಡಿದ್ರೆ ಒಂದೇ ತಿಂಗಳಲ್ಲಿ ಲಕ್ಷ ಗಟ್ಟಲೆ ಆದಾಯ! ಯಾವ ತಳಿ ಗೊತ್ತಾ?

ಈ ಒಂದು ಮುರ್ರಾ ಎಮ್ಮೆಯು ದಿನಕ್ಕೆ ಸುಮಾರು 20 ರಿಂದ 30 ಲೀಟರ್ ಹಾಲು ನೀಡುವ ಸಾಮರ್ಥ್ಯ ಹೊಂದಿದೆ. ಇನ್ನು ಈ ಒಂದು ತಳಿ ಎಮ್ಮೆಯ ಹಾಲಿನ ಬೆಲೆ ಕೂಡ ಇತರ ತಳಿಗೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಹೆಚ್ಚಿದೆ ಎನ್ನಲಾಗುತ್ತಿದೆ.

ಇನ್ನು ಈ ಒಂದು ಎಮ್ಮೆಯ ಗರ್ಭಾವಸ್ಥೆ ಸುಮಾರು 310 ದಿನಗಳು ಇದೆ ಎನ್ನಲಾಗುತ್ತಿದೆ. ಇನ್ನು ಈ ಒಂದು ಮುರ್ರಾ ತಳಿ ಎಮ್ಮೆಯ ಬೆಲೆ ಸುಮಾರು 50 ಸಾವಿರದಿಂದ 2 ಲಕ್ಷದವರೆಗೂ ಇದೆ ಎನ್ನಲಾಗುತ್ತಿದೆ. ಇನ್ನು ಈ ಒಂದು ಎಮ್ಮೆ ಸಾಕಾಣಿಕೆ ಮಾಡುವ ಮೂಲಕ ಜನರು ಸಾಕಷ್ಟು ಆದಾಯವನ್ನು ಗಳಿಸಬಹುದು. ನೀವು ಈ ಒಂದು ವ್ಯಾಪಾರ ಮಾಡುವ ಮೂಲಕ ಲಕ್ಷಗಟ್ಟಲೆ ಹಣ ಸಂಪಾದಿಸಬಹುದು.

Lakhs of income per month from this buffalo farm that gives 30 liters of milk per day

Related Stories