ಈ LIC ಯೋಜನೆಯಲ್ಲಿ 72,000 ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 25,000 ಪೆನ್ಶನ್ ಗ್ಯಾರಂಟಿ! ಈಗಲೇ ಅರ್ಜಿ ಹಾಕಿ

ಈ Pension ನ ಹೆಸರು LIC ಜೀವನ್ ನಿಧಿ ಯೋಜನೆ (LIC Jeevan Nidhi Scheme). ಇದು ವೃದ್ಧಾಪ್ಯದ ಪೆನ್ಶನ್ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ವಯಸ್ಸಾದ ಕಾಲಕ್ಕೆ ಸಹಾಯ ಆಗುತ್ತದೆ.

LIC Pension Scheme : ನಾವು ನಿವೃತ್ತಿ ಹೊಂದಿದ ನಂತರ ನಮ್ಮ ಜೀವನದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಆಗಬಾರದು, ತೊಂದರೆ ಆಗಬಾರದು ಎಂದು ನಾವು ಪೆನ್ಶನ್ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡುತ್ತೇವೆ. ವಯಸ್ಸಾದ ಮೇಲೆ ನಿವೃತ್ತಿ ಹೊಂದಿದ ನಂತರ ಮತ್ತೊಂದು ಕಡೆ ಹೋಗಿ ಕೆಲಸ ಮಾಡಲು ಅಥವಾ ಹಣ ಸಂಪಾದನೆ ಮಾಡಲು ಮೊದಲಿನ ಹಾಗೆ ಶಕ್ತಿ ಉಳಿದಿರುವುದಿಲ್ಲ.

ಹಾಗಾಗಿ ಈ ವೇಳೆ ನೆಮ್ಮದಿಯ ಜೀವನಕ್ಕಾಗಿ ಆರ್ಥಿಕ ಸವಲತ್ತು ಇರುವುದು ಬಹಳ ಮುಖ್ಯವಾಗುತ್ತದೆ. ಇದಕ್ಕಾಗಿ ಪೆನ್ಶನ್ ಹೂಡಿಕೆ ಬಹಳ ಮುಖ್ಯವಾಗುತ್ತದೆ..

ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವವರಿಗೆ ಬಂಪರ್ ಯೋಜನೆ! ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಿ

ಈ LIC ಯೋಜನೆಯಲ್ಲಿ 72,000 ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು 25,000 ಪೆನ್ಶನ್ ಗ್ಯಾರಂಟಿ! ಈಗಲೇ ಅರ್ಜಿ ಹಾಕಿ - Kannada News

ಈ ರೀತಿ ಪೆನ್ಶನ್ ಹೂಡಿಕೆಗೆ LIC ಯಲ್ಲಿ ನಿಮಗೆ ಸಾಕಷ್ಟು ಒಳ್ಳೆಯ ಯೋಜನೆಗಳಿವೆ. ಅವುಗಳಲ್ಲಿ ನೀವು ಕೆಲಸ ಮಾಡುವ ಸಮಯದಿಂದಲೇ ತಿಂಗಳಿಗೆ ಇಂತಿಷ್ಟು ಮೊತ್ತ ಎಂದು ಹೂಡಿಕೆ ಮಾಡುತ್ತಾ ಬಂದರೆ ನಿವೃತ್ತಿ ಬಳಿಕ ಯಾವುದೇ ಚಿಂತೆ ಇಲ್ಲದೆ ನೆಮ್ಮದಿಯ ಜೀವನವನ್ನು ನಡೆಸಬಹುದು. ಅದರಲ್ಲು ಬಡತನದಲ್ಲಿರುವ ಕುಟುಂಬದ ಜನರಿಗೆ LIC ಯ ಈ ಯೋಜನೆಗಳಿಂದ ಹೆಚ್ಚು ಉಳಿತಾಯ ಜೊತೆಗೆ ಸೌಲಭ್ಯಗಳು ಕೂಡ ಸಿಗುತ್ತದೆ.

ಹೀಗೆ LIC ಯಲ್ಲಿ ನಿವೃತ್ತಿ ನಂತರದ ಜೀವನ ಚೆನ್ನಾಗಿ ಕಳೆಯುವ ಸಲುವಾಗಿ ಬಹಳಷ್ಟು ಯೋಜನೆಗಳು ಇದೆ. ಇದೀಗ LIC ನಿವೃತ್ತಿ ನಂತರದ ಜೀವನಕ್ಕೆ ಹೆಚ್ಚು ರಕ್ಷಣೆ ಕೊಡಲು ಮತ್ತೊಂದು ಹೊಸ ಪೆನ್ಶನ್ ಯೋಜನೆಯನ್ನು ಜಾರಿಗೆ ತಂದಿದೆ.

LIC ಈಗ ಹೊಸದಾಗಿ ತಂದಿರುವ ಈ Pension ನ ಹೆಸರು LIC ಜೀವನ್ ನಿಧಿ ಯೋಜನೆ (LIC Jeevan Nidhi Scheme). ಇದು ವೃದ್ಧಾಪ್ಯದ ಪೆನ್ಶನ್ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ವಯಸ್ಸಾದ ಕಾಲಕ್ಕೆ ಸಹಾಯ ಆಗುತ್ತದೆ.

Life Insurance Policyಈ ಯೋಜನೆಯಲ್ಲಿ ಹೂಡಿಕೆ ಮಾಡುವ ಅವಧಿ ಮುಗಿದ ಮೇಲೆ ನಿಮಗೆ ವರ್ಷಾಶನ ರೀತಿಯಲ್ಲಿ ಗ್ರಾಹಕರಿಗೆ ಹಣವನ್ನಿ ಪಾವತಿ ಮಾಡಲಾಗುತ್ತದೆ. LIC ಜೀವನ್ ನಿಧಿ ಯೋಜನೆಯ ಮೆಚ್ಯುರಿಟಿ ಸಮಯ 7 ವರ್ಷದಿಂದ 35 ವರ್ಷಗಳ ವರೆಗು ಇರುತ್ತದೆ.

ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಏನೆಲ್ಲಾ ನಿಯಮಗಳಿವೆ ಎಂದು ಈಗ ತಿಳಿಯೋಣ.. ಜೀವನ್ ನಿಧಿ ಯೋಜನೆಯಲ್ಲಿ (LIC Jeevan Nidhi Scheme) ಹೂಡಿಕೆ ಮಾಡಲು 20 ರಿಂದ 58 ವರ್ಷಗಳ ಒಳಗಿನ ವ್ಯಕ್ತಿ ಆಗಿರಬೇಕು. ಈ ವಯಸ್ಸಿನವರು ಹೂಡಿಕೆ ಮಾಡಿ, ವಯಸ್ಸಾದ ಕಾಲದಲ್ಲಿ ಪೆನ್ಶನ್ ಪಡೆಯಬಹುದು.

ಮತ್ತೆ ಏರಿದ ಚಿನ್ನದ ಬೆಲೆ, ಚಿನ್ನ ಮತ್ತು ಬೆಳ್ಳಿ ಬೆಲೆ ಮತ್ತಷ್ಟು ದುಬಾರಿ! ಎಷ್ಟಿದೆ ಇಂದಿನ ದರಗಳು?

ಈ ಯೋಜನೆಯಲ್ಲಿ ನೀವು ಎಷ್ಟು ಹಣ ಹೂಡಿಕೆ ಮಾಡುತ್ತಿರೋ ಅಷ್ಟು ಹಣಕ್ಕೆ ತೆರಿಗೆ ವಿನಾಯಿತಿ ಸಿಗುತ್ತದೆ, ಹಾಗೆಯೇ 6 ವರ್ಷಕ್ಕೆ ಒಂದು ಸಾರಿ ಬೋನಸ್ ಕೂಡ ಸಿಗುತ್ತದೆ. ಇಲ್ಲಿ ನಿಮಗೆ ಬಡ್ಡಿ ಹೇಗೆ ಸಿಗುತ್ತದೆ ಎಂದು ನೋಡುವುದಾದರೆ, ಉದಾಹರಣೆಗೆ ದಿನಕ್ಕೆ ನೀವು 72 ರೂಪಾಯಿ ಉಳಿಸಿದರೆ ತಿಂಗಳಿಗೆ ₹2160 ರೂಪಾಯಿ ಉಳಿಸಿ ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಬಂದರೆ ವರ್ಷಕ್ಕೆ ₹64,800 ರೂಪಾಯಿ ಉಳಿತಾಯ ಆದ ಹಾಗೆ ಆಗುತ್ತದೆ. ಇದರೊಡನೆ 10 ಲಕ್ಷ ರೂಪಾಯಿಯ ಲೈಫ್ ಇನ್ಷುರೆನ್ಸ್ ಕೂಡ ಸಿಗುತ್ತಿತ್ತು.

ಜೊತೆಗೆ 25,000 ಪ್ರತಿ ತಿಂಗಳು ಪೆನ್ಶನ್ ಕೂಡ ಸಿಗುತ್ತದೆ. ತಿಂಗಳಿಗೆ ಬರುವ ಈ ಪೆನ್ಶನ್ ಹಣದಿಂದ ನಿವೃತ್ತಿ ಹೊಂದಿದ ಬಳಿಕ ವೃದ್ಧಾಪ್ಯದಲ್ಲಿ ನೆಮ್ಮದಿಯ ಜೀವನ ನಡೆಸಬಹುದು. ಇಲ್ಲಿ ಹೂಡಿಕೆ ಮಾಡುವ ಮೊತ್ತ ನಿಮ್ಮ ವಯಸ್ಸಿನ ಮೇಲೆ ನಿರ್ಣಯವಾಗುತ್ತದೆ. ಪೂರ್ತಿ ಮಾಹಿತಿಗಾಗಿ ನಿಮ್ಮ ಹತ್ತಿರದ LIC ಕಚೇರಿಗೆ ಭೇಟಿ ನೀಡಬಹುದು.

LIC Jeevan Nidhi Scheme Benefits Details

Follow us On

FaceBook Google News

LIC Jeevan Nidhi Scheme Benefits Details