10-25 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯ; ಜೊತೆಗೆ 35% ಸಬ್ಸಿಡಿ, ಈಗಲೇ ಅರ್ಜಿ ಹಾಕಿ!
Loan : PMEGP ಯೋಜನೆ ಅಡಿಯಲ್ಲಿ ಹೊಸ ಉದ್ಯಮವನ್ನು ಆರಂಭಿಸುವುದರ ಜೊತೆಗೆ ಇರುವ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಳ್ಳಲು ಕೂಡ ಸಾಲವನ್ನು ಪಡೆಯಬಹುದು.
- ಬ್ಯೂಟಿ ಪಾರ್ಲರ್ ಇಡುವುದಕ್ಕೂ ಸಿಗುತ್ತೆ 10 ಲಕ್ಷ ರೂಪಾಯಿ ಸಾಲ
- 10 ಲಕ್ಷ ರೂಪಾಯಿ ಸಾಲಕ್ಕೆ 35% ಸಬ್ಸಿಡಿ
- PMEGP ಯೋಜನೆಯ ಅಡಿಯಲ್ಲಿ ಉದ್ಯಮಕ್ಕೆ ಸಿಗುತ್ತೆ ಬಂಡವಾಳ
Loan Scheme : ಜಾಬ್ ಮಾಡಿ ಮಾಡಿ ಸಾಕಾಯ್ತು, ಈಗಲಾದರೂ ಒಂದು ಬಿಸಿನೆಸ್ (Own Business) ಶುರು ಮಾಡೋಣ, ಕೈ ತುಂಬಾ ಆದಾಯ ಗಳಿಸೋಣ ಎಂದು ನೀವು ಅಂದುಕೊಂಡರೆ ಬಂಡವಾಳಕ್ಕೆ ಚಿಂತೆ ಮಾಡುವ ಅಗತ್ಯವೇ ಇಲ್ಲ.
ಕೇಂದ್ರ ಸರ್ಕಾರದ ಈ ಹೊಸ ಯೋಜನೆಯ ಅಡಿಯಲ್ಲಿ ನೀವು ಸುಲಭವಾಗಿ 25 ಲಕ್ಷಗಳವರೆಗೆ ಸಾಲವನ್ನು ಪಡೆಯಬಹುದು. ಅದರ ಜೊತೆಗೆ 35% ಸಬ್ಸಿಡಿಯನ್ನು ಕೂಡ ಸಾಲದ (Subsidy Loan) ಮೇಲೆ ನೀಡಲಾಗುತ್ತದೆ. ಈ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.
ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ!
ಸರ್ವಿಸ್ ಸೆಕ್ಟರ್ ನಲ್ಲಿ ಉದ್ಯೋಗ ಆರಂಭಿಸುವವರಿಗಾಗಿ PMEGP ಯೋಜನೆಯ ಅಡಿಯಲ್ಲಿ 35% ಸಬ್ಸಿಡಿ ಸಾಲವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಉದಾಹರಣೆಗೆ ಮೆಡಿಕಲ್ ಶಾಪ್, ಬ್ಯೂಟಿ ಪಾರ್ಲರ್, ಸಲೂನ್, ಮೆಕಾನಿಕ್ ಶಾಪ್ ಹೀಗೆ ಜನರಿಗೆ ಸರ್ವಿಸ್ ಕೊಡುವಂತಹ ಯಾವುದೇ ಬಿಸಿನೆಸ್ ಮಾಡಿದ್ರು ಬಂಡವಾಳಕ್ಕಾಗಿ ಸಾಲ (Business Loan) ಪಡೆಯಬಹುದು. ಬ್ಯಾಂಕ್ ನಲ್ಲಿ 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಂಡು ಅದಕ್ಕೆ 35% ಸಬ್ಸಿಡಿಯನ್ನು ಪಡೆಯಬಹುದು.
ಈ ಬ್ಯಾಂಕುಗಳಲ್ಲಿ ನಿಮ್ಮ ಖಾತೆ ಇದ್ದರೆ ನಿಮ್ಮ ಹಣಕ್ಕೆ ಸಿಗುತ್ತೆ 8.75% ಬಡ್ಡಿ
ಇಂಥವರಿಗೆ ಸಿಗುತ್ತೆ 25 ಲಕ್ಷ ರೂಪಾಯಿ ಸಾಲ!
PMEGP ಯೋಜನೆ ಅಡಿಯಲ್ಲಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮಾಡುವವರಿಗೆ 25 ಲಕ್ಷ ರೂಪಾಯಿಯವರೆಗೆ ಸಾಲ ಸಿಗುತ್ತೆ. ಇಂಥವರಿಗೂ ಕೂಡ 35% ಸಬ್ಸಿಡಿ ಲಭ್ಯವಿದೆ.
ಸಾಲ ಪಡೆದುಕೊಳ್ಳುವುದು ಹೇಗೆ?
PMEGP ಯೋಜನೆ ಅಡಿಯಲ್ಲಿ ಹೊಸ ಉದ್ಯಮವನ್ನು ಆರಂಭಿಸುವುದರ ಜೊತೆಗೆ ಇರುವ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿಕೊಳ್ಳಲು ಕೂಡ ಸಾಲವನ್ನು ಪಡೆಯಬಹುದು.
ಇದಕ್ಕಾಗಿ ನೀವು ಹತ್ತಿರದ ಬ್ಯಾಂಕಿಗೆ ಹೋಗಿ ನಿಮ್ಮ ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಅಗತ್ಯ ಇರುವ ದಾಖಲೆಗಳನ್ನು ನೀಡಿದರೆ ಸಾಲ ಮಂಜೂರಾಗುತ್ತದೆ. ಬ್ಯಾಂಕ್ ನಿಮ್ಮ ಅರ್ಹತೆಯ ಆಧಾರದ ಮೇಲೆ ಸಾಲದ ಮೊತ್ತವನ್ನು ಬಿಡುಗಡೆ ಮಾಡುತ್ತದೆ.
Loan facility up to 10-25 lakh with a 35 Percent subsidy