ಈ ಬ್ಯಾಂಕುಗಳಲ್ಲಿ ನಿಮ್ಮ ಖಾತೆ ಇದ್ದರೆ ನಿಮ್ಮ ಹಣಕ್ಕೆ ಸಿಗುತ್ತೆ 8.75% ಬಡ್ಡಿ
ಕೆಲವು ಬ್ಯಾಂಕುಗಳು ಈಗ ಎಫ್ ಡಿ (Bank FD) ಮೇಲೆ ಹೆಚ್ಚಿನ ಬಡ್ಡಿದರವನ್ನು ಕೂಡ ಘೋಷಿಸಿದೆ. ಡಿಸೆಂಬರ್ 31 2024ರ ಅನ್ವಯ ಬ್ಯಾಂಕಿನ ಪರಿಷ್ಕರಿಸಿದ ಬಡ್ಡಿದರ ಈ ರೀತಿ ಇದೆ.
- ಬ್ಯಾಂಕ್ ನಲ್ಲಿ ಎಫ್ ಡಿ ಠೇವಣಿಗೆ 8.5% ಬಡ್ಡಿ
- ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 9% ವರೆಗೂ ಬಡ್ಡಿ ಪಡೆಯಬಹುದು
- ಎಫ್ ಡಿ ಹೂಡಿಕೆಯಿಂದ ಗಳಿಸಬಹುದು ದುಪ್ಪಟ್ಟು ಲಾಭ
Fixed Deposit : ನಮ್ಮ ಬಳಿ ಸ್ವಲ್ಪ ಹಣವಿದ್ದರೂ ಅದನ್ನು ದುಪ್ಪಟ್ಟು ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು. ಇದಕ್ಕಾಗಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಟ್ರೇಡ್ ಮಾರ್ಕೆಟ್ ನಲ್ಲಿಯೂ ಅಥವಾ ಮ್ಯೂಚುವಲ್ ಫಂಡ್ ನಲ್ಲಿಯೂ ಹಣ ಹೂಡಿಕೆ ಮಾಡಿದರೆ, ಸ್ವಲ್ಪ ಮಾರುಕಟ್ಟೆಯ ಅಪಾಯವು ಇರಬಹುದು.
ಆದರೆ ನೀವು ಎಫ್ ಡಿ ಮೇಲೆ ಹೂಡಿಕೆ ಮಾಡುತ್ತಾ ಬಂದರೆ ಉತ್ತಮ ಆದಾಯವನ್ನು ಗಳಿಸಿಕೊಳ್ಳಲು ಸಾಧ್ಯವಿದೆ ಅದರಲ್ಲೂ ಕೆಲವು ಬ್ಯಾಂಕುಗಳು ಈಗ ಎಫ್ ಡಿ (Bank FD) ಮೇಲೆ ಹೆಚ್ಚಿನ ಬಡ್ಡಿದರವನ್ನು ಕೂಡ ಘೋಷಿಸಿದೆ. ಡಿಸೆಂಬರ್ 31 2024ರ ಅನ್ವಯ ಬ್ಯಾಂಕಿನ ಪರಿಷ್ಕರಿಸಿದ ಬಡ್ಡಿದರ ಈ ರೀತಿ ಇದೆ.
ನಿಮ್ಮ ಬ್ಯಾಂಕ್ ಖಾತೆಯಲ್ಲಿ ರೂ.436 ಕಟ್ ಆಗುವ ಮುನ್ನ ಈ ರೀತಿ ಮಾಡಿ
ಫೆಡರಲ್ ಬ್ಯಾಂಕ್
ಸಾಮಾನ್ಯ ನಾಗರಿಕರಿಗೆ 3% ನಿಂದ 7.4% ವರೆಗೆ ಬಡ್ಡಿ ದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ 8% ವರೆಗೂ ನಿಗದಿಪಡಿಸಲಾಗಿದೆ.
ಆರ್ ಬಿ ಎಲ್ ಬ್ಯಾಂಕ್
ಇಲ್ಲಿ ಸಾಮಾನ್ಯ ನಾಗರಿಕರಿಗೆ 3.5% ಇಂದ 8% ವರೆಗೆ ಬಡ್ಡಿ ನೀಡಲಾಗುವುದು. ಹಾಗೆಯೇ ಹಿರಿಯ ನಾಗರಿಕರಿಗೆ 8.5% ಬಡ್ಡಿ ಹಾಗೂ ಸೂಪರ್ ಸೀನಿಯರ್ ಸಿಟಿಸನ್ ಗೆ 8.7 5% ವರೆಗೆ ಬಡ್ಡಿ ಪಾವತಿಸಲಾಗುವುದು.
ಬ್ಯಾಂಕ್ ಆಫ್ ಮಹಾರಾಷ್ಟ್ರ
ಸಾಮಾನ್ಯ ನಾಗರಿಕರಿಗೆ 2.85% ನಿಂದ 7.35% ವರೆಗೆ ಬಡ್ಡಿ ನೀಡಲಾಗುತ್ತದೆ ಹಾಗೂ ಹಿರಿಯ ನಾಗರಿಕರಿಗೆ 7.85%ವರೆಗೆ ಬಡ್ಡಿಯನ್ನು ಏರಿಕೆ ಮಾಡಲಾಗಿದೆ.
HDFC ಬ್ಯಾಂಕ್ ನಲ್ಲಿ 11 ಲಕ್ಷ ಸಾಲಕ್ಕೆ ಎಷ್ಟು EMI ಕಟ್ಟಬೇಕು? ಇಲ್ಲಿದೆ ಡೀಟೇಲ್ಸ್
ಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಇತರ ಬ್ಯಾಂಕುಗಳಿಗಿಂತ ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ 888 ದಿನಗಳ ಎಫ್ ಡಿ ಹೂಡಿಕೆಗೆ 9% ವರೆಗೂ ಬಡ್ಡಿ ಸಿಗುತ್ತದೆ.
ನೀವು ಎಫ್ಡಿ ಹೂಡಿಕೆ ಮಾಡುವಾಗ ಯಾವ ಬ್ಯಾಂಕ್ ನಲ್ಲಿ ಎಷ್ಟು ದಿನಗಳ ಹೂಡಿಕೆಗೆ ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ ಎಂಬುದನ್ನು ಪರಿಶೀಲಿಸಿ ನಂತರ ಹೂಡಿಕೆ ಮಾಡಿ ಹಾಗೂ ಹೆಚ್ಚಿನ ಲಾಭವನ್ನು ಗಳಿಸಿ.
These banks offer 8.75 Percent interest on your Fixed Deposit