ನಿಮ್ಮ ಬ್ಯಾಂಕ್ ಖಾತೆಯಲ್ಲಿ ರೂ.436 ಕಟ್ ಆಗುವ ಮುನ್ನ ಈ ರೀತಿ ಮಾಡಿ
ಹಣ ಕಟ್ಟಾಗುವುದನ್ನು ತಪ್ಪಿಸಬೇಕಿದ್ದರೆ, ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯ ಇರುವ ದಾಖಲೆ ನೀಡಿ ಆಟೋ ಡೆಬಿಟ್ ಸ್ಟಾಪ್ ಮಾಡಬಹುದು.
ಹೊಸದಾಗಿ ಬ್ಯಾಂಕ್ ಖಾತೆಯನ್ನು (Bank Account) ತೆರೆದಿದ್ದು, ನಿಮ್ಮ ಖಾತೆಯಿಂದ ಸಡನ್ನಾಗಿ ರೂಪಾಯಿ 436 ಕಟ್ಟಾದರೆ ನಿಮಗೆ ಆಶ್ಚರ್ಯ ಆಗಬಹುದು. ಆದರೆ ಈ ರೀತಿ ಯಾಕೆ ಆಗುತ್ತೆ? ಬ್ಯಾಂಕ್ ನಿಮ್ಮ ಗಮನಕ್ಕೆ ತರದೆ ಇಷ್ಟು ಹಣವನ್ನು ಯಾಕೆ ಕಟ್ ಮಾಡುತ್ತೆ ಎನ್ನುವುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ!
ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮ ಯೋಜನೆ ಅಡಿಯಲ್ಲಿ ಯಾವುದೇ ಖಾಸಗಿ ಬ್ಯಾಂಕ್ ನಲ್ಲಿ ಅಥವಾ ಸರ್ಕಾರಿ ಬ್ಯಾಂಕ್ ನಲ್ಲಿ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಹೊಸದಾಗಿ ಖಾತೆ ತೆರೆದರೆ ಅವರಿಗೆ ಜೀವವಿಮೆ ಸೌಲಭ್ಯವನ್ನು ಒದಗಿಸಲಾಗುತ್ತದೆ.
18 ರಿಂದ 50 ವರ್ಷ ವಯಸ್ಸಿನವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನೀವು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಖಾತೆಯನ್ನು ಹೊಂದಿದ್ದು, ಆಟೋ ಪೆ ಆಯ್ಕೆಯನ್ನು ಆನ್ ಮಾಡಿದರೆ ಪ್ರತಿ ತಿಂಗಳು ನಿಮ್ಮ ಖಾತೆಯಿಂದ ಹಣ ಈ ಯೋಜನೆಗಾಗಿ ಪಾವತಿಯಾಗುತ್ತದೆ.
HDFC ಬ್ಯಾಂಕ್ ನಲ್ಲಿ 11 ಲಕ್ಷ ಸಾಲಕ್ಕೆ ಎಷ್ಟು EMI ಕಟ್ಟಬೇಕು? ಇಲ್ಲಿದೆ ಡೀಟೇಲ್ಸ್
ಈ ಯೋಜನೆಯ ಅಡಿಯಲ್ಲಿ ಎರಡು ಲಕ್ಷ ರೂಪಾಯಿಗಳನ್ನು 12 ತಿಂಗಳ ಅವಧಿಗೆ ನೀಡಲಾಗುತ್ತದೆ. ಅಂದರೆ ಪಾಲಿಸಿದಾರ ಮರಣ ಹೊಂದಿದರೆ ಕಾರಣವನ್ನು ಕೇಳದೆ ಅವರ ಕುಟುಂಬಕ್ಕೆ 2 ಲಕ್ಷ ರೂಪಾಯಿಗಳನ್ನು ಕೊಡಲಾಗುವುದು.
2015ರಲ್ಲಿ ಈ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದಲ್ಲಿ ಜಾರಿಗೆ ತರಲಾಯಿತು. ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಲೈಫ್ ಇನ್ಸೂರೆನ್ಸ್ (Life Insurance) ಇರಬೇಕು ಎನ್ನುವುದು ಈ ಯೋಜನೆ ಉದ್ದೇಶ.
ಸಾಲ ಮಾಡಿ ತೀರಿಸೋಕೆ ಆಗದೆ ಇರೋರಿಗೆ ಬ್ಯಾಂಕ್ ನೀಡುತ್ತಿದೆ ಇನ್ನೊಂದು ಆಪ್ಷನ್
ಇನ್ನು ನಿಮ್ಮ ಖಾತೆಯಿಂದ ಆಟೋಮೆಟಿಕ್ ಆಗಿ ಪ್ರತಿ ವರ್ಷದ ಮೇ 31 ಅಥವಾ ಅದಕ್ಕಿಂತ ಮುಂಚೆ ಹಣ ಕಟ್ಟಾಗುವುದನ್ನು ತಪ್ಪಿಸಬೇಕಿದ್ದರೆ, ನೀವು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯ ಇರುವ ದಾಖಲೆ ನೀಡಿ ಆಟೋ ಡೆಬಿಟ್ ಸ್ಟಾಪ್ ಮಾಡಬಹುದು.
ಆದರೆ ಪ್ರತಿ ವರ್ಷ ನಿರ್ದಿಷ್ಟ ಮೊತ್ತವನ್ನು ನೀವು ಪಾವತಿ ಮಾಡದಿದ್ದರೆ ಈ ವಿಮಾ ಯೋಜನೆಯಿಂದ ಹೊರಗೆ ಉಳಿಯುತ್ತೀರಿ
Do this before 436 is deducted from your bank account