ಸಾಲ ಮಾಡಿ ತೀರಿಸೋಕೆ ಆಗದೆ ಇರೋರಿಗೆ ಬ್ಯಾಂಕ್ ನೀಡುತ್ತಿದೆ ಇನ್ನೊಂದು ಆಪ್ಷನ್
ನಿಜವಾಗಿ ಸಾಲ ತೀರಿಸಲು ಸಾಧ್ಯವಾಗದೇ ಇದ್ದಾಗ ಒಂದೇ ಬಾರಿಗೆ, ಪಾವತಿ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆ ಮೊತ್ತದ ಹಣವನ್ನು OTS ಮೂಲಕ ಪಾವತಿ ಮಾಡಬಹುದು.
Bank Loan : ಬ್ಯಾಂಕಿನಲ್ಲಿ ಸಾಲ ಮಾಡಿದ ಮೇಲೆ ಪ್ರತಿ ತಿಂಗಳು ಇಎಂಐ ಮೂಲಕ ಸಾಲವನ್ನು ಮರುಪಾವತಿ ಮಾಡಬೇಕು. ಒಂದು ವೇಳೆ ಪ್ರತಿ ತಿಂಗಳು ಹಣ ಹಿಂತಿರುಗಿಸಲು ಸಾಧ್ಯವಾಗದೆ ಇದ್ದಲ್ಲಿ ಬ್ಯಾಂಕ್ ನಿಮ್ಮನ್ನು ಪ್ರಶ್ನೆ ಮಾಡಬಹುದು.
ಆದಾಗ್ಯೂ ಸಾಲದ ಮೊತ್ತವನ್ನು ಪಾವತಿ ಮಾಡಲು ನಿಮಗೆ ಸಾಧ್ಯವಾಗದೇ ಇದ್ದರೆ ಬ್ಯಾಂಕ್ ಸಾಲ ತೀರಿಸಲು ಇನ್ನೊಂದು ಆಯ್ಕೆಯನ್ನು ನೀಡುತ್ತದೆ.
ಸಾಕಷ್ಟು ಅನಿವಾರ್ಯತೆಗಳ ಆಧಾರದ ಮೇಲೆ ಬ್ಯಾಂಕ್ ನಲ್ಲಿ ಬೇರೆ ಬೇರೆ ರೀತಿಯ ಸಾಲವನ್ನು ತೆಗೆದುಕೊಳ್ಳಬಹುದು. ನೀವು ಎಷ್ಟು ಮೊತ್ತದ ಸಾಲವನ್ನು ಪಡೆದುಕೊಳ್ಳುತ್ತಿರೋ ಅದರ ಆಧಾರದ ಮೇಲೆ ಪ್ರತಿ ತಿಂಗಳು ಪಾವತಿಸಬೇಕಾದ EMI ಲೆಕ್ಕಾಚಾರ ಮಾಡಲಾಗುತ್ತದೆ.
ಎಷ್ಟೋ ಬಾರಿ ಪ್ರತಿ ತಿಂಗಳು ಹಣವನ್ನು ಹಿಂತಿರುಗಿಸಲು ಸಾಧ್ಯವಾಗುವುದಿಲ್ಲ. ಆಗ ಬ್ಯಾಂಕು ಸಂಪೂರ್ಣ ಹಣವನ್ನು ಒಂದೇ ಬಾರಿಗೆ ಪಾವತಿ ಮಾಡುವಂತಹ ಒಂದು ಆಯ್ಕೆಯನ್ನು ನೀಡುತ್ತದೆ. ಅದುವೇ ಒನ್ ಟೈಮ್ ಸೆಟಲ್ಮೆಂಟ್ (OTS)
ಬ್ಯಾಂಕ್ ಸಾಲ ಮಾಡಿದ ವ್ಯಕ್ತಿ ಸತ್ತರೆ, ಮನೆಯವರು ಸಾಲ ತೀರಿಸಬೇಕಾ?
ಏನಿದು OTS
ಸಾಲದಾರರಿಗಾಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ನೀಡುವ ವಿಶೇಷ ಸೌಲಭ್ಯ ಇದಾಗಿದೆ. ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೆ ಇದ್ದಾಗ ಸಾಲಗಾರರು ಬ್ಯಾಂಕ್ನಿಂದ OTS ಆಯ್ಕೆಯನ್ನು ಪಡೆದುಕೊಳ್ಳಬಹುದು.
ಅಂದರೆ ಸಾಲ ಪಾವತಿ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆ ಮೊತ್ತವನ್ನು ಬ್ಯಾಂಕಿಗೆ ಒಂದೇ ಬಾರಿಗೆ ಪಾವತಿ ಮಾಡುವುದು. ನೀವು ಎಷ್ಟು ಹಣವನ್ನು ಪಾವತಿ ಮಾಡಬೇಕು ಎನ್ನುವುದನ್ನು ಬ್ಯಾಂಕು ನಿರ್ಧರಿಸುತ್ತದೆ. ಸಾಲಗಾರರು ಪ್ರತಿ ತಿಂಗಳು ಹಣ ಪಾವತಿ ಮಾಡಲು ಸಾಧ್ಯವಾಗದೆ ಡೀಫಾಲ್ಟರ್ ಆದ ಸಂದರ್ಭದಲ್ಲಿ ಬ್ಯಾಂಕ್ ಈ ಆಯ್ಕೆಯನ್ನು ನೀಡುತ್ತದೆ.
OTS ಎಷ್ಟು ಪ್ರಯೋಜನಕಾರಿ?
ನಿಜವಾಗಿ ಸಾಲ ತೀರಿಸಲು ಸಾಧ್ಯವಾಗದೇ ಇದ್ದಾಗ ಒಂದೇ ಬಾರಿಗೆ, ಪಾವತಿ ಮಾಡಬೇಕಾದ ಮೊತ್ತಕ್ಕಿಂತ ಕಡಿಮೆ ಮೊತ್ತದ ಹಣವನ್ನು OTS ಮೂಲಕ ಪಾವತಿ ಮಾಡಬಹುದು. EMI ಪಾವತಿ ಮಾಡುವುದಕ್ಕಿಂತ ಇದು ಸೂಕ್ತ ಎನಿಸುತ್ತದೆ. ಆದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಮೇಲೆ ಪರಿಣಾಮ ಬೀರುತ್ತದೆ.
ಸ್ಟೇಟ್ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮಾಡಿದ್ರೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕಾಗುತ್ತೆ?
ಅದರ ಜೊತೆಗೆ OTS ಆಯ್ಕೆಯನ್ನು ಮಾಡಿಕೊಂಡರೆ ಬ್ಯಾಂಕ್ ನಿಮ್ಮನ್ನ ಬ್ಲಾಕ್ ಲಿಸ್ಟ್ ಗೆ ಸೇರಿಸಬಹುದು ಅಂದರೆ ಮುಂದಿನ ದಿನಗಳಲ್ಲಿ ಸಾಲ ಸೌಲಭ್ಯ ಬೇಕಿದ್ದರೆ ಬ್ಯಾಂಕ್ನಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಣಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ಆಧರಿಸಿ OTS ನಿರ್ಧರಿಸಲಾಗುತ್ತಿದೆ.
ಆದರೆ ಭವಿಷ್ಯದಲ್ಲಿ ನಿಮಗೆ ಬ್ಯಾಂಕ್ ನಲ್ಲಿ ಸಾಲ (Bank Loan) ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಬರಬಹುದು ಹಾಗಾಗಿ ಇದನ್ನು ಗಮನದಲ್ಲಿ ಇಟ್ಟುಕೊಂಡು OTS ಗಿಂತಲೂ EMI ಸರಿಯಾಗಿ ಪಾವತಿ ಮಾಡಿಕೊಂಡು ಹೋಗುವುದು ಒಳ್ಳೆಯದು.
Banks Offer an Alternative to Those Struggling to Repay Loans