ಸ್ಟೇಟ್ ಬ್ಯಾಂಕಿನಲ್ಲಿ 2 ಲಕ್ಷ ಸಾಲ ಮಾಡಿದ್ರೆ ಪ್ರತಿ ತಿಂಗಳು EMI ಎಷ್ಟು ಕಟ್ಟಬೇಕಾಗುತ್ತೆ?
ಎಸ್ ಬಿ ಐ ಬ್ಯಾಂಕ್ ನಲ್ಲಿ 11.35% ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ (Personal Loan) ಸಿಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಲೋನ್ ಪಡೆದುಕೊಳ್ಳಬಹುದು.
- ಸ್ಟೇಟ್ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲಕ್ಕೆ 11.35% ಬಡ್ಡಿ
- ಎರಡು ವರ್ಷಗಳ ಅವಧಿಗೆ 2 ಲಕ್ಷಕ್ಕೆ ಪಾವತಿಸಬೇಕಾದ EMI ಎಷ್ಟು
- ಕೇವಲ ಇಷ್ಟು ದಾಖಲೆ ಇದ್ರೆ ಸಿಗುತ್ತೆ ವೈಯಕ್ತಿಕ ಸಾಲ
Personal Loan : ಇತ್ತೀಚಿಗೆ ಯಾರತ್ರನಾದ್ರೂ ಸಾಲ ಕೇಳಿದ್ರೆ ನೇರವಾಗಿ ಬ್ಯಾಂಕ್ ನ ದಾರಿ ತೋರಿಸುತ್ತಾರೆ. ಯಾಕೆಂದ್ರೆ ಈಗ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳುವುದು ಸುಲಭ. ಸ್ವಲ್ಪ ಬಡ್ಡಿ ಹೆಚ್ಚಾಗಿದೆ ಅನ್ನಿಸಿದರೂ ಬಹಳ ಬೇಗ ಸಾಲ ಮಂಜೂರಾಗುತ್ತೆ.
ಅದರಲ್ಲೂ ನೀವು ಉದ್ಯೋಗಿಗಳಾಗಿದ್ದರೆ ಹೆಚ್ಚಿನ ದಾಖಲೆಗಳನ್ನು ಕೇಳದೆ ಬ್ಯಾಂಕ್ನವರು ಸಾಲ ಕೊಡುತ್ತಾರೆ. ಎಮರ್ಜೆನ್ಸಿಯ ಸಮಯದಲ್ಲಿ ಕೆಲವರು ಉಳಿತಾಯ ಹಣವನ್ನೇ ಬಳಕೆ ಮಾಡಿದರೆ ಇನ್ನು ಕೆಲವರು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳುತ್ತಾರೆ.
ಇತ್ತೀಚಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ವೈಯಕ್ತಿಕ ಸಾಲ ಪಡೆದುಕೊಳ್ಳುವ ಗ್ರಾಹಕರಿಗೆ ಸಾಲ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ.
ಯುಪಿಐ ಪೇಮೆಂಟ್ ಮಾಡುವವರಿಗೆ ಫೆಬ್ರವರಿ 1ರಿಂದ ಹೊಸ ನಿಯಮ ಜಾರಿ
ಎಸ್ ಬಿ ಐ ಬ್ಯಾಂಕ್ ನಲ್ಲಿ ಪಡೆಯಬಹುದು ವೈಯಕ್ತಿಕ ಸಾಲ!
ಎಸ್ ಬಿ ಐ ಬ್ಯಾಂಕ್ ನಲ್ಲಿ 11.35% ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ (Personal Loan) ಸಿಗುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಲೋನ್ ಪಡೆದುಕೊಳ್ಳಬಹುದು. ಒಂದು ವೇಳೆ ಕ್ರೆಡಿಟ್ ಸ್ಕೋರ್ 750ಕ್ಕಿಂತ ಕಡಿಮೆ ಇದ್ದರೆ ನಿಮ್ಮ ಲೋನ್ ಅಪ್ಲಿಕೇಶನ್ ರಿಜೆಕ್ಟ್ ಆಗಬಹುದು.
ಹೀಗಾಗಿ ಬ್ಯಾಂಕ್ ನಲ್ಲಿ ಹಣಕಾಸಿನ ವ್ಯವಹಾರ ಮಾಡುವಾಗ ಕ್ರೆಡಿಟ್ ಸ್ಕೋರ್ (Credit Score) ಬಗ್ಗೆ ಯಾವಾಗಲೂ ಗಮನ ವಹಿಸಬೇಕು. ನಿಮಗೆ ಕ್ರೆಡಿಟ್ ಸ್ಕೋರ್ ಎಷ್ಟು ಉತ್ತಮವಾಗಿರುತ್ತದೆಯೋ ಅಷ್ಟೇ ಸುಲಭವಾಗಿ ನೀವು ಸಾಲವನ್ನ ಪಡೆದುಕೊಳ್ಳಬಹುದು.
ತಕ್ಷಣ ಪರ್ಸನಲ್ ಲೋನ್ ಬೇಕು ಅನ್ನೋರಿಗೆ ಈ ಟಾಪ್ ಬ್ಯಾಂಕ್ ಗಳೇ ಬೆಸ್ಟ್ ಆಯ್ಕೆ
ಎರಡು ಲಕ್ಷ ಸಾಲಕ್ಕೆ ಬಡ್ಡಿ ಎಷ್ಟು?
ಇನ್ನು ಎಸ್‌ಬಿಐ ಬ್ಯಾಂಕ್ ನಲ್ಲಿ (SBI Bank) ಎರಡು ವರ್ಷಗಳ ಅವಧಿಗೆ 2 ಲಕ್ಷ ರೂಪಾಯಿಗಳನ್ನು ನೀವು ವೈಯಕ್ತಿಕ ಸಾಲವಾಗಿ ಪಡೆದುಕೊಂಡರೆ, ರೂಪಾಯಿ 24,521 ಗಳನ್ನು ಬಡ್ಡಿಯಾಗಿ ಪಾವತಿಸಬೇಕು. ಅಸಲು ಮತ್ತು ಬಡ್ಡಿ ಸೇರಿ ಎರಡು ವರ್ಷದ ಅವಧಿಗೆ ರೂಪಾಯಿ 2,24,521 ಗಳನ್ನು ಪಾವತಿ ಮಾಡಬೇಕಾಗುತ್ತದೆ. ಇನ್ನು ಎರಡು ವರ್ಷಕ್ಕೆ ನೀವು ಪ್ರತಿ ತಿಂಗಳು ಪಾವತಿಸಬೇಕಾದ ಈ ಎಂಐ ಮೊತ್ತ ರೂಪಾಯಿ 9,355 ಮಾತ್ರ.
ಬ್ಯಾಂಕ್ ನಲ್ಲಿ ಆರರಿಂದ 72 ತಿಂಗಳ ವರೆಗೆ ಸಾಲ ಮರುಪಾವತಿಗಾಗಿ ಟೈಮ್ ಇರುತ್ತದೆ. ಉದ್ಯೋಗಿಗಳಾಗಿದ್ದರೆ ನಿಮ್ಮ ಸ್ಯಾಲರಿ ಸ್ಲಿಪ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಆಧಾರ್ ಕಾರ್ಡ್, ಫೋಟೋ ಈ ಮೊದಲಾದ ದಾಖಲೆಗಳನ್ನು ನೀಡಿ ಸಾಲ ಪಡೆದುಕೊಳ್ಳಬಹುದು.
ಒಟ್ಟಿನಲ್ಲಿ ಯಾರತ್ರನಾದ್ರೂ ದುಡ್ಡು ಕೇಳಿ ಇಲ್ಲ ಎಂದು ಹೇಳಿಸಿಕೊಳ್ಳುವುದಕ್ಕಿಂತ ಬ್ಯಾಂಕ್ ನಲ್ಲಿ, ಸಾಲ ಪಡೆದುಕೊಳ್ಳುವುದು ಒಳ್ಳೆಯದು, ಆದರೆ ವೈಯಕ್ತಿಕ ಸಾಲದ ಬಡ್ಡಿದರ ಹೆಚ್ಚಾಗಿರುವುದರಿಂದ ಬಹಳ ಅಗತ್ಯವಿದ್ದಾಗ ಮಾತ್ರ ನಿಮ್ಮ ಕೈಯಲ್ಲಿ ಪಾವತಿ ಮಾಡಲು ಸಾಧ್ಯವಾಗುವಷ್ಟು ಮೊತ್ತದ ಸಾಲವನ್ನು ಮಾತ್ರ ತೆಗೆದುಕೊಳ್ಳಿ.
EMI for 2 lakh loan in State Bank of India