Business News

ತಕ್ಷಣ ಪರ್ಸನಲ್ ಲೋನ್ ಬೇಕು ಅನ್ನೋರಿಗೆ ಈ ಟಾಪ್ ಬ್ಯಾಂಕ್ ಗಳೇ ಬೆಸ್ಟ್ ಆಯ್ಕೆ

Personal Loan : ನೀವು ಉದ್ಯೋಗಿಗಳಾಗಿದ್ದು ತಿಂಗಳು ಉತ್ತಮ ಸಂಬಳ ಪಡೆಯುವವರಾಗಿದ್ದರೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಇನ್ನೂ ಸುಲಭ.

  • ಎಸ್ ಬಿ ಐ ನೀಡುತ್ತೆ ಕಡಿಮೆ ಬಡ್ಡಿದರದಲ್ಲಿ ಪರ್ಸನಲ್ ಲೋನ್
  • ವೈಯಕ್ತಿಕ ಸಾಲಕ್ಕೆ ಗರಿಷ್ಠ 21% ವರೆಗೂ ಬಡ್ಡಿ ಇರುತ್ತದೆ
  • ವೈಯಕ್ತಿಕ ಸಾಲಕ್ಕೆ ಆನ್ಲೈನ್ ನಲ್ಲೂ ಅಪ್ಲೈ ಮಾಡಬಹುದು

Personal Loan : ತುರ್ತಾಗಿ ಹಣ ಬೇಕಿದ್ದರೆ ಕಷ್ಟದ ಸಮಯದಲ್ಲಿ ಹಣಕಾಸಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೆ ಯಾವುದೇ ಬ್ಯಾಂಕ್ ನಲ್ಲಿ ಸುಲಭವಾಗಿ ವೈಯಕ್ತಿಕ ಸಾಲವನ್ನು ಪಡೆಯಬಹುದು.

ನೀವು ಉದ್ಯೋಗಿಗಳಾಗಿದ್ದು ತಿಂಗಳು ಉತ್ತಮ ಸಂಬಳ ಪಡೆಯುವವರಾಗಿದ್ದರೆ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುವುದು ಇನ್ನೂ ಸುಲಭ. ಹೀಗೆ ನೀವು ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ ದೇಶದ ಯಾವ ಪ್ರಮುಖ ಬ್ಯಾಂಕುಗಳಲ್ಲಿ ಬಡ್ಡಿದರ ಎಷ್ಟಿದೆ ಎಂಬುದನ್ನು ನೋಡೋಣ.

ತಕ್ಷಣ ಪರ್ಸನಲ್ ಲೋನ್ ಬೇಕು ಅನ್ನೋರಿಗೆ ಈ ಟಾಪ್ ಬ್ಯಾಂಕ್ ಗಳೇ ಬೆಸ್ಟ್ ಆಯ್ಕೆ

ಕ್ರೆಡಿಟ್ ಕಾರ್ಡ್ ಅನ್ನು ಹೀಗೆ ಬಳಸಿದರೆ ವಾರ್ಷಿಕ ಶುಲ್ಕ ಕಟ್ಟುವ ಅಗತ್ಯವೇ ಇಲ್ಲ ಗೊತ್ತಾ?

HDFC Bank: ಈ ಬ್ಯಾಂಕ್ ನಲ್ಲಿ ಸಿಗುವ ಗರಿಷ್ಠ ಸಾಲ 40 ಲಕ್ಷ ರೂಪಾಯಿಗಳು ಮಾತ್ರ. 10.85% ರಿಂದ ಬಡ್ಡಿದರ ಆರಂಭ. ಇನ್ನು ತೆಗೆದುಕೊಂಡ ಸಾಲದ ಮೊತ್ತದ ಮೇಲೆ ಸಂಸ್ಕರಣಾ ಶುಲ್ಕ 6,500 ರೂಗಳು. 6 ವರ್ಷಗಳ ಅವಧಿಗೆ ಸಾಲ ತೆಗೆದುಕೊಳ್ಳಬಹುದು.

ICICI Bank: ಈ ಬ್ಯಾಂಕ್ ನಲ್ಲಿ ಗರಿಷ್ಠ 50 ಲಕ್ಷ ರೂ. ಗಳ ವರೆಗೆ ಸಾಲ ಪಡೆಯಬಹುದು. ಸಾಲದ ಮೊತ್ತದ 2% ವರೆಗೆ ಪ್ರೊಸೆಸ್ಸಿಂಗ್ ಫೀ ವಿಧಿಸಲಾಗುತ್ತದೆ. ಸಾಲದ ಅವಧಿ 6 ವರ್ಷಗಳಾಗಿದ್ದು, ಈ ಬ್ಯಾಂಕ್ ನಲ್ಲಿಯೂ ಬಡ್ಡಿ, 10.85% ರಿಂದ ಶುರುವಾಗುತ್ತದೆ. ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಬಡ್ದಿದರ ನಿಗದಿಪಡಿಸಲಾಗುತ್ತದೆ.

SBI Bank: ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ 35 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು. ಇನ್ನು ಸಾಲದ ಮೇಲೆ 11.45% – 14.85%. ಬಡ್ಡಿದರ ವಿಧಿಸಲಾಗುತ್ತದೆ. ಮತ್ತು ಸಾಲ ಮರುಪಾವತಿ ಮಾಡಲು 7 ವರ್ಷಗಳ ಕಾಲಾವಧಿ ಇರುತ್ತದೆ.

ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಒಂದು ಕೋಟಿ ರೂಪಾಯಿ ಉಚಿತ ವಿಮೆ!

Indian Bank: ಇಲ್ಲಿ 20 ಲಕ್ಷದ ವರೆಗೆ ಸಾಲ ಪಡೆಯಬಹುದಾಗಿದ್ದು, ಪ್ರೊಸೆಸಿಂಗ್ ಶುಲ್ಕ ಸಾಲದ ಮೊತ್ತದ 1%ನಷ್ಟು. 7 ವರ್ಷಗಳವರೆಗೆ ಸಾಲ ಮರುಪಾವತಿಗೆ ಅವಕಾಶವಿರುತ್ತದೆ. ಸಾಲಕ್ಕೆ ಬಡ್ಡಿ ದರ: 10.85% – 16.10%ನಷ್ಟು.

Axis Bank: ಕೇವಲ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದು. ಸಾಲದ ಮೊತ್ತದ 2% ವರೆಗೆ ಪ್ರೊಸೆಸ್ಸಿಂಗ್ ಫೀ ಇರುತ್ತದೆ. ಸಾಲದ ಅವಧಿಯು 5 ವರ್ಷಗಳಾಗಿದ್ದು, ಬಡ್ಡಿ ದರ: 11.25%.

Yes Bank: ರೂ. 40 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಲು ಅವಕಾಶ. ಸಾಲದ ಮೊತ್ತದ 2.5% ವರೆಗೆ ಪ್ರೊಸೆಸ್ಸಿಂಗ್ ಫೀ ಇರುತ್ತದೆ. 5 ವರ್ಷಗಳಲ್ಲಿ ಸಾಲ ಮರುಪಾವತಿ ಮಾಡಬೇಕು. ಸಾಲಕ್ಕೆ ವಿಧಿಸಲಾಗುವ ಬಡ್ಡಿ 11.25% – 21.00%.

ಅಂಚೆ ಕಚೇರಿಯಲ್ಲಿ ಜಸ್ಟ್ ಸಾವಿರ ರೂಪಾಯಿ ಉಳಿಸಿದರೆ ಸಿಗುತ್ತೆ 8 ಲಕ್ಷ ರಿಟರ್ನ್

Bank Of Baroda: ಈ ಬ್ಯಾಂಕ್ನಲ್ಲಿ ನಿಮಗೆ 20 ಲಕ್ಷ ರೂಪಾಯಿಗಳವರೆಗೆ ಸಾಲ ತೆಗೆದುಕೊಳ್ಳಲು ಅವಕಾಶವಿದ್ದು, ಪ್ರೊಸೆಸಿಂಗ್ ಫೀ 2% ವರೆಗೆ ಇರುತ್ತದೆ. 7 ವರ್ಷಗಳಲ್ಲಿ ಸಾಲದ ಮೊತ್ತವನ್ನು ತೀರಿಸಬೇಕು. ಹಾಗೂ ಸಾಲಕ್ಕೆ ವಿಧಿಸಲಾಗುವ ಬಡ್ಡಿ 11.05% – 18.75%ನಷ್ಟು.

ಇವಿಷ್ಟು ಪ್ರಮುಖ ಬ್ಯಾಂಕ್ ಗಳಲ್ಲಿ ಇರುವ ಬಡ್ಡಿದರ ಮತ್ತು ಶುಲ್ಕಗಳು. ಆನ್ಲೈನ್ ನಲ್ಲಿಯೂ ವೈಯಕ್ತಿಕ ಸಾಲವನ್ನು (Personal Loan) ತೆಗೆದುಕೊಳ್ಳಬಹುದಾಗಿದ್ದು, ಆಯಾ ಬ್ಯಾಂಕ್ ಗಳ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಿ.

These top banks are best choice for personal loan

English Summary

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories