Business News

ಕ್ರೆಡಿಟ್ ಕಾರ್ಡ್ ಅನ್ನು ಹೀಗೆ ಬಳಸಿದರೆ ವಾರ್ಷಿಕ ಶುಲ್ಕ ಕಟ್ಟುವ ಅಗತ್ಯವೇ ಇಲ್ಲ ಗೊತ್ತಾ?

ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು 45 ದಿನಗಳವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲದ ರೂಪದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಳ್ಳಬಹುದು.

  • ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಈ ವಿಷಯಗಳು ತಿಳಿದಿರಲಿ
  • ವಾರ್ಷಿಕ ಶುಲ್ಕ ವಿನಾಯಿತಿ ಇರುವ ಕ್ರೆಡಿಟ್ ಕಾರ್ಡ್ ಪಡೆಯಿರಿ
  • ಹೆಚ್ಚಿನ ರಿವಾರ್ಡ್ ಪಾಯಿಂಟ್ ಕೊಡುಗೆಗಳನ್ನು ಹೊಂದಿರುವ ಕ್ರೆಡಿಟ್ ಕಾರ್ಡ್ ಬಳಸಿ

Credit Card : ಕ್ರೆಡಿಟ್ ಕಾರ್ಡ್ ಯೂಸ್ ಮಾಡುವವರಿಗೆ ಒಂದು ಗುಡ್ ನ್ಯೂಸ್ ಇದೆ. ನಿಮ್ಮ ವಾರ್ಷಿಕ ಶುಲ್ಕವನ್ನು ಕಡಿಮೆ ಮಾಡ್ಕೋಬೇಕು ಅಥವಾ ವಾರ್ಷಿಕ ಶುಲ್ಕ ಕಟ್ಟದೆ ಹಣವನ್ನು ಉಳಿಸಿಕೊಳ್ಳಬೇಕು ಅಂತಾದರೆ ಈ ಕೆಲಸ ಮಾಡಿ. ಈ ರೀತಿ ಮಾಡಿದರೆ ಸ್ವತಃ ಬ್ಯಾಂಕ್ ನಿಮಗೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡುತ್ತೆ.

ಕ್ರೆಡಿಟ್ ಕಾರ್ಡ್ ಬಳಸುವಾಗ ಈ ತಪ್ಪನ್ನು ಮಾಡಬೇಡಿ!

ಇತ್ತೀಚಿಗೆ ಕ್ರೆಡಿಟ್ ಕಾರ್ಡ್ ಗಳನ್ನು (Credit Cards) ಜನರು ಹೆಚ್ಚಾಗಿ ಬಳಸುತ್ತಾರೆ. ಯಾವುದೇ ರೀತಿಯ ಪೇಮೆಂಟ್ ಮಾಡುವುದಿದ್ದರೆ ಕೈಯಲ್ಲಿ ಹಣ ಇಲ್ಲದಿದ್ದರೂ ಕ್ರೆಡಿಟ್ ಕಾರ್ಡ್ ಇದ್ರೆ ಪೇಮೆಂಟ್ ಮಾಡಬಹುದು. ಮುಂದಿನ ತಿಂಗಳವರೆಗೂ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವುದರ ಮೂಲಕ ಬೇಕಾಗಿರುವ ಎಲ್ಲಾ ವಸ್ತುಗಳನ್ನು ಖರೀದಿ ಮಾಡಬಹುದು.

ಕ್ರೆಡಿಟ್ ಕಾರ್ಡ್ ಅನ್ನು ಹೀಗೆ ಬಳಸಿದರೆ ವಾರ್ಷಿಕ ಶುಲ್ಕ ಕಟ್ಟುವ ಅಗತ್ಯವೇ ಇಲ್ಲ ಗೊತ್ತಾ?

ಕ್ರೆಡಿಟ್ ಕಾರ್ಡ್ ಬಳಕೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು 45 ದಿನಗಳವರೆಗೆ ಯಾವುದೇ ಬಡ್ಡಿ ಇಲ್ಲದೆ ಸಾಲದ ರೂಪದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿಕೊಳ್ಳಬಹುದು. ಯಾವಾಗ ಅವಧಿ ಮೀರಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವುದಿಲ್ಲವೋ ಆಗ ಬ್ಯಾಂಕ್ ಬಡ್ಡಿ ಹಾಗೂ ಇತರ ಶುಲ್ಕಗಳನ್ನು ವಿಧಿಸುತ್ತದೆ.

ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಒಂದು ಕೋಟಿ ರೂಪಾಯಿ ಉಚಿತ ವಿಮೆ!

ಕ್ರೆಡಿಟ್ ಕಾರ್ಡ್ ನಲ್ಲಿ ಸಾಕಷ್ಟು ಬೇರೆಬೇರೆ ಕೊಡುಗೆಗಳು ವಿನಾಯತಿಗಳು ಇರುತ್ತವೆ. ಪೆಟ್ರೋಲ್ ಬಂಕ್ಗಳಲ್ಲಿ, ಶಾಪಿಂಗ್ ಮಾಲ್ ಗಳಲ್ಲಿ, ಮೂವಿ ಟಿಕೆಟ್ ಖರೀದಿಸಲು ಹೀಗೆ ಕ್ರೆಡಿಟ್ ಕಾರ್ಡ್ ಬಳಕೆ ಸಾಕಷ್ಟು ಹಣ ಉಳಿತಾಯ ಮಾಡಿಕೊಡಲು ಕೂಡ ಸಹಾಯಕವಾಗಿದೆ.

ಕ್ರೆಡಿಟ್ ಕಾರ್ಡ್ ನಲ್ಲಿ ವಾರ್ಷಿಕ ಶುಲ್ಕ ವಿನಾಯಿತಿ ಪಡೆಯುವುದು ಹೇಗೆ

ಯಾವುದೇ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನೀಡಿದ ಮೇಲೆ ಆ ಕ್ರೆಡಿಟ್ ಕಾರ್ಡ್ ನ ಮೌಲ್ಯಕ್ಕೆ ತಕ್ಕಂತೆ ವಾರ್ಷಿಕ ಶುಲ್ಕವನ್ನು (Credit Card Annual Fee) ವಿಧಿಸುತ್ತವೆ. ಆದರೂ ಕೆಲವು ಬ್ಯಾಂಕುಗಳು ವಾರ್ಷಿಕ ಶುಲ್ಕ ರಹಿತ ಕ್ರೆಡಿಟ್ ಕಾರ್ಡನ್ನು ಕೂಡ ವಿತರಣೆ ಮಾಡುತ್ತವೆ.

ಕ್ರೆಡಿಟ್ ಕಾರ್ಡ್ ನ ಮಿತಿಯಷ್ಟು ಮಾತ್ರ ಹಣವನ್ನು ನೀವು ಬಳಸಿಕೊಂಡರೆ ಯಾವುದೇ ವಾರ್ಷಿಕ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ಹಾಗಾಗಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವುದಕ್ಕೂ ಮೊದಲು ಶುಲ್ಕ ರಹಿತ ಕ್ರೆಡಿಟ್ ಕಾರ್ಡ್ ಗೆ ಅಪ್ಲೈ ಮಾಡುವುದು ಒಳ್ಳೆಯದು.

ಅಂಚೆ ಕಚೇರಿಯಲ್ಲಿ ಜಸ್ಟ್ ಸಾವಿರ ರೂಪಾಯಿ ಉಳಿಸಿದರೆ ಸಿಗುತ್ತೆ 8 ಲಕ್ಷ ರಿಟರ್ನ್

ಹೌದು, ಗ್ರಾಹಕರು ನಿರ್ದಿಷ್ಟ ಮೊತ್ತವನ್ನು ಮಾತ್ರ ಕ್ರೆಡಿಟ್ ಕಾರ್ಡ್ ನಲ್ಲಿ ಖರ್ಚು ಮಾಡಿದರೆ ವಾರ್ಷಿಕ ಶುಲ್ಕ ವಿನಾಯಿತಿಯನ್ನು ಪಡೆದುಕೊಳ್ಳಬಹುದು. ಹಾಗಾಗಿ ಕಾರ್ಡ್ ಖರೀದಿ ಮಾಡುವಾಗ ಬ್ಯಾಂಕ್ನ (Bank) ಜೊತೆಗೆ ಈ ಬಗ್ಗೆ ಮಾತುಕತೆ ನಡೆಸುವುದು ಒಳ್ಳೆಯದು.

ಇದರ ಜೊತೆಗೆ ಹೆಚ್ಚಿನ ರಿವಾರ್ಡ್ ಪಾಯಿಂಟ್ ಗಳನ್ನು (Reward Points) ರಿಯಾಯಿತಿಗಳನ್ನು ಹೊಂದಿರುವ ಕ್ರೆಡಿಟ್ ಕಾರ್ಡ್ ಅನ್ನು ಪಡೆದುಕೊಳ್ಳುವುದು ಉತ್ತಮ.

Avoid credit card annual fees with this smart trick

English Summary

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories