ಈ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರಿಗೆ ಒಂದು ಕೋಟಿ ರೂಪಾಯಿ ಉಚಿತ ವಿಮೆ!
ವಿಮೆ ಮಾತ್ರವಲ್ಲದೆ ಪರ್ಸನಲ್ ಲೋನ್ (Personal Loan), ಮದುವೆ ಸಾಲ ಶಿಕ್ಷಣ ಸಾಲ (Education Loan), ಗೃಹ ಸಾಲ (Home Loan) ಹೀಗೆ ಪ್ರತಿಯೊಂದು ಅಗತ್ಯ ಇರುವ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
- ಎಸ್ ಬಿ ಐ ನಲ್ಲಿ ವೇತನ ಖಾತೆ ಹೊಂದಿರುವವರಿಗೆ ಬೆನಿಫಿಟ್ಸ್
- ಒಂದು ಕೋಟಿ ರೂಪಾಯಿಯ ಉಚಿತ ವಿಮೆ ಸೌಲಭ್ಯ
- ಆನ್ಲೈನ್ ನಲ್ಲಿ ಹಣಕಾಸು ವ್ಯವಹಾರ ಮಾಡುವುದು ಸುಲಭ
ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (Savings Account) ಅಥವಾ ಚಾಲ್ತಿ ಖಾತೆಯನ್ನು (Current Account) ಹೊಂದಿರುವವರು ಬೇರೆ ಬೇರೆ ರೀತಿಯ ಬೆನಿಫಿಟ್ ಗಳನ್ನು ಪಡೆದುಕೊಳ್ಳುತ್ತಾರೆ. ಅದೇ ರೀತಿ ಉದ್ಯೋಗದಲ್ಲಿರುವವರು ಸಂಬಳ ಖಾತೆಯನ್ನು (Salary Account) ಹೊಂದಿದ್ದರೆ, ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.
ನೀವು ಯಾವುದೇ ಕಂಪನಿಯಲ್ಲಿ ಕೆಲಸ ಮಾಡಿದರು ಯಾವುದಾದರೂ ಒಂದು ಬ್ಯಾಂಕಿನಲ್ಲಿ (Banks) ಸಂಬಳ ಖಾತೆಯನ್ನು ಹೊಂದಿದ್ದು, ಪ್ರತಿ ತಿಂಗಳು ಆ ಖಾತೆಗೆ ಸಂಬಳ ಜಮಾ ಆಗುತ್ತದೆ. ಹೀಗೆ ಸಂಬಳ ಖಾತೆ ಹೊಂದಿರುವ ಗ್ರಾಹಕರಿಗೆ ಬ್ಯಾಂಕುಗಳು ಸಾಕಷ್ಟು ಉತ್ತಮ ಪ್ರಯೋಜನಗಳನ್ನು ನೀಡುತ್ತವೆ.
ಅಂಚೆ ಕಚೇರಿಯಲ್ಲಿ ಜಸ್ಟ್ ಸಾವಿರ ರೂಪಾಯಿ ಉಳಿಸಿದರೆ ಸಿಗುತ್ತೆ 8 ಲಕ್ಷ ರಿಟರ್ನ್
ಎಸ್ ಬಿ ಐ ಬ್ಯಾಂಕ್ ನಲ್ಲಿ (SBI Bank) ಸಂಬಳ ಖಾತೆ ಹೊಂದಿರುವವರಿಗೆ ಒಂದು ಕೋಟಿ ವಿಮೆ!
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನಲ್ಲಿ ಸಂಬಳ ಖಾತೆಯನ್ನು ಹೊಂದಿದ್ರೆ ನಿಮಗೆ ಹೆಚ್ಚಿನ ಬೆನಿಫಿಟ್ಸ್ ಸಿಗಲಿದೆ. ಕೇಂದ್ರದ ರಾಜ್ಯ ಸರ್ಕಾರಿ ನೌಕರರಾಗಿದ್ದರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ ಕಾರ್ಪೊರೇಟ್ ಅಥವಾ ಇತರ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ತಿಂಗಳ ಸಂಬಳವನ್ನು ಎಸ್ಬಿಐ ಬ್ಯಾಂಕ್ ನ ಖಾತೆಗೆ ಜಮಾ ಮಾಡಿಕೊಳ್ಳಬಹುದು.
ವೇತನ ಖಾತೆಯನ್ನು ಎಸ್ ಬಿ ಐ ಬ್ಯಾಂಕ್ ನಲ್ಲಿ ತೆರೆದರೆ ಸಾಲ ಸೌಲಭ್ಯವನ್ನು (Loan) ಪಡೆದುಕೊಳ್ಳುವುದರಿಂದ ಹಿಡಿದು ವಿಮಾ ಸೌಲಭ್ಯದವರೆಗೆ ಎಲ್ಲಾ ರೀತಿಯ ಪ್ರಯೋಜನಗಳು ಸಿಗುತ್ತವೆ.
ಎಸ್ ಬಿ ಐ ಬ್ಯಾಂಕ್ ನಲ್ಲಿ ವೇತನ ಖಾತೆಯನ್ನು ಹೊಂದಿರುವವರು ನೆಟ್ ಬ್ಯಾಂಕಿಂಗ್ ಮೊಬೈಲ್ ಬ್ಯಾಂಕಿಂಗ್ ಮೊದಲಾದ ಡಿಜಿಟಲ್ ಸೇವೆಗಳನ್ನು ಪಡೆದುಕೊಳ್ಳಬಹುದು ಅಂದರೆ ಬ್ಯಾಂಕಿಗೆ ಹೋಗದೆ ಮನೆಯಲ್ಲಿಯೇ ಕುಳಿತು ಬ್ಯಾಂಕಿನ ಅಧಿಕೃತ ವೆಬ್ಸೈಟ್ ನ ಮೂಲಕ ಎಲ್ಲಾ ಹಣಕಾಸಿನ ವ್ಯವಹಾರವನ್ನು ಮಾಡಬಹುದು.
ಐದು ವರ್ಷಗಳಲ್ಲಿ 42 ಲಕ್ಷ ರೂಪಾಯಿ ಬೇಕು ಅಂದ್ರೆ ಇಲ್ಲಿ ಹೂಡಿಕೆ ಮಾಡಿ ಸಾಕು!
ಇನ್ನು ಎಸ್‌ಬಿಐ ತಿಳಿಸಿರುವಂತೆ ಸಂಬಳ ಖಾತೆಯಲ್ಲಿ ಯಾವುದೇ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ. ಇದು ಸಂಪೂರ್ಣ ಶೂನ್ಯ ಬ್ಯಾಲೆನ್ಸ್ ಖಾತೆಯಾಗಿದೆ. ಇನ್ನು ಎಸ್‌ಬಿಐ ನಲ್ಲಿ ಸಂಬಳದ ಖಾತೆ ಹೊಂದಿರುವ ಗ್ರಾಹಕರು ದೇಶದ ಯಾವುದೇ ಎಟಿಎಂನಿಂದ ಹಣ ಹಿಂಪಡೆಯಬಹುದು ಇದಕ್ಕೆ ಎಸ್ ಬಿ ಐ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ.
ಒಂದು ಕೋಟಿ ರೂಪಾಯಿ ವಿಮೆ
ಇನ್ನು ಎಸ್‌ಬಿಐ ನಲ್ಲಿ ಸಿಗುವ ವಿಮೆ (Insurance) ಬಗ್ಗೆ ಮಾತನಾಡುವುದಾದರೆ, ಸಂಬಳ ಖಾತೆಯನ್ನು ಹೊಂದಿರುವ ಗ್ರಾಹಕರಿಗೆ 40 ಲಕ್ಷ ರೂಪಾಯಿ ಅಪಘಾತ ವಿಮೆ ಪ್ರಯೋಜನ ಸಿಗುತ್ತದೆ
ಅದೇ ರೀತಿ ವಿಮಾನ ಅಪಘಾತವಾದರೆ ಒಂದು ಕೋಟಿ ರೂಪಾಯಿಯವರೆಗೆ ವಿಮೆ ಪಡೆಯಬಹುದು. ಗ್ರಾಹಕ ಮರಣ ಹೊಂದಿದರೆ ವಿಮಾ ಮೊತ್ತ ಆತನ ಪತ್ನಿಗೆ ಸೇರುವುದು. ಇನ್ನು ವಿಮೆ ಮಾತ್ರವಲ್ಲದೆ ಪರ್ಸನಲ್ ಲೋನ್ (Personal Loan), ಮದುವೆ ಸಾಲ ಶಿಕ್ಷಣ ಸಾಲ (Education Loan), ಗೃಹ ಸಾಲ (Home Loan) ಹೀಗೆ ಪ್ರತಿಯೊಂದು ಅಗತ್ಯ ಇರುವ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
ದುಬೈನಲ್ಲಿ 1BHK ಮನೆ ಬಾಡಿಗೆ ಎಷ್ಟು ಗೊತ್ತಾ? ಬೆಂಗಳೂರಲ್ಲಿ ಫ್ಲಾಟ್ ಖರೀದಿ ಮಾಡಬಹುದು!
ಇನ್ನು ಸಂಬಳ ಖಾತೆ ಹೊಂದಿರುವ ಗ್ರಾಹಕರಿಗೆ ಲಾಕರ್ ನ ಬಾಡಿಗೆಯಲ್ಲಿ 50% ನಷ್ಟು ರಿಯಾಯಿತಿ ಕೂಡ ನೀಡಲಾಗುತ್ತದೆ. ಅದೇ ರೀತಿ ಫಿಕ್ಸೆಡ್ ಡೆಪಾಸಿಟ್ ಇಟ್ರೆ ಬಡ್ಡಿ ದರವು ಜಾಸ್ತಿ. YONO ಅಪ್ಲಿಕೇಶನ್ ಮೂಲಕ ಕ್ರೆಡಿಟ್ ಕಾರ್ಡ್ (Credit Card) ಬಳಕೆ ಮಾಡಿ ಬೇರೆ ಬೇರೆ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು.
ಸಂಬಳದ ಖಾತೆ ಉಳಿತಾಯ ಖಾತೆಯಾಗಿ ಮಾರ್ಪಡುತ್ತದೆ!
ಇನ್ನು ನಿಯಮಿತವಾಗಿ ಮೂರು ತಿಂಗಳವರೆಗೆ ಸಂಬಳದ ಖಾತೆಗೆ ಸಂಬಳ ಬಾರದಿದ್ದಲ್ಲಿ ಅದು ಉಳಿತಾಯ ಖಾತೆಯಾಗಿ ಪರಿವರ್ತನೆ ಹೊಂದುತ್ತದೆ. ಮತ್ತು ಸಂಬಳ ಖಾತೆಗೆ ಸಿಗುವ ಯಾವ ಪ್ರಯೋಜನವು ಈ ಖಾತೆದಾರನಿಗೆ ಸಿಗುವುದಿಲ್ಲ.
Account holders in this bank get 1 crore free insurance