ಅಂಚೆ ಕಚೇರಿಯಲ್ಲಿ ಜಸ್ಟ್ ಸಾವಿರ ರೂಪಾಯಿ ಉಳಿಸಿದರೆ ಸಿಗುತ್ತೆ 8 ಲಕ್ಷ ರಿಟರ್ನ್
ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ನೀವು ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನ ಗಳಿಸಬಹುದು. ಇಲ್ಲಿ ಕೇವಲ 500 ರೂಪಾಯಿಗಳಿಂದ ಹೂಡಿಕೆಯನ್ನು ಆರಂಭಿಸಬಹುದು.
- 8 ಲಕ್ಷ ರೂಪಾಯಿ ರಿಟರ್ನ್ ಪಡೆಯಲು ಕೇವಲ ಒಂದು ಸಾವಿರ ಹೂಡಿಕೆ ಸಾಕು
- ಪಿಪಿಎಫ್ ನಲ್ಲಿ ಕನಿಷ್ಠ ಸಾವಿರ ರೂಪಾಯಿಗಳಿಂದ ಹೂಡಿಕೆ ಆರಂಭ
- ಸಾವಿರ ರೂಪಾಯಿ ಹೂಡಿಕೆಗೆ 25 ವರ್ಷಕ್ಕೆ 8 ಲಕ್ಷ ರಿಟರ್ನ್
ಯಾವುದೇ ಮಾರುಕಟ್ಟೆ ಅಪಾಯವಿಲ್ಲದೆ ನಿಮ್ಮ ಬಳಿ ಇರುವ ಹಣ ದುಪ್ಪಟ್ಟಾಗಿ ನಿಮ್ಮ ಕೈಗೆ ಸೇರಬೇಕು ಎಂದು ಬಯಸುತ್ತೀರಾ. ಹಾಗಿದ್ರೆ ಈ ಲೇಖನ ನಿಮಗಾಗಿ.
ಸರ್ಕಾರಿ ಸಂಸ್ಥೆಗಳಲ್ಲಿ ಹಣಕಾಸಿನ ಹೂಡಿಕೆ ಮಾಡುವುದರಿಂದ ಯಾವುದೇ ಮಾರುಕಟ್ಟೆ ಅಪಾಯವಿಲ್ಲದೆ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ರಿಟರ್ನ್ ಪಡೆದುಕೊಳ್ಳಬಹುದು. ಅದರಲ್ಲೂ ದೀರ್ಘಾವಧಿ ಹೂಡಿಕೆಗೆ ಹೆಚ್ಚಿನ ಆದಾಯ ಸಿಗುತ್ತದೆ.
ಪಿಪಿಎಫ್ ಯೋಜನೆ!
ಇದು ಅಂಚೆ ಕಚೇರಿಯ ಅತಿ ಉತ್ತಮ ಯೋಜನೆಗಳಲ್ಲಿ ಒಂದಾಗಿದೆ. ಪಿಪಿಎಫ್ ಅಥವಾ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ನೀವು ಹೂಡಿಕೆ ಮಾಡಿ ಹೆಚ್ಚಿನ ಲಾಭವನ್ನ ಗಳಿಸಬಹುದು. ಇಲ್ಲಿ ಕೇವಲ 500 ರೂಪಾಯಿಗಳಿಂದ ಹೂಡಿಕೆಯನ್ನು ಆರಂಭಿಸಬಹುದು.
ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಇದು 15 ವರ್ಷಗಳ ಅವಧಿಯ ಯೋಜನೆಯಾಗಿರುತ್ತದೆ. ಪಿಪಿಎಫ್ ಹೂಡಿಕೆಗೆ ನೀವು ಪಡೆದುಕೊಳ್ಳುವ ಬಡ್ಡಿ ಪ್ರಸ್ತುತ 7.1%.
ದುಬೈನಲ್ಲಿ 1BHK ಮನೆ ಬಾಡಿಗೆ ಎಷ್ಟು ಗೊತ್ತಾ? ಬೆಂಗಳೂರಲ್ಲಿ ಫ್ಲಾಟ್ ಖರೀದಿ ಮಾಡಬಹುದು!
ಪಿಪಿಎಫ್ ನಲ್ಲಿ ನೀವು ಪ್ರತಿ ತಿಂಗಳು ಕೇವಲ ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಬಂದರೆ, ಕೆಲವು ವರ್ಷಗಳಲ್ಲಿ ಎಂಟು ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು. ಲೆಕ್ಕಾಚಾರದ ಪ್ರಕಾರ ಪ್ರತಿ ತಿಂಗಳು 1000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ವರ್ಷಕ್ಕೆ 12,000 ರೂಪಾಯಿಗಳನ್ನು ಉಳಿಸುತ್ತೀರಿ.
ಇದು 15 ವರ್ಷಕ್ಕೆ ಮೆಚೂರ್ ಆಗುವ ಯೋಜನೆಯಾಗಿದ್ದರೂ ಕೂಡ ನೀವು ತಲಾ ಐದು ವರ್ಷಗಳಿಗೆ ಎರಡು ಬಾರಿ ವಿಸ್ತರಿಸಬಹುದು. ಅಂದರೆ 25 ವರ್ಷಗಳ ಕಾಲ ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡಬಹುದು.
ಬಡ್ಡಿಯಿಂದ ಸಿಗುತ್ತೆ ಲಾಭ!
ಇನ್ನು 25 ವರ್ಷಗಳವರೆಗೆ ಪ್ರತಿ ತಿಂಗಳು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡುತ್ತಾ ಬಂದರೆ ನೀವು ಉಳಿಸುವ ಮೊತ್ತ ಮೂರು ಲಕ್ಷ ರೂಪಾಯಿಗಳು. ಇದಕ್ಕೆ 7.1% ಬಡ್ಡಿಯಂತೆ, 5,24,641 ರೂಪಾಯಿಗಳನ್ನು ಬಡ್ಡಿಯಾಗಿ ಪಡೆಯುತ್ತೀರಿ. ಅಂದರೆ ಮೆಚುರಿಟಿ ಗಳಿಗೆ ಒಟ್ಟಾರೆಯಾಗಿ ನೀವು ಗಳಿಸುವ ಹಣ 8,24,641 ರೂಪಾಯಿಗಳು.
ಐದು ವರ್ಷಗಳಲ್ಲಿ 42 ಲಕ್ಷ ರೂಪಾಯಿ ಬೇಕು ಅಂದ್ರೆ ಇಲ್ಲಿ ಹೂಡಿಕೆ ಮಾಡಿ ಸಾಕು!
ತೆರಿಗೆ ರಿಯಾಯಿತಿ!
ಪಿಪಿಎಫ್ ವಾರ್ಷಿಕ ಠೇವಣಿಯ ಮೇಲೆ ತೆರಿಗೆ ಇರುವುದಿಲ್ಲ. ಅದೇ ರೀತಿ ಪ್ರತಿ ವರ್ಷ ಬರುವ ಬಡ್ಡಿಯ ಮೇಲೆಯೂ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಮೆಚುರಿಟಿ ಅವಧಿಯ ನಂತರ ಸಿಗುವ ಸಂಪೂರ್ಣ ಹಣದ ಮೇಲೆ ತೆರಿಗೆ ಇಲ್ಲ. ಈಗ ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದರೆ ನೀವು ಸಂಪೂರ್ಣ ಲಾಭವನ್ನ ಪಡೆಯುತ್ತೀರಿ.
Save just 1,000 in the post office and get 8 lakh in returns