ಯುಪಿಐ ಪೇಮೆಂಟ್ ಮಾಡುವವರಿಗೆ ಫೆಬ್ರವರಿ 1ರಿಂದ ಹೊಸ ನಿಯಮ ಜಾರಿ
ಇನ್ನು ಮುಂದೆ ಇಂಥ ಐಡಿ ಹೊಂದಿದ್ರೆ ಯುಪಿಐ ಪೇಮೆಂಟ್ ಮಾಡಲು ಸಾಧ್ಯವಿಲ್ಲ ಎಂದು NPCI ತಿಳಿಸಿದೆ. ಫೆಬ್ರುವರಿ 1, 2025 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.
- ಯುಪಿಐ ಐಡಿಯಲ್ಲಿ ಈ ವಿಶಿಷ್ಟ ಅಕ್ಷರಗಳನ್ನು ಬಳಸುವಂತಿಲ್ಲ
- ಫೆಬ್ರುವರಿ 1, 2025 ರಿಂದ ಹೊಸ ಯುಪಿಐ ನಿಯಮ ಜಾರಿ
- ಎನ್ ಪಿ ಸಿ ಐ, ಯುಪಿಐ ಬಳಕೆದಾರರಿಗೆ ತಂದಿದೆ ಹೊಸ ನಿಯಮ
UPI Payment : ಇತ್ತೀಚಿನ ದಿನಗಳಲ್ಲಿ ಯಾವುದೇ ಕ್ಯಾಶ್ ಅಥವಾ ಚೆಕ್ ಮೂಲಕ ಹಣಕಾಸಿನ ವ್ಯವಹಾರ ಮಾಡುವ ಬದಲು ಸುಲಭವಾಗಿ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು ಪ್ರತಿಯೊಬ್ಬರು ಯುಪಿಐ ಅನ್ನು ಪೇಮೆಂಟ್ ಗಳಿಗಾಗಿ ಅವಲಂಬಿಸಿದ್ದಾರೆ.
ನೀವು ಯುಪಿಐ ಐಡಿ (UPI ID) ಹೊಂದಿದ್ದರೆ ಸುಲಭವಾಗಿ ಮೊಬೈಲ್ ಮೂಲಕ ಯಾವುದೇ ರೀತಿಯ ಮೊಬೈಲ್ ರೀಚಾರ್ಜ್ ಬಿಲ್ ಪೇಮೆಂಟ್ ಮೊದಲಾದ ಹಣಕಾಸಿನ ವ್ಯವಹಾರಗಳನ್ನು ಮಾಡಬಹುದು. ಯುಪಿಐ ನಲ್ಲಿ ಒಂದು ವಿಶಿಷ್ಟ ಸಂಖ್ಯೆಯನ್ನು ಹೊಂದಿರುವ ಐಡಿ ಆಗಿದ್ದು, ಸುಲಭವಾಗಿ ಹಾಗೂ ಅತ್ಯಂತ ವೇಗವಾಗಿ ಹಣಕಾಸಿನ ವಹಿವಾಟು ಮಾಡಲು ಸಹಾಯಕವಾಗಿದೆ.
ಮೊದಲಿನಂತೆ ಈಗ ಬ್ಯಾಂಕಿಗೆ ಹೋಗುವ ಅಗತ್ಯವಿಲ್ಲ. ನೀವು ಯಾವುದೇ ಮೂಲೆಯಲ್ಲಿ ಕುಳಿತು ಬೇಕಿದ್ದರೂ ಸುಲಭವಾಗಿ ಕ್ಷಣಮಾತ್ರದಲ್ಲಿ ಪೇಮೆಂಟ್ ಮಾಡಬಹುದಾಗಿದೆ.
ಇನ್ನು ಜಿಯೋ, ಗೂಗಲ್ ಪೇ (Google Pay), ಫೋನ್ ಪೇ (PhonePe), ಮೊದಲಾದ ಅಪ್ಲಿಕೇಶನ್ ಮೂಲಕ ಯುಪಿಐ ಬಳಕೆ ಮಾಡಬಹುದು. ನೋಂದಾಯಿತ ಬಳಕೆದಾರರು ಸುಲಭವಾಗಿ ತಮ್ಮ ಸ್ಮಾರ್ಟ್ ಫೋನ್ ಮೂಲಕ ಪೇಮೆಂಟ್ ಮಾಡಬಹುದು.
ಕ್ರೆಡಿಟ್ ಕಾರ್ಡ್ ಅನ್ನು ಹೀಗೆ ಬಳಸಿದರೆ ವಾರ್ಷಿಕ ಶುಲ್ಕ ಕಟ್ಟುವ ಅಗತ್ಯವೇ ಇಲ್ಲ ಗೊತ್ತಾ?
ಎನ್ ಪಿ ಸಿ ಐ ಹೊಸ ರೂಲ್ಸ್!
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಯುಪಿಐ ವಾಹಿವಾಟಿನ ಬಗ್ಗೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಫೆಬ್ರುವರಿ 1, 2025 ರಿಂದ ಇದು ಅನ್ವಯವಾಗಲಿದೆ. ಇನ್ನು ಮುಂದೆ ಯುಪಿಐ ಐಡಿಯಲ್ಲಿ ಯಾವುದೇ ವಿಶಿಷ್ಟ ಅಕ್ಷರಗಳನ್ನು ಹೊಂದಿದ್ದರೆ ಅಂತಹ ಐಡಿಯನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.
ಯುಪಿಐ ಐಡಿಗಾಗಿ ಸಂಖ್ಯೆಗಳನ್ನು ಮತ್ತು ಕೆಲವು ಅಕ್ಷರಗಳನ್ನು ಬಳಸುವುದು ಸಹಜ ಆದ್ರೆ ವಿಶಿಷ್ಟ ಅಕ್ಷರಗಳು (*, @, #, $, &, ) ಇಂಥವುಗಳನ್ನು ಐಡಿಯಲ್ಲಿ ಬಳಸುವಂತಿಲ್ಲ.
ಈ ರೀತಿ ಐಡಿಗಳು ಇದ್ರೆ ಇನ್ನು ಮುಂದೆ ಯುಪಿಐ ಸಿಸ್ಟಮ್ ಐಡಿಗಳನ್ನು ಸ್ವೀಕರಿಸುವುದಿಲ್ಲ ಎಂದು ಎಂಪಿಸಿಐ ತಿಳಿಸಿದೆ. ತಾಂತ್ರಿಕ ಬಳಕೆಗೆ ಸಂಬಂಧಪಟ್ಟಂತೆ ಎಂಪಿಸಿಐ ಈ ಹೊಸ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.
New rules for UPI payments to be implemented from February 1