Business News

HDFC ಬ್ಯಾಂಕ್ ನಲ್ಲಿ 11 ಲಕ್ಷ ಸಾಲಕ್ಕೆ ಎಷ್ಟು EMI ಕಟ್ಟಬೇಕು? ಇಲ್ಲಿದೆ ಡೀಟೇಲ್ಸ್

ನೀವು ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಾಲದ ಅವಧಿಗೂ ಮೊದಲೇ ಹಣ ಮರುಪಾವತಿ ಮಾಡಲು ಬಯಸಿದರೆ ಪ್ರೀಕ್ಲೋಸಿಂಗ್ ಆಯ್ಕೆ ಇರುತ್ತದೆ.

HDFC Bank Loan : ಹಣದ ಅವಶ್ಯಕತೆ ಇದ್ದಾಗ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ (Personal Loan) ತೆಗೆದುಕೊಳ್ಳಬಹುದು. ಈ ಸಾಲವನ್ನು ನೀವು ಬೇರೆ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ವೈಯಕ್ತಿಕ ಸಾಲ ಅಸುರಕ್ಷಿತ ಸಾಲವಾಗಿದ್ದು, ಇದರಲ್ಲಿ ಮದುವೆ ಸಾಲ ಹಾಗೂ ಕಾರ್ ಲೋನ್ ನಲ್ಲಿ (Car Loan) ಇರುವಂತಹ ಯಾವುದೇ ಭಾದ್ಯತೆಗಳು ಇರುವುದಿಲ್ಲ.

ವೈಯಕ್ತಿಕ ಸಾಲಕ್ಕೆ ಇರುವ ಬಡ್ಡಿ ದರ

ಬೇರೆ ಬೇರೆ ಬ್ಯಾಂಕಲ್ಲಿ ವೈಯಕ್ತಿಕ ಸಾಲಕ್ಕೆ ಬೇರೆ ಬೇರೆ ರೀತಿಯ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಬ್ಯಾಂಕ್ ನಲ್ಲಿ 8.5% ನಿಂದ 36% ವರೆಗೂ ವೈಯಕ್ತಿಕ ಸಾಲದ ಬಡ್ಡಿ ದರವನ್ನು ನಿರ್ಧರಿಸಲಾಗುತ್ತದೆ. ಇನ್ನು ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.

HDFC ಬ್ಯಾಂಕ್ ನಲ್ಲಿ 11 ಲಕ್ಷ ಸಾಲಕ್ಕೆ ಎಷ್ಟು EMI ಕಟ್ಟಬೇಕು? ಇಲ್ಲಿದೆ ಡೀಟೇಲ್ಸ್

ಪ್ರಿ ಕ್ಲೋಸಿಂಗ್ ಆಯ್ಕೆ!

ವಯಕ್ತಿಕ ಸಾಲವನ್ನು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು EMI ಮೂಲಕ ಪಾವತಿ ಮಾಡಬೇಕಾಗುತ್ತದೆ. ಆದರೆ ನೀವು ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಸಾಲದ ಅವಧಿಗೂ ಮೊದಲೇ ಹಣ ಮರುಪಾವತಿ ಮಾಡಲು ಬಯಸಿದರೆ ಪ್ರೀಕ್ಲೋಸಿಂಗ್ ಆಯ್ಕೆ ಇರುತ್ತದೆ.

ಸಾಲ ಮಾಡಿ ತೀರಿಸೋಕೆ ಆಗದೆ ಇರೋರಿಗೆ ಬ್ಯಾಂಕ್ ನೀಡುತ್ತಿದೆ ಇನ್ನೊಂದು ಆಪ್ಷನ್

ಅಂದರೆ ಅವಧಿಗೂ ಮೊದಲೇ ನೀವು ಹಣವನ್ನು ಮರುಪಾವತಿ ಮಾಡಬಹುದು. ಆದರೆ ಇದಕ್ಕೆ ಅದರದೇ ಆದ ನಿಯಮಗಳು ಇದ್ದು, ಬ್ಯಾಂಕ್ ನೊಂದಿಗೆ ಈ ಬಗ್ಗೆ ಚರ್ಚಿಸಿ ನಂತರ ಸಾಲಮರುಪಾವತಿ ಮಾಡಬಹುದು.

ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ 11 ಲಕ್ಷಕ್ಕೆ ಎಷ್ಟು EMI?

ನೀವು ಎಷ್ಟು ಅವಧಿಗೆ ಸಾಲವನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ EMI ಮೊತ್ತವನ್ನು ನಿರ್ಧರಿಸಲಾಗುತ್ತದೆ. ದೀರ್ಘಾವಧಿಯ ಸಾಲಕ್ಕೆ ಪ್ರತಿ ತಿಂಗಳು ಪಾವತಿಸಬೇಕಾದ ಹಣ ಕಡಿಮೆ. ಆದರೆ ಇಲ್ಲಿ ಬಡ್ಡಿ ಹೆಚ್ಚಾಗುತ್ತದೆ. ಈಗ ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ 11 ಲಕ್ಷ ರೂಪಾಯಿ ಸಾಲ ತೆಗೆದುಕೊಂಡರೆ ಎಷ್ಟು EMI ಪಾವತಿಸಬೇಕು ನೋಡೋಣ.

ಬ್ಯಾಂಕ್ ಸಾಲ ಮಾಡಿದ ವ್ಯಕ್ತಿ ಸತ್ತರೆ, ಮನೆಯವರು ಸಾಲ ತೀರಿಸಬೇಕಾ?

ಹೆಚ್ ಡಿ ಎಫ್ ಸಿ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ (HDFC Bank Personal Loan) 10.85% ನಿಂದ 24% ವರೆಗೆ ಬಡ್ಡಿಯನ್ನು ವಿಧಿಸುತ್ತದೆ. ಇನ್ನು 6,500 ರೂಪಾಯಿಗಳನ್ನು ಪ್ರೋಸೆಸ್ಸಿಂಗ್ ಫೀ ಆಗಿ ಪಾವತಿಸಬೇಕು. 7 ವರ್ಷಗಳ ಅವಧಿಗೆ 11 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡರೆ ಮಾಸಿಕ EMI ಮೊತ್ತ 18,748 ರೂಪಾಯಿಗಳು.

How Much EMI to Pay for a 11 Lakh Loan in HDFC Bank

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories