ಮಹಿಳೆಯರಿಗೆ 3 ಲಕ್ಷ ಒದಗಿಸುವ ಕೇಂದ್ರ ಸರ್ಕಾರದ ಯೋಜನೆ! ಅರ್ಜಿ ಹಾಕಿದ ಎಲ್ಲರಿಗೂ ಹಣ
ಕೇಂದ್ರ ಸರ್ಕಾರದ ಉದ್ಯೋಗಿನಿ ಯೋಜನೆಯಿಂದ 18-55 ವರ್ಷ ವಯಸ್ಸಿನ, ಕಡಿಮೆ ಆದಾಯದ ಮಹಿಳೆಯರಿಗೆ 1 ರಿಂದ 3 ಲಕ್ಷ ರೂ.ವರೆಗೆ ವ್ಯವಹಾರ ಆರಂಭಿಸಲು ಆರ್ಥಿಕ ನೆರವು ಸಿಗುತ್ತದೆ.
Govt Loan Scheme: ಮಹಿಳೆಯರು ಇಂದು ನಾಲ್ಕು ಗೋಡೆ ಮದ್ಯೆಯೇ ಇರಬೇಕೆಂದೇನೂ ಇಲ್ಲ. ವ್ಯವಹಾರ, ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲೂ ಅವರು ತಮ್ಮದೇ ಆದ ಗುರುತನ್ನು ಮೂಡಿಸುತ್ತಿದ್ದಾರೆ.
ಈ ಸಾಮರ್ಥ್ಯಕ್ಕೆ ಮತ್ತಷ್ಟು ಬಲ ತುಂಬಲು ಕೇಂದ್ರ ಸರ್ಕಾರ ಹಲವು ನೆರವು ಯೋಜನೆಗಳನ್ನು ನೀಡುತ್ತಿದ್ದು, ಅದರಲ್ಲಿ ಹೆಚ್ಚು ಚರ್ಚೆಯಾಗಿರುವುದು ಉದ್ಯೋಗಿನಿ ಯೋಜನೆ.
ಈ ಯೋಜನೆಯ ವಿಶೇಷತೆ ಎಂದರೆ ಮಹಿಳೆಯರು ಯಾವುದೇ ಮೇಲಾಧಾರ (Collateral) ನೀಡಬೇಕಾದ ಅಗತ್ಯವಿಲ್ಲದೆ ಒಂದು ಲಕ್ಷದಿಂದ ಮೂರು ಲಕ್ಷ ರೂಪಾಯಿ ವರೆಗೆ ಸಾಲ (Business Loan) ಪಡೆಯಬಹುದು. ಸರಳ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ, ಹೊಸ ವ್ಯವಹಾರ ಆರಂಭಿಸಲು ಬೇಕಾದ ಹಣಕಾಸಿನ ಅಡಚಣೆ ದೂರವಾಗುತ್ತದೆ.
ಉದ್ಯೋಗಿನಿ ಯೋಜನೆಯನ್ನು ಮೊದಲಿಗೆ ಕರ್ನಾಟಕ ರಾಜ್ಯದಲ್ಲೇ ಆರಂಭಿಸಿದ್ದು, ನಂತರ ಕೇಂದ್ರ ಸರ್ಕಾರ ಇದನ್ನು ದೇಶದಾದ್ಯಂತ ಜಾರಿಗೆ ತಂದಿದೆ. ಹಲವಾರು ವರ್ಷಗಳಿಂದ ಸತತವಾಗಿ ಈ ಯೋಜನೆ ಮಹಿಳೆಯರ ಕೈಗೆ ಆರ್ಥಿಕ ಬಲ ನೀಡುತ್ತಿದ್ದು, ಸಾವಿರಾರು ಮಹಿಳೆಯರು ಇದರಿಂದ ಲಾಭ ಪಡೆದಿದ್ದಾರೆ.
ಇದನ್ನೂ ಓದಿ: 50% ಡಿಸ್ಕೌಂಟ್ ಬೆಲೆಗೆ ಸಿಗುತ್ತೆ ಎಲೆಕ್ಟ್ರಿಕ್ ಸ್ಕೂಟರ್! ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೇಶನ್ ಅಗತ್ಯವಿಲ್ಲ
ಈ ಯೋಜನೆಯ ಪ್ರಮುಖ ಷರತ್ತುಗಳಲ್ಲಿ ಒಂದು ಎಂದರೆ ಮಹಿಳೆಯ ವಯಸ್ಸು 18 ರಿಂದ 55 ವರ್ಷದೊಳಗೇ ಇರಬೇಕು. ಆದರೆ, ಅಂಗವಿಕಲ ಮಹಿಳೆಯರಿಗೆ ವಯೋಮಿತಿ ಅನ್ವಯಿಸುವುದಿಲ್ಲ ಎಂಬುದು ಸರ್ಕಾರದ ವಿಶೇಷ ಸವಲತ್ತು. ಜೊತೆಗೆ, ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷ ರೂಪಾಯಿಗಿಂತ ಹೆಚ್ಚು ಇರಬಾರದು.
ಇದನ್ನೂ ಓದಿ: ಪೈಸಾ ಬಂಡವಾಳ ಬೇಡ! ದಂಪತಿಗಳು ಮನೆಯಲ್ಲೇ ಶುರುಮಾಡಬಹುದಾದ ಬಿಸಿನೆಸ್ ಇದು
ಅರ್ಹ ಮಹಿಳೆಯರು ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಮತದಾರ ಚೀಟಿ, ಫೋಟೋಗಳು, ಆದಾಯ ಪ್ರಮಾಣ ಪತ್ರ, ಕೌಟುಂಬಿಕ ಮತ್ತು ಜಾತಿ ಪ್ರಮಾಣ ಪತ್ರದ ಜೊತೆಗೆ ಪ್ರಾಜೆಕ್ಟ್ ರಿಪೋರ್ಟ್ ಅಗತ್ಯವಿದೆ. ವ್ಯವಹಾರ ಆರಂಭಿಸಲು ಬಯಸುವ ಅನೇಕ ಮಹಿಳೆಯರಿಗೆ ಉದ್ಯೋಗಿನಿ ಯೋಜನೆ ಹೊಸ ದಿಕ್ಕು ತೋರಿಸುತ್ತಿದೆ.




