ಕೇವಲ 10 ಲಕ್ಷಕ್ಕೆ ಹೊಸ ಮಹೀಂದ್ರಾ ಥಾರ್ 2025 ಆವೃತ್ತಿ ಬಿಡುಗಡೆ! ಆಕರ್ಷಕ ಲುಕ್
ಮಹೀಂದ್ರ & ಮಹೀಂದ್ರ ಕಂಪನಿಯಿಂದ ಹೊಸ ಥಾರ್ 2025 ಮಾದರಿ ಬಿಡುಗಡೆಗೊಂಡಿದ್ದು, ಕೇವಲ ₹10 ಲಕ್ಷದಿಂದ ಪ್ರಾರಂಭವಾಗುತ್ತದೆ. ಹೊಸ ಬಣ್ಣ ಆಯ್ಕೆಗಳು, ಆಕರ್ಷಕ ಲುಕ್ ಮತ್ತು ಹೊಸ ತಂತ್ರಜ್ಞಾನಗಳೊಂದಿಗೆ ಬಂದಿದೆ.

ಮಹೀಂದ್ರ & ಮಹೀಂದ್ರ ಸಂಸ್ಥೆ ತನ್ನ ಹೊಸ ಮಹೀಂದ್ರ ಥಾರ್ 2025 ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಕಂಪನಿಯ ಈ ಪ್ರಖ್ಯಾತ SUV ಈಗ ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ಆಧುನಿಕ ತಂತ್ರಜ್ಞಾನಗಳೊಂದಿಗೆ ಬಂದಿದೆ. ಇದರ ಪ್ರಾರಂಭಿಕ ಎಕ್ಸ್ಶೋರೂಮ್ ಬೆಲೆ ಕೇವಲ ₹10 ಲಕ್ಷ ಎಂದು ಪ್ರಕಟಿಸಲಾಗಿದೆ.
ಈ ಹೊಸ ಮಾದರಿಯಲ್ಲಿ ಗ್ರಾಹಕರ ಅನುಭವವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಅನೇಕ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ. 10.25 ಇಂಚಿನ HD ಟಚ್ಸ್ಕ್ರೀನ್ ಇನ್ಫೊಟೈನ್ಮೆಂಟ್ ಸಿಸ್ಟಮ್, ರಿಯರ್ ಎಸಿ ವೆಂಟ್ಸ್, ಡ್ಯುಯಲ್ ಟೋನ್ ಬಂಪರ್, ಸ್ಲೈಡಿಂಗ್ ಆರ್ಮ್ರೆಸ್ಟ್, ಡೆಡ್ ಪೆಡಲ್ (ಆಟೋಮ್ಯಾಟಿಕ್), ಟೈರ್ ಡೈರೆಕ್ಟ್ ಮಾನಿಟರಿಂಗ್ ಸಿಸ್ಟಮ್ ಮುಂತಾದವು ಹೊಸ ರೂಪದಲ್ಲಿ ಲಭ್ಯವಿದೆ.
ಹೊಸ ಥಾರ್ನಲ್ಲಿ ಟಾಂಗೋ ರೆಡ್ ಹಾಗೂ ಬಾಟಲ್ಶಿಪ್ ಗ್ರೇ ಸೇರಿದಂತೆ ಆರು ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ. ಹಿಂದಿನ ಮಾದರಿಗಿಂತ ವಿಭಿನ್ನವಾದ ಫ್ರಂಟ್ ಗ್ರಿಲ್, ನೂತನ ಸ್ಟೀರಿಂಗ್ ವೀಲ್, ಹಾಗೂ ಸಂಪೂರ್ಣ ಕಪ್ಪು ಡ್ಯಾಶ್ಬೋರ್ಡ್ ಇದರ ವೈಶಿಷ್ಟ್ಯಗಳಾಗಿವೆ.
ಇದರಲ್ಲಿ 2.0 ಲೀಟರ್ M-Stallion ಪೆಟ್ರೋಲ್ ಎಂಜಿನ್ 150 HP ಶಕ್ತಿಯೊಂದಿಗೆ 300 Nm ಟಾರ್ಕ್ ನೀಡುತ್ತದೆ, ಹಾಗೂ ಆಟೋಮ್ಯಾಟಿಕ್ ವೇರಿಯಂಟಿನಲ್ಲಿ 320 Nm ಪೀಕ್ ಟಾರ್ಕ್ ನೀಡುತ್ತದೆ. ಅದೇ ರೀತಿ 2.2 ಲೀಟರ್ mHawk ಡೀಸೆಲ್ ಎಂಜಿನ್ 130 HP ಶಕ್ತಿಯೊಂದಿಗೆ 300 Nm ಟಾರ್ಕ್ ಉತ್ಪಾದಿಸುತ್ತದೆ.
ಗ್ರಾಹಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಕಂಪನಿಯು ಈ ಬಾರಿ ಹಲವು ಎಂಜಿನ್ ಆಯ್ಕೆಗಳು ಮತ್ತು ಟ್ರಾನ್ಸ್ಮಿಷನ್ ಆಯ್ಕೆಗಳು (6-ಸ್ಪೀಡ್ ಮ್ಯಾನುಯಲ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್) ನೀಡಿದೆ. SUV ಪ್ರಿಯರಿಗಾಗಿ ಹೊಸ ಥಾರ್ ಮತ್ತೊಮ್ಮೆ ಆಕರ್ಷಕ ಆಯ್ಕೆಯಾಗಿದೆ.
Mahindra Thar 2025 launched at just 10 lakh



