ದೀಪಾವಳಿ ಆಫರ್‌: ಮಾರುತಿ ಸುಜುಕಿ ಕಾರುಗಳ ಮೇಲೆ ₹2 ಲಕ್ಷದವರೆಗೆ ಡಿಸ್ಕೌಂಟ್

ದೀಪಾವಳಿ ಹಬ್ಬದ ಸಂಧರ್ಭದಲ್ಲಿ ಮಾರುತಿ ಸುಜುಕಿ ಕಂಪನಿ ಹಲವಾರು ಕಾರುಗಳ ಮೇಲೆ ಭಾರೀ ರಿಯಾಯಿತಿ ಘೋಷಿಸಿದೆ. ಹ್ಯಾಚ್‌ಬ್ಯಾಕ್‌ಗಳು, SUV ಹಾಗೂ MPV ಮಾದರಿಗಳಲ್ಲಿ ₹2 ಲಕ್ಷದವರೆಗೆ ಆಫರ್ ಲಭ್ಯ.

Maruti Suzuki Diwali 2025: ದೀಪಾವಳಿ 2025 ಹಬ್ಬದ ಸಂಧರ್ಭದಲ್ಲಿ ಭಾರತದ ಅಗ್ರ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಗ್ರಾಹಕರಿಗೆ ಭಾರೀ ಉಡುಗೊರೆ ಘೋಷಿಸಿದೆ. ಕಂಪನಿ ತನ್ನ ಹಲವು ಜನಪ್ರಿಯ ಮಾದರಿಗಳ ಮೇಲೆ ₹1.80 ಲಕ್ಷದಿಂದ ₹2 ಲಕ್ಷದವರೆಗೆ ಆಫರ್‌ಗಳನ್ನು ಘೋಷಿಸಿದ್ದು, ಖರೀದಿದಾರರ ಆಸಕ್ತಿ ಹೆಚ್ಚಿಸಿದೆ.

ಅಲ್ಟೋ K10 ಮತ್ತು ಎಸ್-ಪ್ರೆಸ್ಸೊ ಕಾರುಗಳ ಮೇಲೆ ₹55,500 ರವರೆಗೆ ಕ್ಯಾಶ್‌ಬ್ಯಾಕ್, ಎಕ್ಸ್ಚೇಂಜ್ ಬೋನಸ್ ಮತ್ತು ಸ್ಕ್ರಾಪ್ ಪ್ರಯೋಜನಗಳು ದೊರೆಯುತ್ತಿವೆ. ಅಲ್ಲದೆ ಸಂಸ್ಥೆ ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ₹2,500 ರಿಂದ ಆರಂಭವಾಗುವ ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತಿದೆ.

ಇದೇ ರೀತಿ ವ್ಯಾಗನ್ ಆರ್ ಮತ್ತು ಸೆಲೆರಿಯೋ ಹ್ಯಾಚ್‌ಬ್ಯಾಕ್‌ಗಳ ಪೆಟ್ರೋಲ್ ಹಾಗೂ CNG ಮಾದರಿಗಳಿಗೂ ₹55,500 ರವರೆಗೆ ಆಫರ್ ಇದೆ. ಈ ಪ್ಯಾಕೇಜ್‌ನಲ್ಲಿ ಸ್ಪಾಟ್ ಡಿಸ್ಕೌಂಟ್, ಎಕ್ಸ್ಚೇಂಜ್ ಬೋನಸ್, ಸ್ಕ್ರಾಪೇಜ್ ಪ್ರಯೋಜನ ಮತ್ತು ಸಂಸ್ಥೆಯ ಖರೀದಿದಾರರಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ.

ಸ್ಫಿಫ್ಟ್, ಡಿಸೈರ್, ಬ್ರೆಜ್ಜಾ ಮತ್ತು ಎರ್ಟಿಗಾ ಕಾರುಗಳ ಮೇಲೆಯೂ ಡಿಸ್ಕೌಂಟ್‌ಗಳು ಲಭ್ಯ. ಸ್ಫಿಫ್ಟ್‌ನ ನಾಲ್ಕನೇ ತಲೆಮಾರಿನ CNG ಮಾದರಿಗಳಲ್ಲಿ ₹43,750 ರವರೆಗೆ ರಿಯಾಯಿತಿ ಇದೆ. ಸಬ್-ಫೋರ್ ಮೀಟರ್ SUV ಬ್ರೆಜ್ಜಾ ಮಾದರಿಯಲ್ಲಿ ₹35,000 ವರೆಗೆ ಹಾಗೂ ಎರ್ಟಿಗಾ ಪೆಟ್ರೋಲ್ ಮತ್ತು CNG ಮಾದರಿಗಳಲ್ಲಿ ₹25,000 ವರೆಗೆ ಪ್ರಯೋಜನ ದೊರೆಯುತ್ತದೆ.

ಈಕೋ ಮತ್ತು ಟೂರ್ ಸರಣಿ ಮಾದರಿಗಳಿಗೂ ಆಫರ್ ನೀಡಲಾಗಿದೆ. ಈಕೋ ವ್ಯಾನ್ ಅಂಬುಲೆನ್ಸ್ ಮಾದರಿಯಲ್ಲಿ ₹2,500 ರವರೆಗೆ ರಿಯಾಯಿತಿ ಇದ್ದು, ಪೆಟ್ರೋಲ್-CNG ಮಾದರಿಯಲ್ಲಿ ₹30,500 ರವರೆಗೆ ಹಾಗೂ ಕಾರ್ಗೋ ಮಾದರಿಯಲ್ಲಿ ₹40,500 ರವರೆಗೆ ಪ್ರಯೋಜನ ನೀಡಲಾಗಿದೆ.

ಟೂರ್ ಸರಣಿಯ H1 ಪೆಟ್ರೋಲ್ ಮತ್ತು CNG ಮಾದರಿಗಳಿಗೆ ₹65,500, H3 CNG ಮಾದರಿಗೆ ₹50,000, ಹಾಗೂ ಟೂರ್ M ಪೆಟ್ರೋಲ್ ಮತ್ತು CNG ಮಾದರಿಗಳಿಗೆ ₹25,000 ಸ್ಕ್ರಾಪ್ ಬೋನಸ್ ನೀಡಲಾಗುತ್ತಿದೆ. ಕಂಪನಿಯ ಉದ್ದೇಶ ಈ ಹಬ್ಬದ ಕಾಲದಲ್ಲಿ ಎಲ್ಲಾ ವರ್ಗದ ಗ್ರಾಹಕರಿಗೆ ಆಕರ್ಷಕ ಆಫರ್ ನೀಡುವುದಾಗಿದೆ.

Maruti Suzuki Diwali Offer, Up to 2 Lakh Discount on Cars

Related Stories