ಇದು ಕಡಿಮೆ ಬಜೆಟ್ನ ಫ್ಯಾಮಿಲಿ ಕಾರು! ಇಎಂಐ ಆದ್ರೆ ತಿಂಗಳಿಗೆ ಎಷ್ಟು ಕಟ್ಟಬೇಕು ಗೊತ್ತಾ
Maruti WagonR Car: ಕಡಿಮೆ ಬಜೆಟ್ನಲ್ಲಿ ಫ್ಯಾಮಿಲಿ ಕಾರು ಹುಡುಕುತ್ತಿರುವವರಿಗೆ ಮಾರುತಿ ವ್ಯಾಗನ್ಆರ್ ಉತ್ತಮ ಆಯ್ಕೆ. ದರ, ಆನ್ರೋಡ್ ಬೆಲೆ, EMI ಲೆಕ್ಕ ಹಾಗೂ ಡೌನ್ಪೇಮೆಂಟ್ ವಿವರಗಳು ಇಲ್ಲಿದೆ.

Budget Family Car: ಮಧ್ಯಮ ವರ್ಗದ ಕುಟುಂಬಗಳು ಹೆಚ್ಚು ನಂಬಿಕೆ ಇಡುವ ಕಾರು ಬ್ರಾಂಡ್ಗಳಲ್ಲಿ ಮಾರುತಿ ಸುಜುಕಿಯ ಹೆಸರು ಮೊದಲಿಗದ್ದು. ಹೆಚ್ಚಿನ ಮೈಲೇಜ್, ಕಡಿಮೆ ನಿರ್ವಹಣಾ ವೆಚ್ಚ ಮತ್ತು ಬಜೆಟ್ ಸ್ನೇಹಿ ದರ ಬ್ರಾಂಡ್ನ್ನು ಹೆಚ್ಚು ಜನಪ್ರಿಯವಾಗಿಸಿದೆ.
ದೇಶದ ಜನಪ್ರೀಯ ಹ್ಯಾಚ್ಬ್ಯಾಕ್ಗಳಲ್ಲಿ ವ್ಯಾಗನ್ಆರ್ ವರ್ಷಗಳಿಂದಲೂ ಟಾಪ್ ಸೇಲರ್ ಆಗಿ ಉಳಿದಿದೆ. ಅಕ್ಟೋಬರ್ 2025ರಲ್ಲೂ 18,970 ಯೂನಿಟ್ಸ್ ಮಾರಾಟವಾಗಿ ಇದು ಮತ್ತೆ ದೇಶದ ‘ಬೆಸ್ಟ್ ಸೆಲಿಂಗ್ ಹ್ಯಾಚ್ಬ್ಯಾಕ್’ ಪಟ್ಟವನ್ನು ಗೆದ್ದಿದೆ.
ಫೀಚರ್ಗಳು ಸರಳವಾದರೂ ಸಹ ವ್ಯಾಗನ್ಆರ್ ಸಾಮಾನ್ಯ ಬಳಕೆದಾರರಿಗೆ ಸೂಕ್ತ. ಫ್ಯಾಮಿಲಿ ಕಾರು ಬೇಕೆಂದರೆ ಇದು ಮೊದಲ ಆಯ್ಕೆಯಾಗುತ್ತದೆ. ಮಾರುತಿ ಸುಜುಕಿಯ ಈ ಮಾದರಿ ಕಡಿಮೆ ಬಜೆಟ್ ವಿಭಾಗದಲ್ಲೇ ಹೆಚ್ಚು ಡಿಮಾಂಡ್ ಹೊಂದಿದೆ. ಲುಕ್, ಮೈಲೇಜ್ ಮತ್ತು ಪರ್ಫಾರ್ಮೆನ್ಸ್ ಇದರ ಮುಖ್ಯ ಪ್ಲಸ್ ಪಾಯಿಂಟ್ಗಳು.
ದರಗಳ ವಿಷಯಕ್ಕೆ ಬಂದರೆ, ವ್ಯಾಗನ್ಆರ್ ಪ್ರಾರಂಭಿಕ ಎಕ್ಸ್ಶೋ ರೂಮ್ ಬೆಲೆ ₹4.98 ಲಕ್ಷದಿಂದ ಆರಂಭವಾಗುತ್ತದೆ. ಟಾಪ್ ಮಾದರಿಯ ದರ ₹6.94 ಲಕ್ಷವರೆಗೆ ಹೋಗುತ್ತದೆ. ಬಜೆಟ್ ಫ್ಯಾಮಿಲಿ ಸೆಗ್ಮೆಂಟ್ನಲ್ಲಿ ಇದು ಅತ್ಯಂತ ಸೂಕ್ತ ಆಯ್ಕೆ ಎಂದು ಗ್ರಾಹಕರು ಹೇಳುತ್ತಾರೆ.
ಇದನ್ನೂ ಓದಿ: ಇವು 2025ರಲ್ಲಿ ₹10,000 ಕ್ಕಿಂತ ಕಡಿಮೆ ಬಜೆಟ್ನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಫೋನ್ಗಳು
ದೆಹಲಿ ನಗರದಲ್ಲಿ ವ್ಯಾಗನ್ಆರ್ ಟಾಪ್ ವೇರಿಯಂಟ್ ಖರೀದಿಸಲು, ಸುಮಾರು ₹57,000 ರಿಜಿಸ್ಟ್ರೇಷನ್ ಶುಲ್ಕ ಬರುತ್ತದೆ. ವಿಮೆ ಸೇರಿ ಇನ್ನೂ ₹39,000 ವೆಚ್ಚ ಬರಲಿದೆ. ಇತರೆ ಚಿಕ್ಕ ವೆಚ್ಚಗಳನ್ನು ಸೇರಿಸಿದರೆ ಆನ್ರೋಡ್ ಬೆಲೆ ಸುಮಾರು ₹7.92 ಲಕ್ಷದವರೆಗೆ ಏರುತ್ತದೆ.
ಒಮ್ಮೆಗೆ ಸಂಪೂರ್ಣ ಹಣ ಪಾವತಿಸಲು ಸಾಧ್ಯವಾಗದವರು EMI ಸೌಲಭ್ಯ ಬಳಸುತ್ತಿದ್ದಾರೆ. ಈ ವಿಧಾನದಲ್ಲಿ ಕಾರು ಕೊಂಡುಕೊಳ್ಳಲು ಖರೀದಿದಾರರು ಸುಮಾರು ₹2 ಲಕ್ಷ ಡೌನ್ ಪೇಮೆಂಟ್ ಕೊಡಬೇಕು. ಉಳಿದ ₹5.92 ಲಕ್ಷ ಬ್ಯಾಂಕ್ ಸಾಲವಾಗಿ (Car Loan) ಪಡೆಯಬೇಕು. ಇದರಿಂದ ಖರೀದಿದಾರರ ಮೇಲಿನ ಒತ್ತಡ ಸ್ವಲ್ಪ ಕಡಿಮೆ ಆಗುತ್ತದೆ.
9% ಬಡ್ಡಿದರದಲ್ಲಿ 5.92 ಲಕ್ಷ ಸಾಲ ಪಡೆದರೆ, 3 ವರ್ಷಗಳ ಕಾಲ ತಿಂಗಳಿಗೆ ₹18,825 EMI ಪಾವತಿಸಬೇಕು. ಮೂರು ವರ್ಷಗಳಲ್ಲಿ ಒಟ್ಟಾರೆ ₹6.77 ಲಕ್ಷ ಬ್ಯಾಂಕ್ಗೆ ಪಾವತಿಯಾಗುತ್ತದೆ. ಇದರಲ್ಲಿ ಸುಮಾರು ₹85,000 ಬಡ್ಡಿ ಹೋಗುತ್ತದೆ. EMI ಪ್ಲ್ಯಾನ್ ಮಧ್ಯಮ ವರ್ಗದವರಿಗೆ ಕಾರು ಖರೀದಿಯನ್ನು ಇನ್ನಷ್ಟು ಸುಲಭಗೊಳಿಸಿದೆ.
Maruti WagonR EMI and On-Road Price Details 2025



