Business News

EMI ಕಟ್ಟಿಲ್ವಾ? ಕ್ರೆಡಿಟ್ ಸ್ಕೋರ್ ಕಡಿಮೆ ಆಗೋಕೂ ಮುನ್ನ ಈಗೆ ಮಾಡಿ

EMI ಸಮಯಕ್ಕೆ ಪಾವತಿಸದಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ತಡವಾದ ಪಾವತಿ ದಂಡ ಮತ್ತು ಹೆಚ್ಚುವರಿ ಬಡ್ಡಿ ಕೂಡ ವಿಧಿಸಲಾಗುತ್ತದೆ.

  • EMI ಪಾವತಿ ವಿಳಂಬವಾಗಿದರೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ
  • ಬ್ಯಾಂಕುಗಳು ತಡ ಪಾವತಿಗಳನ್ನು ಗಂಭೀರವಾಗಿ ಪರಿಗಣಿಸುತ್ತವೆ
  • ಕೆಲವು ಬ್ಯಾಂಕುಗಳು ದಂಡವನ್ನು ತಗ್ಗಿಸುವ ಅವಕಾಶ ಸಹ ನೀಡಬಹುದು

Missed EMI: ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಇಎಮ್‌ಐ ಪಾವತಿ ವಿಳಂಬವನ್ನು ತೀವ್ರವಾಗಿ ಪರಿಗಣಿಸುತ್ತವೆ. ತಡವಾದರೆ ಕ್ರೆಡಿಟ್ ಸ್ಕೋರ್ (Credit Score) ಮೇಲೆ ನೆಗೆಟಿವ್ ಪ್ರಭಾವ ಬೀರುತ್ತದೆ.

ಪಾವತಿ ವಿಳಂಬವಾದರೆ ತಕ್ಷಣವೇ ಸೂಕ್ತವಾದ ಕ್ರಮ ಕೈಗೊಳ್ಳುವುದು ಮುಖ್ಯ. ಕ್ರೆಡಿಟ್ ಸ್ಕೋರ್ (Credit Score) ಹಾಳಾಗದಂತೆ ನೋಡಿಕೊಳ್ಳುವುದು ನಿಮ್ಮ ಭವಿಷ್ಯದ ಹಣಕಾಸು ಇತಿಹಾಸಕ್ಕೆ ಬಹಳ ಮುಖ್ಯ.

EMI ಕಟ್ಟಿಲ್ವಾ? ಕ್ರೆಡಿಟ್ ಸ್ಕೋರ್ ಕಡಿಮೆ ಆಗೋಕೂ ಮುನ್ನ ಈಗೆ ಮಾಡಿ

ಇದನ್ನೂ ಓದಿ: ನಿರ್ಮಾಣ ಹಂತದ ಮನೆಗೂ ಸಿಗುತ್ತೆ ಹೋಂ ಲೋನ್! ಬ್ಯಾಂಕ್ ಬಂಪರ್ ಆಫರ್

ಬ್ಯಾಂಕುಗಳ ದಂಡ ಮತ್ತು ಬಡ್ಡಿ ರೀತಿ

ಪ್ರತಿಯೊಂದು ಬ್ಯಾಂಕ್ ತಡ ಪಾವತಿಗಳಿಗೆ ಭಿನ್ನ ಭಿನ್ನ ನೀತಿಗಳನ್ನು ಹೊಂದಿರುತ್ತದೆ. ಕೆಲವೆಡೆ ಕ್ರೆಡಿಟ್ ಕಾರ್ಡ್ (Credit Card) ಈಎಮ್‌ಐ ಬಾಕಿ ಇದ್ದರೆ ದಂಡ ಮತ್ತು ಹೆಚ್ಚುವರಿ ಬಡ್ಡಿಯನ್ನು ವಿಧಿಸಲಾಗುತ್ತದೆ.

  1. HDFC ಬ್ಯಾಂಕ್ – ₹100 ರಿಂದ ₹1,300 ವರೆಗೆ ದಂಡ
  2. Kotak ಬ್ಯಾಂಕ್ – 8% ದಂಡ ಮತ್ತು ಹೆಚ್ಚುವರಿ ಪತ್ತಿ
  3. ICICI ಬ್ಯಾಂಕ್ – ₹100 ರಿಂದ ₹1,000 ವರೆಗೆ ದಂಡ, ಬಾಕಿ ಇರುವ ದಿನಗಳಿಗೆ ಬಡ್ಡಿ

Credit Score

ಕ್ರೆಡಿಟ್ ಸ್ಕೋರ್ ಹಾನಿಯಾಗದಂತೆ ತಡೆಯುವುದು ಹೇಗೆ?

ಪಾವತಿ ತಡವಾದರೆ ಭವಿಷ್ಯದಲ್ಲಿ ಲೋನ್ (Loan) ಅಥವಾ ಕ್ರೆಡಿಟ್ ಕಾರ್ಡ್ (Credit Card) ಮಂಜೂರು ಆಗುವುದು ಕಷ್ಟವಾಗಬಹುದು. ಬ್ಯಾಂಕುಗಳು ಕೊನೆಯ 36 ತಿಂಗಳ ಪಾವತಿ ಇತಿಹಾಸವನ್ನು ಪರಿಶೀಲಿಸುತ್ತವೆ. ಆದ್ದರಿಂದ ಪಾವತಿಗಳನ್ನು ನಿರಂತರವಾಗಿ ಮಾಡುವುದು ಬಹಳ ಮುಖ್ಯ.

ಇದನ್ನೂ ಓದಿ: ಯಾವುದೇ ಬ್ಯಾಂಕ್‌ನಲ್ಲಿ ಸಾಲ ಮಾಡಿದವರಿಗೆ ರಾತ್ರೋ-ರಾತ್ರಿ ಭರ್ಜರಿ ಸುದ್ದಿ

Credit Score

ಏನು ಮಾಡಬೇಕು?

ಈಎಮ್‌ಐ ಪಾವತಿಸಲು ಸಾಧ್ಯವಾಗದೇ ಇದ್ದರೆ ತಕ್ಷಣವೇ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರ (Customer Care) ಸಂಪರ್ಕಿಸಿ. ಕೆಲವೊಂದು ಬ್ಯಾಂಕುಗಳು ದಂಡವನ್ನು ತಗ್ಗಿಸಬಹುದು ಅಥವಾ ವಜಾ ಮಾಡಬಹುದು. ಕೆಲವು ಸಂಸ್ಥೆಗಳು ಬಡ್ಡಿ ಮತ್ತು ತೆರಿಗೆ ಕಡಿಮೆ ಮಾಡುವ ಅವಕಾಶ ನೀಡಬಹುದು.

ಇದನ್ನೂ ಓದಿ: ಈ ಸ್ಟೇಟ್ ಬ್ಯಾಂಕ್ ಯೋಜನೆಯಲ್ಲಿ ಸುಮ್ನೆ ಕೂತೇ ಹಣ ಗಳಿಸಬಹುದು!

ಹೌದು, ಹಲವು ಬ್ಯಾಂಕುಗಳು ನಿಮ್ಮ EMI ಪಾವತಿ ತಡವಾದಾಗ ನಿಮಗೆ ಈ ಅವಕಾಶ ನೀಡುತ್ತವೆ, ಆರ್ ಬಿ ಐ ಸೂಚನೆಯಂತೆ ಕೇವಲ ಒಂದೆರಡು ಪಾವತಿಗಳಿಗೆ ನಿಮ್ಮ ಕ್ರೆಡಿಟ್ ಸ್ಕೋರ್ ಧಿಡೀರ್ ಕಡಿಮೆ ಮಾಡುವಂತಿಲ್ಲ. ಆದರೆ ನೀವು ಬ್ಯಾಂಕ್ ಸಂಪರ್ಕಿಸಿ, ಈ ಬಗ್ಗೆ ಮನವಿ ಮಾಡಬೇಕು.

ಇನ್ನು ಸಾಲ ಪಡೆದ ನಂತರ ಅದರ ತಿಂಗಳ ಪಾವತಿ ಸರಿಯಾಗಿ ನಿರ್ವಹಿಸಿದರೆ ಮುಂದಿನ ನಿಮ್ಮ ಹಣಕಾಸು ಇತಿಹಾಸ ಉತ್ತಮವಾಗಿರುತ್ತದೆ, ಅಲ್ಲದೆ ಮುಂದಿನ ನಿಮ್ಮ ಲೋನ್ ಪ್ರಕ್ರಿಯೆಗಳು ಸುಲಭವಾಗುತ್ತದೆ, ಅಲ್ಲದೆ ನಿಮಗೆ ಪಾವತಿಸಲು ಸಾಧ್ಯವಾಗುವಷ್ಟು ಮಾತ್ರ ಸಾಲದ (Loan) ಮೊರೆ ಹೋಗುವುದು ಉತ್ತಮ.

Missed EMI Impact On Credit Score

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories