ಇಂಟರ್ನೆಟ್ ಇಲ್ಲದಿದ್ದರೂ ಮಾಡಬಹುದು ಮನಿ ಟ್ರಾನ್ಸ್ಫರ್! ಇಲ್ಲಿದೆ ವಿಧಾನ
- ಇಂಟರ್ನೆಟ್ ಇಲ್ಲದೆಯೂ ಮಾಡಬಹುದು ಯುಪಿಐ ಪೇಮೆಂಟ್
- ಮೊಬೈಲ್ ಒಂದಿದ್ರೆ ಸಾಕು ಆಫ್ಲೈನ್ ನಲ್ಲಿಯೂ ಪೇಮೆಂಟ್ ಮಾಡಬಹುದು
- ಜಿಯೋ ಕಂಪನಿಯ ನೆಟ್ವರ್ಕ್ ನಲ್ಲಿ ಈ ಸೌಲಭ್ಯ ಇಲ್ಲ
ನೀವು ಡಿಜಿಟಲ್ ಮೂಲಕವೇ ಪೇಮೆಂಟ್ ಮಾಡುವವರಾಗಿದ್ದರೆ ಯುಪಿಐ ಬಳಸುವವರಾಗಿದ್ದರೆ ಇಂಟರ್ನೆಟ್ (Internet) ಇಲ್ಲದೆ ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಿಲ್ಲ ಅಂತ ಇನ್ನು ಮುಂದೆ ಯೋಚಿಸಲೇಬೇಡಿ.
ಇಂಟರ್ನೆಟ್ ಇಲ್ಲದೆ ಇದ್ದರೂ ಆಫ್ ಲೈನ್ ನಲ್ಲಿಯೇ ಎಲ್ಲಾ ರೀತಿ ಹಣಕಾಸಿನ ವ್ಯವಹಾರ ಮಾಡುವುದಕ್ಕೆ NPCI ಅವಕಾಶ ಮಾಡಿಕೊಡುತ್ತಿದೆ. ನಿಮ್ಮ ಕೈಯಲ್ಲಿ ಮೊಬೈಲ್ ಇದ್ರೆ ಸಾಕು, ಬ್ಯಾಂಕ್ ಅಕೌಂಟ್ (Bank Account) ಜೊತೆಗೆ ನಿಮ್ಮ ಮೊಬೈಲ್ ಸಂಖ್ಯೆ ನೋಂದಾಯಿಸಿಕೊಂಡಿದ್ದರೆ ಸುಲಭವಾಗಿ ಇಂಟರ್ನೆಟ್ ಇಲ್ಲದೆ ಪೇಮೆಂಟ್ ಮಾಡಬಹುದು.
ಇಂಟರ್ನೆಟ್ ಇಲ್ಲದೆಯೂ ಮಾಡಬಹುದು ಪೇಮೆಂಟ್!
ಇದು ಡಿಜಿಟಲ್ ಯುಗ. ಈಗ ಮೊದಲಿನಂತೆ ಯಾರು ಮನೆಯಿಂದ ಹೊರಡುವಾಗ ಪರ್ಸ್ ತೆಗೆದುಕೊಂಡು ಹೋಗುವುದಿಲ್ಲ. ಅದರ ಬದಲು ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ (Smartphone) ಇಟ್ಟುಕೊಳ್ಳುತ್ತಾರೆ. ಯಾವುದೇ ರೀತಿಯ ಪೇಮೆಂಟ್ ಮಾಡುವುದಿದ್ದರೂ ಬೇರೆಯವರಿಗೆ ಹಣ ಟ್ರಾನ್ಸ್ಫರ್ ಮಾಡುವದಿದ್ದರೂ ಮೊಬೈಲ್ ರಿಚಾರ್ಜ್ ಬಿಲ್ ಪೇಮೆಂಟ್ ಹೀಗೆ ಪ್ರತಿಯೊಂದು ಯುಪಿಐ ಮೂಲಕ ಹಣಕಾಸಿನ ವ್ಯವಹಾರವನ್ನು ಮಾಡುತ್ತೇವೆ.
ಆದರೆ ಇದಕ್ಕೆಲ್ಲ ಇಂಟರ್ನೆಟ್ ಬೇಕು ಎನ್ನುವುದು ಗೊತ್ತಿರುವ ವಿಚಾರ. ಆದರೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಇಂಟರ್ನೆಟ್ ಇಲ್ಲದೆಯೂ ಹಣಕಾಸಿನ ವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಮೊಬೈಲ್ ನಲ್ಲಿ USSD ಕೋಡ್ ಬಳಸಿ ಯಾರಿಗೆ ಬೇಕಾದ್ರೂ ಪೇಮೆಂಟ್ ಮಾಡಬಹುದು.
ಇಂಟರ್ನೆಟ್ ಇಲ್ಲದೆ ಪೇಮೆಂಟ್ ಮಾಡುವುದು ಹೇಗೆ!
* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ *99# ಸಂಖ್ಯೆಯನ್ನು ಡಯಲ್ ಮಾಡಿ
* ನಿಮಗೆ ಬೇಕಾಗಿರುವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು
* ನಂತರ ನೀವು ಹಣ ಪಾವತಿ ಮಾಡಬೇಕೆ ಅಥವಾ ಅಕೌಂಟ್ ಪರಿಶೀಲಿಸಬೇಕೇ ಅಥವಾ ಬೇರೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರ ಮಾಡಬೇಕೇ ಎನ್ನುವ ಆಯ್ಕೆಯನ್ನು ಮಾಡಬೇಕು.
* ಹಣವನ್ನು ಟ್ರಾನ್ಸ್ಫರ್ ಮಾಡಲು ಒಂದನ್ನು ಒತ್ತಿ.
* ಈಗ ಯಾರಿಗೆ ಪೇಮೆಂಟ್ ಮಾಡಬೇಕು ಅವರ ಮೊಬೈಲ್ ಸಂಖ್ಯೆ, ಯುಪಿಐ ಐಡಿ, ಸೇವ್ ಮಾಡಿಕೊಂಡಿರುವ ಹೆಸರು ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಅಮೌಂಟ್ ಹಾಕಿ ಪೇಮೆಂಟ್ ಮಾಡಬೇಕು.
* ಕೊನೆಯ ಹಂತವಾಗಿ ಯುಪಿಐ ಪಿನ್ ಅನ್ನು ಹಾಕಿದರೆ ಪೇಮೆಂಟ್ ಆಗುತ್ತದೆ.
ಇನ್ನು ಸದ್ಯ ಆಫ್ಲೈನ್ ಪೇಮೆಂಟ್ (Offline Payment) ರಿಲಯನ್ಸ್ ಜಿಯೋ ಕಂಪನಿಯ ನೆಟ್ವರ್ಕ್ ಹೊರತುಪಡಿಸಿ ಬೇರೆ ಎಲ್ಲಾ ಟೆಲಿಕಾಂ ನೆಟ್ವರ್ಕ್ ಅಡಿಯಲ್ಲಿ ಮಾಡಿಕೊಳ್ಳಬಹುದು. ಮೊಬೈಲ್ ನಲ್ಲಿ ಹಣಕಾಸಿನ ವ್ಯವಹಾರ ಮಾಡುವ ಜನರಿಗೆ ಇದು ಹೆಚ್ಚು ಅನುಕೂಲಕರವಾಗಿದ್ದು ಇಂಟರ್ನೆಟ್ ಇಲ್ಲದೆಯೂ ತುರ್ತುಪರಿಸ್ಥಿತಿಯಲ್ಲಿ ಪೇಮೆಂಟ್ ಮಾಡಬಹುದು.
Money Transfer Without Internet, Here’s How